ಕರ್ನಾಟಕ ರಾಜ್ಯ ಬರಹಗಾರರ ಸಂಘ(ರಿ) ಹೂವಿನ ಹಡಗಲಿಯ ಅಧ್ಯಕ್ಷರಾಗಿ ಮಧುನಾಯ್ಕ ಲಂಬಾಣಿ ಮರು ಆಯ್ಕೆ

0
106

ದಿನಾಂಕ:-೧೬.೦೩.೨೦೨೫ ಕ್ಕೆ ಶಿವಮೊಗ್ಗದ ಕರ್ನಾಟಕ ಸಂಘದ ಭವನದಲ್ಲಿ ನಡೆದ ಕರ್ನಾಟಕ ರಾಜ್ಯ ಬರಹಗಾರರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಮುಂದಿನ ೫ ವರ್ಷಗಳ ಅವಧಿಗೆ ಮಧು ನಾಯ್ಕ ಲಂಬಾಣಿಯವರನ್ನು ಮರು ಆಯ್ಕೆ ಮಾಡಲಾಯಿತು.

ಸಂಘವು ತಮ್ಮ ೫ ವರ್ಷದ ಅವಧಿಯಲ್ಲಿ ಹಲವಾರು ನೂತನ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸಿ ಕರ್ನಾಟಕ ರಾಜ್ಯದ ಮನೆ ಮಾತಾಗಿದೆ. ಕೇವಲ ಸಾಹಿತ್ಯ ಕೃಷಿಗಾಗಿ ಸೀಮಿತವಾಗಿರದೇ ರೈತರಿಗೆ ಸಲಹೆ, ಆರೋಗ್ಯ ಮಾಹಿತಿ, ಸೈನಿಕರಿಗೆ ಗೌರವ, ರಾಜ್ಯ ಮತ್ತು ರಾಷ್ಟ್ರಮಟ್ಟದ ಹಲವಾರು ಕಾರ್ಯಗಳನ್ನು ಹಲವಾರು ಆಸಕ್ತರ ಜಿಲ್ಲಾ ಅಧ್ಯಕ್ಷರ ಸಹಕಾರದಿಂದ ನಡೆಸುತ್ತಾ ಬಂದು ಸಂಘವನ್ನು ಇಷ್ಟು ಎತ್ತರಕ್ಕೆ ತಂದ ಕೀರ್ತಿ ಮಧುನಾಯ್ಕ ಲಂಬಾಣಿ ರವರಿಗೆ ಸಲ್ಲುತ್ತದೆ ಎ೦ದು ಗೌರವ ಅಧ್ಯಕ್ಷ ಗೂರೂರು ಅನಂತರಾಜು ಸಭೆಯಲ್ಲಿ ಮಧು ನಾಯ್ಕ ಲಂಬಾಣಿ ಅವರ ಕಾರ್ಯ ವೈಖರಿಯನ್ನು ಶ್ಲಾಘಿಸಿದರು.

ಇನ್ನೂ ೫ ವರ್ಷಗಳ ಕಾಲ ಮಧುನಾಯ್ಕ ಲಂಬಾಣಿಯವರೇ ಅಧ್ಯಕ್ಷರಾಗಿ ಮುಂದುವರೆಯಲಿ ಎಂದು ಕಾರ್ಯಕಾರಿ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಧುನಾಯ್ಕ ಲಂಬಾಣಿ ಇವರ ಕಾರ್ಯವೈಖರಿ ಕುರಿತು ಎಲ್ಲಾ ಜಿಲ್ಲಾ ಅಧ್ಯಕ್ಷರು ಮಾತನಾಡಿ ನಿರಂತರವಾಗಿ ನಡೆಸಿಕೊಂಡು ಎಲ್ಲರನ್ನೂ ಪ್ರೀತಿಯಿಂದ ಗೆದ್ದು ರಾಜ್ಯಮಟ್ಟದಲ್ಲಿ ಈ ಸಂಘಟನೆ ಮಧುನಾಯ್ಕ ಲಂಬಾಣಿಯವರಿಂದ ಇಂದು ಇಷ್ಟು ಎತ್ತರಕ್ಕೆ ಬೆಳೆದು ನಿಂತಿದೆ ಎಂದು ಶ್ಲಾಘನೆ ಮಾಡಿ ಆಯ್ಕೆ ಮಾಡಿ ಅಭಿನಂದಿಸಿದರು.

ಸಂಘದ ಗೌರವ ಅಧ್ಯಕ್ಷರಾದ ಗೊರೂರು ಅನಂತರಾಜು, ಉಪಾಧ್ಯಕ್ಷರಾದ ಶ್ರೀಮತಿ ಬಸಮ್ಮ ಹಿರೇಮಠ ಹಾಗೂ ಶ್ರೀಮತಿ ಸುಜಾತ ಚಂದ್ರಧರನಾಯ್ಕ ಹಾಗೂ ರಾಜ್ಯಘಟಕದ ಪದಾಧಿಕಾರಿಗಳು ಹಾಗೂ ಎಲ್ಲಾ ಜಿಲ್ಲಾ ಅಧ್ಯಕ್ಷರು ಭಾಗವಹಿಸಿದ್ದರು.