ಸಿಂದಗಿ: ತಾಲೂಕಿನ ಗುಬ್ಬೇವಾಡ ಗ್ರಾಮದಲ್ಲಿ 110 ಕೆವ್ಹಿ ಕೆಇಬಿ ಸ್ಟೇಷನ್ ಮಂಜೂರಾಗಿದ್ದು, ಅಗತ್ಯ ಜಮೀನು ಖರೀದಿಗೆ ಗೊಲಗೇರಿ ಜಿಪಂ ಸದಸ್ಯರ ಅನುದಾನದಲ್ಲಿ ರೂ.2ಲಕ್ಷ. ಹಾಗೂ ಮಾಜಿ ಶಾಸಕ ರಮೇಶ ಭೂಸನೂರ ಅವರು ವೈಯಕ್ತಿಕವಾಗಿ ರೂ. 50 ಸಾವಿರ ಹಾಗೂ ಬಿಜೆಪಿ ಯುವ ಮುಖಂಡ ಸಂತೋಷ ಪಾಟೀಲ ಡಂಬಳ 25 ಸಾವಿರ ಹಣ ನೀಡಿ ಜಮೀನು ಖರೀದಿಗೆ ಸಾಕ್ಷಿಯಾಗಿದ್ದಾರೆ.
ಗುಬ್ಬೇವಾಡ ಗ್ರಾಮದ ಹಿರಿಯರೊಂದಿಗೆ ಮಾತನಾಡಿ, ಹಲವಾರು ದಿನಗಳಿಂದ ಜಮೀನು ಖರೀದಿಗೆ ಹಣ ನೀಡದ ಕಾರಣ
ಖರೀದಿಯಾಗಿರಲಿಲ್ಲ. ಮಾಜಿ ಶಾಸಕ ರಮೇಶ ಭೂಸನೂರ ವೈಯಕ್ತಿಕ ಕಾಳಜಿ ವಹಿಸಿ ಜಿಪಂ ಸದಸ್ಯೆ ಮಹಾದೇವಿ ಪಾಟೀಲ ಡಂಬಳ ಅವರ ಅನುದಾನದಲ್ಲಿ ಎರಡು ಲಕ್ಷ. ರೂ. ನೀಡಿ ಜಮೀನು ನೀಡಿದವರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.
ಮಾಜಿ ಶಾಸಕ ರಮೇಶ ಭೂಸನೂರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರೈತರಿಗೆ ವಿದ್ಯುತ್ ಅವಶ್ಯಕತೆ ಬಹಳಷ್ಟಿದೆ ಗುಬ್ಬೇವಾಡ ಗ್ರಾಮಕ್ಕೆ 110 ಕೆವ್ಹಿ ಸ್ಟೇಷನ್ ಮಂಜೂರಾಗಿದ್ದು, ಜಮೀನು ಅಗತ್ಯವಿತ್ತು. ಅದನ್ನು ಮನವೊಲಿಸಿ ಪರಿಹಾರ ಮೊತ್ತ ನೀಡಲಾಗಿದೆ. ಆದಷ್ಟು ಬೇಗನೆ ಕಾರ್ಯಾರಂಭವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಈರಣ್ಣ ರಾವೂರ, ಸಂತೋಷ ಪಾಟೀಲ ಡಂಬಳ, ಶ್ರೀಶೈಲ ಚಳ್ಳಗಿ, ಗೌಡಣ್ಣ ಆಲಮೇಲ, ರಮೇಶ ಇಜೇರಿ, ಮಲ್ಲಪ್ಪ ಮಳ್ಳಿ, ಮುತ್ತುಗೌಡ ಪಾಟೀಲ ಸೇರಿದಂತೆ ಗುಬ್ಬೇವಾಡ ಗ್ರಾಮದ ಹಿರಿಯರು, ರೈತರು ಪಾಲ್ಗೊಂಡಿದ್ದರು.
ವರದಿ: ಪಂಡಿತ್ ಯಂಪೂರೆ, ಸಿಂದಗಿ