ಶಾಲೆಗೆ ಲ್ಯಾಪ್ ಟಾಪ್ ಕೊಡುಗೆ

0
74

ಮುನವಳ್ಳಿ ಪಟ್ಟಣದ ಸರಕಾರಿ ಪ್ರಾಥಮಿಕ ಉರ್ದು ಶಾಲೆ ನಂ2 ಗೆ ಶಾಲೆಯ ಕಂಪ್ಯೂಟರ್ ಉಪಯೋಗಕ್ಕಾಗಿ,ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರಾದ ದಾದೇಸಾಬ ಗಡಾದ ಹೊಸ ಗಣಕಯಂತ್ರ ಲ್ಯಾಪ ಟಾಪನ್ನು ದೇಣಿಗೆಯಾಗಿ ನೀಡಿದರು.

ಈ ಸಂದರ್ಭದಲ್ಲಿ ಶಾಲೆಯ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರಿಯಾಜ್ ಹಡಗಲಿ, ಉಪಾಧ್ಯಕ್ಷರಾದ ಚಿಕ್ಕುಂಬಿಯವರು ಹಾಗೂ ಎಲ್ಲ ಸದಸ್ಯರು, ಪುರಸಭೆ ಸದಸ್ಯರಾದ ಸಮೀವುಲ್ಲಾ ಚೂರಿಖಾನ ಮತ್ತು ಪ್ರಧಾನ ಗುರುಗಳಾದ ಎಂ, ಎಸ್.ಕೊಳಚಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಎಂ, ಎಸ್ ಹೊಂಗಲ ಮತ್ತು ಶಾಲೆಯ ಶಿಕ್ಷಕ ವೃಂದವು ಉಪಸ್ಥಿತರಿದ್ದರು.

ಕೊಡುಗೆ ನೀಡಿದ ದಾನಿಗಳಿಗೆ ಸಮೂಹ ಸಂಪನ್ಮೂಲ ವ್ಯಕ್ತಿ ಮೀರಾದೇವಿ ಮುರನಾಳ, ಮುನವಳ್ಳಿ ಹಾಗೂ ಯರಗಟ್ಟಿ ವಲಯದ ಸಮನ್ವಯ ಶಿಕ್ಷಣ ಶಿಕ್ಷಕರಾದ ವೈ ಬಿ ಕಡಕೋಳ ಅಭಿನಂದನೆ ಸಲ್ಲಿಸಿದ್ದಾರೆ.