spot_img
spot_img

ಕರ್ನಾಟಕದ ಎಲ್ಲ ಶಿಕ್ಷಕ ಬಂಧುಗಳು ಮತ್ತು ವಿದ್ಯಾರ್ಥಿಗಳ ಪ್ರತಿಭೆಗೆ ಅವಕಾಶ ನೀಡಲು ಯೂಟ್ಯೂಬ್ ಚಾನೆಲ್ ಪ್ರಾರಂಭ

Must Read

Talent focus teachers vision ಎಂಬ ಹೆಸರಿನ Youtube channel ಆರಂಭವಾಗಿದೆ .

ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ (ರಿ) ಮೈಸೂರು ವತಿಯಿಂದ ತುಮಕೂರಿನ ಶ್ರೀಸಿದ್ದಗಂಗಾ ಮಠದಲ್ಲಿ ನಡೆದ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನದ ಬೃಹತ್ ವೇದಿಕೆಯಲ್ಲಿ ಕರ್ನಾಟಕದ ಸರ್ವ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಪ್ರತಿಭೆಗಳನ್ನು ಅನಾವರಣ ಮಾಡಲು ಅವರುಗಳ ಸಾಧನೆಗಳನ್ನು ಪರಿಚಯಿಸುವ ಉದ್ದೇಶದಿಂದ ಪ್ರಾರಂಭವಾಗಿರುವ ಟ್ಯಾಲೆಂಟ್ ಫೋಕಸ್ ಟೀಚರ್ಸ್ ವಿಷನ್ ಎಂಬ ಹೆಸರಿನ ಯೂಟ್ಯೂಬ್ ಚಾನೆಲ್ ಅನ್ನು ಅಧಿಕೃತವಾಗಿ ಉದ್ಘಾಟಿಸಲಾಯಿತು.

ಈ ಶೈಕ್ಷಣಿಕ ಚಾನೆಲ್ಲನ್ನು ತುಮಕೂರಿನ ಹಿತ್ತಲಹಳ್ಳಿ ಮಠದ ಪೀಠಾಧ್ಯಕ್ಷರಾಗಿ ಷ. ಬ್ರ. ಡಾ..ಶ್ರೀ ಶ್ರೀ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮಿಗಳು ಹಾಗೂ ತುಮಕೂರು ಗ್ರಾಮಾಂತರ ಶಾಸಕರಾದ ಡಿ. ಸಿ. ಗೌರಿಶಂಕರ್ ಉದ್ಘಾಟಿಸಿದರು .

ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಚಲನಚಿತ್ರ ನಟ, ನಿರ್ಮಾಪಕ ಹಾಗೂ ಭಾರತ ಸಾರಥಿ ಪತ್ರಿಕೆಯ ಸಂಪಾದಕರಾದ ಗಂಡಸಿ ಸದಾನಂದಸ್ವಾಮಿ, ಚಲನಚಿತ್ರ ನಟ ಸಾಯಿಪ್ರಕಾಶ್, ಚಿತ್ರರಂಗದ ಹಿರಿಯ ನಟ ಕರಿಸುಬ್ಬು, ಹಿರಿಯ ರಾಜ್ಯ ಕಲಾವಿದರಾದ ಮೂಗೂರು ಎನ್. ಸುರೇಶ್, ಚಲನಚಿತ್ರ ನಿರ್ದೇಶಕ ನೀನಾಸಂ ಮಂಜು, ಚಲನಚಿತ್ರ ಸಾಹಿತಿ ಸೋಮೇಶ್ನ ನವೋದಯ… ಚಲನಚಿತ್ರ ನಟಿ, ನಿರ್ಮಾಪಕಿ ಇಳಾ ವಿಟ್ಲ ಸೇರಿದಂತೆ ಅನೇಕ ಚಲನಚಿತ್ರರಂಗದ ಕಲಾವಿದರು ಗಣ್ಯರು ಭಾಗವಹಿಸಿದ್ದರು.

ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಶಂಭುಲಿಂಗನಗೌಡ ಪಾಟೀಲ, ಸಂಘಟನಾ ಕಾರ್ಯದರ್ಶಿ ಪ್ರಮೀಳಾ ಬಿ ಕಾಮನಹಳ್ಳಿ, ಗುರುಕುಲ ಕಲಾ ಪ್ರತಿಷ್ಠಾನದ ರಾಜ್ಯಾಧ್ಯಕ್ಷರಾದ ಹುಲಿ ಯೂರುದುರ್ಗ ಲಕ್ಷ್ಮೀನಾರಾಯಣ, ರಾಜ್ಯ ಕಾರ್ಯಾಧ್ಯಕ್ಷರಾದ ಡಾ. ಶಿವರಾಜ್ ಗೌಡ, ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ನ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಪಿ. ಮಹೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಬಂಡೆ , ರಾಜ್ಯ ಉಪಾಧ್ಯಕ್ಷ ವಿ. ಜಿ. ಅಗ್ರಹಾರ,ರೇಖಾ ದಳವಾಯಿ.ಕೋಶಾಧ್ಯಕ್ಷ ಎನ್. ಚೆಲುವೇಗೌಡ. ರಾಜ್ಯ ತಾಂತ್ರಿಕ ವಿಭಾಗದ ಮುಖ್ಯಸ್ಥರಾದ ಚಂದ್ರಶೇಖರ್ ನಾಯ್ಕ ಮುಂತಾದವರು ರಾಜ್ಯಮಟ್ಟದ ಶಿಕ್ಷಕರ ಸಂಘಟನೆಗಳ ರಾಜ್ಯ ಪದಾಧಿಕಾರಿಗಳು..ಜಿಲ್ಲಾ ಹಾಗೂ ತಾಲ್ಲೂಕು ಹಂತದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆಯ ಪದಾಧಿಕಾರಿಗಳು ನೂರಾರು ಜನ ಶಿಕ್ಷಕ ಪ್ರತಿನಿಧಿಗಳು ಉಪಸ್ಥಿತರಿದ್ದರು.

ನವ್ಯ ಕನ್ ಸ್ಟ್ರಕ್ಷನ್ಸ್ ಹಾಗೂ ನವ್ಯ ಇಂಟೀರಿಯರ್ಸ್ ಬೆಂಗಳೂರು ಇದರ ಮುಖ್ಯಸ್ಥರಾದ ಶ್ರೀಮತಿ ಟಿ. ಎಸ್. ಭಾಗ್ಯಲಕ್ಷ್ಮಿ ಲಿಂಗರಾಜು, ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಆರ್.ಡಿ.ರವೀಂದ್ರ ಅವರು ಹಾಜರಿದ್ದರು. ಇವರೊಂದಿಗೆ ನಾಡಿನ ನೂರಾರು ಕ್ಲಸ್ಟರ್ ಗಳ ಸಂಪನ್ಮೂಲ ವ್ಯಕ್ತಿಗಳು ಸಾವಿರಾರು ಶಿಕ್ಷಕರುಗಳು ಹಾಜರಿದ್ದರು.

Talent focus teachers vision youtube channel ನ ಉದ್ದೇಶ:

ಕರ್ನಾಟಕದ ಪ್ರಾಥಮಿಕ, ಪ್ರೌಢಶಾಲೆಗಳ ಹಾಗೂ ಕಾಲೇಜು ಉಪನ್ಯಾಸಕರಿಗಾಗಿ ಪ್ರಾರಂಭವಾಗಿರುವ ಈ ಚಾನಲ್ ನಲ್ಲಿ ಶಿಕ್ಷಕರಲ್ಲಿ ಅಡಗಿರುವ ಎಲ್ಲಾ ಬಗೆಯ ಪ್ರತಿಭೆಗಳಿಗೆ ಬೃಹತ್ ವೇದಿಕೆ ಕಲ್ಪಿಸಲಾಗಿದೆ.

ಶಿಕ್ಷಕರ ಪ್ರತಿಭೆಗಳಾದ ಚಿತ್ರಕಲೆ, ನಾಟಕಾಭಿನಯ, ಭಾಷಣ, ಗಾಯನ, ಸಂಗೀತ, ಸಾಹಿತ್ಯ, ಕಥೆ, ಅಭಿನಯ ಗೀತೆ ಮುಂತಾದವುಗಳ ಪ್ರದರ್ಶನಕ್ಕೆ ಇಲ್ಲಿ ಹೇರಳ ಅವಕಾಶಗಳಿವೆ. ಜೊತೆಗೆ ಶಿಕ್ಷಕರ ಮಾದರಿ ಪಾಠಗಳು,, ವ್ಯಕ್ತಿತ್ವ ವಿಕಸನದ ನುಡಿಗಳು, ವಿವಿಧ ಬೋಧನೋಪಕರಣಗಳ ತಯಾರಿಕೆ ಹಾಗೂ ಬಳಕೆ ವಿಧಾನಗಳ ಬಗ್ಗೆ ತಿಳಿಸಿಕೊಡಲಾಗುತ್ತದೆ.

ಹಾಗೂ ಆಡಳಿತಾತ್ಮಕ ವಿಚಾರಗಳು, ಕೆಸಿಎಸ್ ಆರ್ ನಿಯಮ ಗಳು, ಸಿಸಿಎ ನಿಯಮಗಳುಹಾಗೂ ಮಾಹಿತಿ ಹಕ್ಕು ಕುರಿತು ಸಂಪೂರ್ಣ ಮಾಹಿತಿಯನ್ನು ಒದಗಿಸಲಾಗುತ್ತದೆ.ಜೊತೆಗೆ ಸರ್ಕಾರಿ ಆದೇಶಗಳ ವಿವರಣೆ, ಶೈಕ್ಷಣಿಕ ಸಂವಾದ, ವಿಚಾರ ಸಂಕಿರಣಗಳನ್ನು ನಡೆಸಲಾಗುತ್ತದೆ .

ಇವೆಲ್ಲವುಗಳ ಜೊತೆ ಜೊತೆಗೆ ಆನ್ಲೈನ್ ಸ್ಪರ್ಧೆಗಳನ್ನು ನಡೆಸಲಾಗುತ್ತದೆ.

ಮತ್ತು ನಗದು ಬಹುಮಾನಗಳನ್ನು ನೀಡಲಾಗುತ್ತದೆ. ಪ್ರಖ್ಯಾತ ಶಿಕ್ಷಣ ತಜ್ಞರ ಮಾರ್ಗದರ್ಶನದ ವಿಡಿಯೋಗಳು ಬಿಡುಗಡೆಯಾಗುತ್ತವೆ.

ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಅಡಗಿರುವ ಎಲ್ಲಾ ಬಗೆಯ ಪ್ರತಿಭೆಗಳಿಗೆ ಇಲ್ಲಿ ಅವಕಾಶ ನೀಡಲಾಗುತ್ತದೆ. ಸಾಧನೆ ಮಾಡಿರುವ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಉಪನ್ಯಾಸಕರನ್ನು ಪರಿಚಯಿಸಿ ಕೊಡಲಾಗುತ್ತದೆ. ಸಂದರ್ಶನದ ವ್ಯವಸ್ಥೆ ಕೂಡ ಕಲ್ಪಿಸಲಾಗುತ್ತದೆ.

ಈ ಎಲ್ಲವುಗಳಿಂದ ನಾಡಿನ ಸರ್ವ ಶಿಕ್ಷಕರು ವಿದ್ಯಾರ್ಥಿಗಳ ಪ್ರತಿಭೆಗಳನ್ನು ಪರಿಚಯಿಸುವ ಮಹತ್ವದ ಕಾರ್ಯಕ್ರಮಗಳು ಈ ಶೈಕ್ಷಣಿಕ ಚಾನೆಲ್ ನಲ್ಲಿ ಪ್ರಕಟಿಸಲಾಗುತ್ತದೆ ಈ ರೀತಿಯ ವಿಶಿಷ್ಟ ಚಾನೆಲ್ ನಾಡಿನ ಎಲ್ಲ ಶಿಕ್ಷಕರಿಗೂ ಉಪಯೋಗವಾಗುತ್ತದೆ.

ಈ ಶೈಕ್ಷಣಿಕ ಸಮ್ಮೇಳನ ಹಾಗೂ ಪ್ರಶಸ್ತಿ ವಿತರಣಾ ಸಮಾರಂಭದ ಜೊತೆಗೆ ಚಾನೆಲ್ ನ ಉದ್ಘಾಟನಾ ಕಾರ್ಯಕ್ರಮ ಅತ್ಯುತ್ತಮವಾಗಿ ಅರ್ಥಪೂರ್ಣವಾಗಿ ಮೂಡಿ ಬಂದಿತು.

- Advertisement -
- Advertisement -

Latest News

ಕೌಜಲಗಿ ಹೊಸ ತಾಲೂಕು ರಚನೆಗೆ ಸಂಪೂರ್ಣ ಬೆಂಬಲ- ಶಾಸಕ ಬಾಲಚಂದ್ರ ಜಾರಕಿಹೊಳಿ

ಎಲ್ಲರೂ ಸೇರಿ ಒಗ್ಗಟ್ಟಾಗಿ ಕೌಜಲಗಿಯನ್ನು ತಾಲೂಕು ಕೇಂದ್ರವನ್ನಾಗಿಸಲು ಪ್ರಯತ್ನಿಸೋಣ ಕೌಜಲಗಿ(ತಾ.ಗೋಕಾಕ): ಕೌಜಲಗಿ ಹೊಸ ತಾಲೂಕು ರಚನೆಗೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದು ಅರಭಾವಿ ಶಾಸಕ, ಕೆಎಮ್‍ಎಫ್...
- Advertisement -

More Articles Like This

- Advertisement -
close
error: Content is protected !!