spot_img
spot_img

ಕೇಂದ್ರ ಸಚಿವರ ಮೇಲೆ ಹಲ್ಲೆಗೆ ಮುಖಂಡ ಗುಂಡು ರೆಡ್ಡಿ ತೀವ್ರ ಖಂಡನೆ

Must Read

ಬೀದರ – ಒಬ್ಬ ಕೇಂದ್ರ ಸಚಿವರ ಮೇಲೆ ಹಾಡುಹಗಲೇ ಹಲ್ಲೆ ನಡೆಯುವುದು ಅಂದರೆ ಇದೇನು ಸಣ್ಣ ವಿಷಯವೆ ? ಬೀದರ ಮತ್ತೊಂದು ಬಿಹಾರ ವಾಯಿತೆ ? ಎಂದು ಬಿಜೆಪಿ ಮುಖಂಡ ಗುಂಡುರೆಡ್ಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಅಮೃತ ಮಹೋತ್ಸವದ ಆಚರಣೆ ಸಂದರ್ಭದಲ್ಲಿ ಬಸವಕಲ್ಯಾಣದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಅವರ ಕಾರಿನ ಮೇಲೆ ದಾಳಿ ನಡೆಸಿದ ಬಿಜೆಪಿ ಕಾರ್ಯಕರ್ತರು ಹಾಗೂ ಶಾಸಕರ ವಿರುದ್ಧ ಅವರು ವಾಗ್ದಾಳಿ ನಡೆಸಿದರು.

ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಕೂಡ ಬಿಜೆಪಿ ಆಡಳಿತವೇ ಇದೆ ಆದರೂ ಇವರು ಬಡಿದಾಡುತ್ತಿದ್ದಾರೆ. ಕಾರ್ಯಾಂಗ ಶಾಸಕಾಂಗಗಳು ಆಯಿತು ಇನ್ನು ನ್ಯಾಯಾಂಗ ಒಂದಿದೆ ಅದನ್ನೂ ನಿಮ್ಮ ಸ್ವತ್ತು ಮಾಡಿಕೊಂಡು ಬಿಡಿ. ಇದೆಂಥ ಸರ್ವಾಧಿಕಾರಿ ಪ್ರವೃತ್ತಿ ಎಂದು ಪ್ರಶ್ನಿಸಿದರು.

ದಾಳಿ ಯಾಕೆ ನಡೆಯಿತು ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ತಾನೆ ಇರಬೇಕು, ತನ್ನದೆ ಸರ್ವಾಧಿಕಾರ ಇರಬೇಕು ಎಂಬ ಧೋರಣೆಯೇ ಕಾರಣ ಎಂದರು.

ಕೇಂದ್ರ ಸಚಿವರಿಗೆ ಯಾಕೆ ಜೈಕಾರ ನನಗಷ್ಟೇ ಜೈ ಕಾರ ಹಾಕಬೇಕು ಎಂದು ಶಾಸಕ ಶರಣು ಸಲಗಾರ ತಾಕೀತು ಮಾಡಿದ್ದಾರೆ ಎಂದು ಆರೋಪಿಸಿದ ಗುಂಡುರೆಡ್ಡಿ, ಇದು ಸರ್ವಾಧಿಕಾರಿ ಮನೋಧರ್ಮ ಎಂದರು.

ಕಾರ್ಯಕರ್ತರು ನಮ್ಮ ಶಕ್ತಿ ಅವರನ್ನು ಕಾಪಾಡಿಕೊಂಡು ಹೊಗುವುದು ನಮ್ಮ ಕರ್ತವ್ಯ ಎಂದು ಹೇಳಿ, ಶರಣು ಸಲಗಾರ ಕೇಂದ್ರ ಸಚಿವರಿಗೆ ಕೆಟ್ಟ ಪದ ಬಳಸಿದ್ದಾರೆ. ಬೇಕಾದರೆ ನೀವೇ ಸಾರ್ವಜನಿಕರನ್ನು ಕೇಳಿ ಯಾವ ಯಾವ ಕೆಟ್ಟ ಪದ ಸಚಿವರವಿರುದ್ಧ ಬಳಸಿದ್ದಾರೆ ಎಂಬುದನ್ನು ಎಂದರು.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ

ಯರಗಟ್ಟಿಃ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ೨೦೨೨-೨೩ ನೇ ಸಾಲಿನ ಯರಗಟ್ಟಿ ಹಾಗೂ ಮುರಗೋಡ ವಲಯಗಳ ವಿಕಲಚೇತನ ಮಕ್ಕಳ ಮೌಲಾಂಕನ ಶಿಬಿರ ಜರುಗಿತು. ಕಾರ‍್ಯಕ್ರಮದ...
- Advertisement -

More Articles Like This

- Advertisement -
close
error: Content is protected !!