ಸಿಂದಗಿ: ರಾಜ್ಯದಲ್ಲಿ ವಿಧಾನ ಸಭಾ ಚುನಾವಣೆಯ ಕಾವು ದಿನದಿನದಿಂದ ರಂಗೇರುತ್ತಿದಂತೆ ಸಿಂದಗಿಯಲ್ಲಿಯೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಬಾರಿ ಪೈಪೋಟಿ ಶುರುವಾಗಿದೆ.
ಇತ್ತೀಚೆಗಷ್ಟೆ ಚಾಂದಕವಟೆ ಗ್ರಾಮದ ಬಿಜೆಪಿ ಮುಖಂಡರಾದ ಗಾಣಿಗ ಸಮುದಾಯದ ಪ್ರಮುಖ ನಾಯಕರಾದ ಪ್ರವೀಣ ಕಂಟಿಗೊಂಡ, ಸಂತೋಷ ಕಂಟಿಗೊಂಡ, ಧರೆಪ್ಪ ಕಂಟಿಗೊಂಡ, ರಾಕೇಶ ಕಂಟಿಗೊಂಡ, ಪರಮಾನಂದ ಕಂಟಿಗೊಂಡ, ನಾಗಪ್ಪ ಕಂಟಿಗೊಂಡ ಅವರು ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಹಾಗೂ ಮುಖಂಡರಾದ ಬಸನಗೌಡ ಪಾಟೀಲ, ಗುರಣ್ಣಗೌಡ ಬಿರಾದಾರ, ತಮ್ಮನಗೌಡ ಪಾಟೀಲ ಇವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು,
ಈ ಸಂದರ್ಭದಲ್ಲಿ ಪ್ರವೀಣ ಕಂಟಿಗೊಂಡ ಮಾತನಾಡಿ, ಗಾಣಿಗ ಸಮುದಾಯ ಒಂದೇ ಪಕ್ಷಕ್ಕೆ ಸೀಮಿತವಲ್ಲ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು ಎನ್ನುವ ಕಾಲವಿದು ಅದನ್ನು ಒಂದು ಪಕ್ಷಕ್ಕೆ ಅಂಟಿಕೊಂಡು ಅವರು ಮಾಡಿದ್ದೇ ಮಾರ್ಗ ಎನ್ನುವಂತೆ ನಡೆದುಕೊಳ್ಳುತ್ತಿದ್ದಾರೆ ಈ ಬಾರಿ ಸಿಂದಗಿಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ lಅಶೋಕ ಮನಗೂಳಿ ಅವರ ಪರವಾಗಿ ಕೆಲಸ ಮಾಡಿ ಅವರ ಗೆಲುವಿಗಾಗಿ ನಾವು ಪಾಲುದಾರರಾಗುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅವರೊಂದಿಗೆ ಕಬೂಲ ಮುಲ್ಲಾ, ಮಲಕಸಾಬ ಕಣ್ಣಿ, ಅರವಿಂದ ಕಂಟಿಗೊಂಡ, ಶಂಕ್ರೆಪ್ಪ ಬಿರಾದಾರ, ದೇವಪ್ಪ ಕಂಟಿಗೊಂಡ, ಮಲ್ಲಪ್ಪ ಕಂಟಿಗೊಂಡ, ಚಾಂದಸಾಬ ಮುಲ್ಲಾ, ಯಾಸೀನ ಚಟ್ಟರಕಿ, ಪರಮಾನಂದ ಗಾಳಿ, ಯಲ್ಲಾಲಿಂಗ ಬಮ್ಮನಳ್ಳಿ, ಶಿವಯೋಗೆಪ್ಪ ಸಾಲೋಟಗಿ, ಶಿವಶಂಕರ ಸಿನ್ನೂರ, ಬಾಬು ತಳವಾರ, ಶಂಕರಗೌಡ ಪಾಟೀಲ ಸೇರಿದಂತೆ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾದರು.