ಅಡಿಕೆಯಿಂದ ಅನೇಕ ರೋಗಗಳನ್ನು ತಡೆಗಟ್ಟಬಹುದು ಮತ್ತು ಗುಣಪಡಿಸಬಹುದು ಎಂದು ಸಾಬೀತಾಗಿದೆ. ಗಾಯ ಗುಣ ಮಾಡಲು ಹಲ್ಲು ಗಟ್ಟಿ ಮಾಡಲು ಜೀರ್ಣಶಕ್ತಿ ಹೆಚ್ಚಿಸಲು ಅದೇ ಏಕೆ ಕ್ಯಾನ್ಸರ್ ರೋಗ ನಿರೋಧಕಕ್ಕೆ ಮತ್ತು ಕ್ಯಾನ್ಸರ್ ಗುಣ ಮಾಡಲು ಸಹ ಹೊರಗೆ ಹಚ್ಚಲು ಮತ್ತೆ ಹೊಟ್ಟೆಗೆ ತೆಗೆದುಕೊಳ್ಳಲು ಉಪಯೋಗಿಸುವುದಕ್ಕೆ ಬರುತ್ತದೆ.
ಎಲೆ ಕ್ಯಾಲ್ಸಿಯಂ ದೇಹಕ್ಕೆ ಬೇಕಾಗುವಷ್ಟು ಒದಗಿಸುತ್ತದೆ ಜೊತೆಯಲ್ಲಿ ಕಫ ನೀರಾಗುತ್ತದೆ. ವೀಳ್ಯದೆಲೆ ಜೀರ್ಣಕಾರಿ. ನಮ್ಮಲ್ಲಿ ದೃಷ್ಟಿ ತೆಗೆಯಲು ಕಫ ನಿರಾಗಿಸಲು ಅರಿಶಿಣ ಕುಂಕುಮದ ಜೊತೆಯಲ್ಲಿ ಹೀಗೆ ಹತ್ತು ಹಲವರು ಶುಭಕಾರ್ಯಗಳಲ್ಲಿ ಎಲೆ ಅಡಿಕೆ ಸಂಪ್ರದಾಯ ಇದ್ದೇ ಇರುತ್ತದೆ.
ತುಂಬಾ ಮೆಡಿಸಿನ್ ಯುಕ್ತವಾಗಿರುತ್ತದೆ ಹಿಂದಿನ ನಾರನ್ನು ತೆಗೆದು ಉಪಯೋಗಿಸುವುದು ಒಳ್ಳೆಯದು ತೊಟ್ಟು ಅಥವಾ ದೇಟು ಮತ್ತು ಎಲೆಯ ತುದಿಯ ಭಾಗವನ್ನು ತೆಗೆದು ಸಾಧಾರಣವಾಗಿ ಉಪಯೋಗಿಸುತ್ತಾರೆ. ದಿನಕ್ಕೆ ಒಂದು ಕವಳ ಹಾಕುವುದರಿಂದ ಮಲಬದ್ಧತೆ ಉಂಟಾಗುವುದಿಲ್ಲ ಜೀರ್ಣಕ್ರಿಯೆಗೆ ತುಂಬಾ ಸಹಾಯಕಾರಿ ಇದರೊಂದಿಗೆ ತಂಬಾಕು ನಿಷಿದ್ಧ. ಮಲೆನಾಡಿನ ಮನೆಗಳಲ್ಲಿ ಕವಳದ ಬಟ್ಟಲು ಇರಲೇಬೇಕು.
ಇದು ಸಾಮರಸ್ಯದ ಸಂಕೇತ. ಕವಳ ಮೆಲ್ಲುತ್ತಾ ಮಾತನಾಡುವುದು ಮಲೆನಾಡಿನ ಸಂಪ್ರದಾಯ. ಆದರೆ ಇದರ ಜೊತೆಯಲ್ಲಿ ಸ್ವಲ್ಪ ಸುಣ್ಣವನ್ನು ಉಪಯೋಗಿಸಬೇಕು.
ಸುಣ್ಣವಿಲ್ಲದೆ ಎಲೆ ಅಡಿಕೆ ಹಾಕುವುದರಿಂದ ಬಾಯಿ ಮತ್ತು ತುಟಿ ಬಿಳಿಚಿ ಹೋಗುತ್ತದೆ. ಹೆಚ್ಚಾದರೆ ಕಾಮಾಲೆ ಬರುತ್ತದೆ. ಸುಣ್ಣವಿಲ್ಲದ ವೀಳ್ಯ ಬಣ್ಣವಿಲ್ಲದ ಮದುವೆ ಹೆಣ್ಣಿಲ್ಲದವನ ಮನೆವಾರ್ತೆ, ಮರಳೊಳಗೆ ಎಣ್ಣೆ ಹೊಯ್ದಂತಕ್ಕೂ ಸರ್ವಜ್ಞ.
ಸುಮನಾ ಮಳಲಗದ್ದೆ 9980182883.