ಸವದತ್ತಿ: ಇಲಾಖೆಯು ಪ್ರಸಕ್ತ ಶೈಕ್ಷಣಿಕ ವರ್ಷವನ್ನು ‘ಕಲಿಕಾ ಚೇತರಿಕೆ ವರ್ಷ’ ಎಂದು ಘೋಷಿಸಿ, ಕಲಿಕೆಗೆ ಹೆಚ್ಚಿನ ಒತ್ತು ನೀಡಲು ಅಗತ್ಯ ಕಾರ್ಯಕ್ರಮ ರೂಪಿಸಿರುವುದು ಸ್ವಾಗತಾರ್ಹ. ರಾಜ್ಯ ಸರ್ಕಾರದ ಈ ಮಹತ್ವಾಕಾಂಕ್ಷೆಯ ಕಾರ್ಯಕ್ರಮದ ಕಲ್ಪನೆಯು ವೈಜ್ಞಾನಿಕ ಮತ್ತು ಪ್ರಸ್ತುತ ಪರಿಸ್ಥಿತಿಯಲ್ಲಿ ಅತ್ಯವಶ್ಯಕವಾದ ಮಾದರಿಯಾಗಿದೆ. ಇದು ಶೈಕ್ಷಣಿಕ ವರ್ಷಾಂತ್ಯದಲ್ಲಿ ಮಗುವು ಮುಂದಿನ ತರಗತಿಗೆ ಆತ್ಮವಿಶ್ವಾಸ, ನಿರ್ದಿಷ್ಟ ಗುರಿ, ಕೌಶಲ ಹಾಗೂ ಉತ್ತಮ ಕಲಿಕಾಫಲಗಳೊಂದಿಗೆ ಮುನ್ನಡೆಯಲು ಸಹಕಾರಿಯಾಗಲಿದೆ. ಇದು ಮಕ್ಕಳ ಪೂರ್ವ ಕಲಿಕಾ ಜ್ಞಾನವನ್ನು ತಿಳಿಯಲು ಇರುವ ಸಾಧನವಾಗಿದೆ. ಇದು ಮಕ್ಕಳ ಕಲಿಕಾ ಅಗತ್ಯಗಳನ್ನು ತಿಳಿದುಕೊಳ್ಳುವುದರ ಜತೆಗೆ ಅದನ್ನು ಪೂರೈಸಲು ಯಾವ ರೀತಿ ಯೋಜನೆಗಳನ್ನು ಶಿಕ್ಷಕರು ಹಾಕಿಕೊಳ್ಳಬೇಕು ಎಂಬುದನ್ನು ನಿರ್ಧರಿಸಲು ಸಹಾಯ ಮಾಡುತ್ತದೆ”ಎಂದು ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕ ವೈ. ಬಿ. ಕಡಕೋಳ ತಿಳಿಸಿದರು.
ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿಕ್ಕ ಉಳ್ಳೀಗೇರಿ ಯಲ್ಲಿ ಕಲಿಕಾ ಚೇತರಿಕೆ ಕಾರ್ಯ ಕ್ರಮ ಕುರಿತು ಮಾತನಾಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ದಿನಾಂಕ 16 ಮೇ 2022 ರಿಂದ 31 ಮೇ 2022ರ ವರೆಗೆ ನಡೆದ ಮಳೆಬಿಲ್ಲು ಮಕ್ಕಳ ಹಬ್ಬ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಸರಕಾರಿ ಉನ್ನತೀಕರಿಸಿದ ಕನ್ನಡ ಪ್ರಾಥಮಿಕ ಶಾಲೆ ಚಿಕ್ಕ ಉಳ್ಳಿಗೇರಿ ಶಾಲೆಯಲ್ಲಿ ಮುಕ್ತಾಯಗೊಂಡಿತು.
ಈ ಸಂದರ್ಭದಲ್ಲಿ ಶಾಲೆಗೆ ಭೇಟಿ ನೀಡಿದ ಶ್ರೀಯುತ ವಾಯ್ ಬಿ ಕಡಕೋಳ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು ಸವದತ್ತಿ ಮುಕ್ತಾಯ ಸಮಾರಂಭ ಉದ್ದೇಶಿಸಿ ಮಾತನಾಡಿ ಮಕ್ಕಳಿಗೆ ಕಲಿಕಾ ಹಬ್ಬದ ಮಹತ್ವ ಹಾಗೂ ಮಳೆಬಿಲ್ಲು ಕಾರ್ಯಕ್ರಮದ ಯಶಸ್ವಿಗೆ ಕಾರಣೀಭೂತರಾದ ಮುದ್ದು ಮಕ್ಕಳಿಗೆ ಪ್ರೋತ್ಸಾಹ ನೀಡಿದರು ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರಾದ ಶ್ರೀಯುತ ಜೆ ಎ ನವಲೆ ಶ್ರೀಯುತ ಬಿ ಜಿ ಜನಕಟ್ಟಿ ಶ್ರೀಯುತ ಪಿ ಆಯ್ ಅಮಠೆ ಶ್ರೀಮತಿ ಎಸ್ ಕಟಗಿ ಶ್ರೀಯುತ ಎಸ್ಎಸ್ ಹುಡೇದ್ ಹಾಜರಿದ್ದು ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳನ್ನು ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು ಶಾಲೆಯ ಅಂತಿಮ ದಿನದಂದು ಶಾಲಾ ಸಿಂಗಾರ ಕುರಿತು ಕಾರ್ಯಕ್ರಮವನ್ನು ಮುಖ್ಯೋಪಾಧ್ಯಾಯ ರಾದ ಎಸ್. ಬಿ. ಗೂಳಪ್ಪನವರ ಅವರ ಮಾರ್ಗದರ್ಶನದಲ್ಲಿ ಏರ್ಪಡಿಸಲಾಗಿತ್ತು.