spot_img
spot_img

ಬೆಳಗಾವಿ ತಾಲ್ಲೂಕಿನ ಶಿಕ್ಷಕರಿಗೆ ಕಲಿಕಾ ಚೇತರಿಕೆ ತರಬೇತಿ

Must Read

ಬೆಳಗಾವಿ: ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರದ ವತಿಯಿಂದ 6 ರಿಂದ 7 ತರಗತಿ ಬೋಧಿಸುವ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಿಗೆ ಹಾಗೂ ಶಿಕ್ಷಕರಿಗೆ ಮುತಗಾ ಗ್ರಾಮದ ನ್ಯೂ ಇಂಗ್ಲಿಷ್ ಹೈಸ್ಕೂಲಿನಲ್ಲಿ *ಕಲಿಕಾ ಚೇತರಿಕೆ* ತರಬೇತಿಯ ಎರಡನೇ ಹಂತದ ಎರಡು ದಿನಗಳ ತರಬೇತಿಯು ಆರಂಭವಾಯಿತು.

ತರಬೇತಿಯನ್ನು ಕ್ಷೇತ್ರ ಸಂಪನ್ಮೂಲಕೇಂದ್ರದ ಸಮನ್ವಯಾಧಿಕಾರಿಗಳಾದ ಎಮ್ ಎಸ್ ಮೇದಾರ ರವರು ಸಸಿಗೆ ನೀರು ಎರೆಯುವ ಮೂಲಕ ಉದ್ಘಾಟನೆ ಮಾಡಿ ಮಾತನಾಡಿ, ಕಲಿಕಾ ಚೇತರಿಕೆ ಕಾರ್ಯಕ್ರಮದ ಉದ್ದೇಶ ವಿವರಿಸಿದರು.

ಕೋವಿಡ್ ಹಾಗೂ ಲಾಕ್ ಡೌನ್ ನಿಂದಾಗಿ ವಿದ್ಯಾರ್ಥಿಗಳು ಕಲಿಕೆಯಲ್ಲಿ ತೀರಾ ಹಿಂದುಳಿದಿರುವರು ಅವರಲ್ಲಿ ಕಲಿಕೆಯನ್ನು ವೃದ್ಧಿಸುವ ಸಲುವಾಗಿ 1 ರಿಂದ 9ನೇ ತರಗತಿ ವರೆಗಿನ ಎಲ್ಲಾ ಸರಕಾರಿ ಶಾಲಾ ಶಾಲಾ ವಿದ್ಯಾರ್ಥಿಗಳಿಗೆ ಇಡೀ ವರ್ಷ ಕಲಿಕಾ ಚೇತರಿಕೆ ಕಾರ್ಯಕ್ರಮ ನಡೆಯಲಿದೆ ಎಂದು ಎಸ್ ಎಮ್ ಮೇದಾರ ವಿವರಿಸಿದರು.

ಕಾರ್ಯಕ್ರಮದಲ್ಲಿ ತಾಲೂಕಾ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರಾದ ಬಸವರಾಜ ಸುಣಗಾರ ರವರು ಮಾತನಾಡಿ, ಮಕ್ಕಳ ಶೈಕ್ಷಣಿಕ ಸುಧಾರಣೆಗೆ ಸರಕಾರ ಹಾಗೂ ಶಿಕ್ಷಣ ಇಲಾಖೆ ರೂಪಿಸಿದ ಮಹತ್ವದ ಈ ಕಲಿಕಾ ಚೇತರಿಕೆಯ ಕಾರ್ಯಕ್ರಮವನ್ನು ಶಿಕ್ಷಕರು ಯಶಸ್ಸು ಮಾಡುವರೆಂದರು.

ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರತಿನಿಧಿ ಶ್ರೀಮತಿ ಶೈಲಾ ಕಡೆಮನಿ ಯವರು ಮಾತನಾಡಿ ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ವೇದಿಕೆ ಯಲ್ಲಿ ತಾಲೂಕಾ ಮುಖ್ಯ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಮಹಾದೇವ ಎಸ್ ಅಥಣಿ, ಕೋಶಾಧ್ಯಕ್ಷರಾದ ಬಿ ವಾಯ್ ಮಡಿವಾಳರ,ತರಬೇತಿ ನೋಡಲ್ ಅಧಿಕಾರಿ ಶ್ರೀಮತಿ ಗೀತಾ ಮಡಿವಾಳರ,ಬಿ ಆರ್ ಪಿ ಸುನಿಲ ಕುಟ್ರೆ, ಶ್ರೀಮತಿ ತಳವಾರ, ತಾಲೂಕಿನ ಬಿ ಆರ್ ಪಿ, ಸಿ ಆರ್ ಪಿ, ಯವರುಸಂಪನ್ಮೂಲವ್ಯಕ್ತಿಗಳು ಉಪಸ್ಥಿತರಿದ್ದರು ತಾಲೂಕಿನ ಸುಮಾರು 300ಕ್ಕಿಂತಲೂ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರು, ಶಿಕ್ಷಕರು ತರಬೇತಿಯಲ್ಲಿ ಭಾಗವಹಿಸಿರುವರು.

ತರಬೇತಿ ಕೇಂದ್ರಕ್ಕೆ ಭೇಟಿ:

ಇಂದು ನಡೆದ ತರಬೇತಿ ಕೇಂದ್ರಕ್ಕೆ ಸಿ ಟಿ ಇ ಕಾಲೇಜು ಪ್ರಾಚಾರ್ಯರಾದ ರಾಜೀವ ನಾಯಕ, ಡಿ ಡಿ ಪಿ ಐ ರವರಾದ ಬಸವರಾಜ ನಾಲವತವಾಡ, ಕ್ಷೇತ್ರ ಶಿಕ್ಷಣಾಧಿಕಾರಿ ಗಳಾದ ಆರ್ ಪಿ ಜುಟ್ಟನವರ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ತರಬೇತಿ ವೀಕ್ಷಣೆ ಮಾಡಿದರು.

- Advertisement -
- Advertisement -

Latest News

ಶಿಕ್ಷಕರ ಸೇವಾ ಪುಸ್ತಕ ಸರಿಪಡಿಸಲು “ಗುರುಸ್ಪಂದನ” ಕಾರ್ಯಕ್ರಮ ಆಯೋಜಿಸಿ; ಭೂಸನೂರ

ಸಿಂದಗಿ: ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸೇವಾ ಪುಸ್ತಕಗಳು  ಅಪೂರ್ಣವಾಗಿರುವ ಸೇವಾ ವಿವರ ಹಾಗೂ ಮಾಹಿತಿಯನ್ನು ಪೂರ್ಣಗೊಳಿಸಲು "ಗುರುಸ್ಪಂದನ" ಕಾರ್ಯಕ್ರಮವನ್ನು  ಆಯೋಜಿಸುವ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ...
- Advertisement -

More Articles Like This

- Advertisement -
close
error: Content is protected !!