ವಚನಕಾರ್ತಿಯರ ಕೊಡುಗೆ ಕುರಿತು ಉಪನ್ಯಾಸ

Must Read

ಬೆಳಗಾವಿ – ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಭವನ ಲಿಂಗಾಯತ ಸಂಘಟನೆ ಮಹಾಂತೇಶ ನಗರ ಬೆಳಗಾವಿಯಲ್ಲಿ ದಿನಾಂಕ 07.12.2025 ರಂದು ವಚನ ವಿಶ್ಲೇಷಣೆ ಮತ್ತು ಹನ್ನೆರಡನೆಯ ಶತಮಾನದ ವಚನಕಾರ್ತಿಯರ ಕೊಡುಗೆ ಕುರಿತು ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರದ ವಿಶ್ವಸ್ಥರಾದ ಶರಣೆ ಸುಧಾ ಪಾಟೀಲ ಅವರು ಉಪನ್ಯಾಸ ನೀಡಿದರು.

ತಮ್ಮ ಉಪನ್ಯಾಸದಲ್ಲಿ ಮೊದಲಿಗೆ ಬಸವಣ್ಣನವರು ಹೇಗೆ ಮಹಿಳೆಯರಿಗೂ ಸಹ ಪುರುಷರಿಗೆ ಸರಿಸಮಾನವಾಗಿ ಅವಕಾಶವನ್ನು ನೀಡಿದರು ಮತ್ತು ಅನುಭವ ಮಂಟಪ ದಲ್ಲಿ ವಾದ- ಸoವಾದ , ಚರ್ಚೆ ಗಳ ಮೂಲಕ ಅವರಿಗೆಲ್ಲರಿಗೂ ವಚನ ರಚನೆಯಲ್ಲಿ ತೊಡಗಿಸಿ ಕೊಳ್ಳಲು ಅವಕಾಶ ಕಲ್ಪಿಸಿ ದರು. ಬಸವಣ್ಣನವರ ದೃಷ್ಟಿಯಲ್ಲಿ ಹೆಣ್ಣು ಪ್ರತಿಭೆಯಲ್ಲಿ, ಬೌದ್ಧಿಕತೆಯಲ್ಲಿ ಪುರುಷನಷ್ಟೇ ಸರಿ ಸಮಾನಳು. ಜೀವನದ ಸಕಲ ವ್ಯವಹಾರದಲ್ಲಿ ಅವಳಷ್ಟು ಕುಶಾಗ್ರಮತಿ ಯಾರಿಲ್ಲ ಎನ್ನುವ ಅಭಿಮಾನದ ನುಡಿಗಳನ್ನು ಹೇಳುತ್ತಾ, ಆಗಿನ ಕಾಲದ ಒಟ್ಟು ವಚನಕಾರ್ತಿ ಯರಲ್ಲಿ 28 ಪ್ರಮುಖ ಮತ್ತು ಅವಿರಳ ವಚನಕಾರ್ತಿಯರ ಸಂಕ್ಷಿಪ್ತ ಪರಿಚಯ ಮತ್ತು ಅವರು ಬರೆದ ವಚನಗಳ ಸಾರವನ್ನು ಹಂಚಿಕೊಂಡರು.

ಬಹಳಷ್ಟು ಜನ ಶರಣೆಯರು ತಮ್ಮ ಗಂಡನ ಕಾಯಕವೆಂಬ ಹಣತೆಯಲ್ಲಿ ಎಣ್ಣೆಯಾಗಿ, ಬತ್ತಿಯಾಗಿ,ಪತಿಗೆ ಮಾರ್ಗ ಜ್ಯೋತಿಯಾಗಿದ್ದರು. ಅವರಲ್ಲೇ ಕೆಲವರು ಎಚ್ಚರ ತಪ್ಪಿದ ತಮ್ಮ ಗಂಡನನ್ನು ಸರಿದಾರಿಗೆ ತರಲು ಶ್ರಮಿಸಿ ಯಶಸ್ವಿಯಾಗಿದ್ದಾರೆ. ಕೆಲವು ಶರಣೆಯರು ತಮ್ಮ ಗಂಡನ ಹೆಸರನ್ನು ವಚನದ ಅಂಕಿತವಾಗಿಟ್ಟುಕೊಂಡರೆ ಮತ್ತೆ ಕೆಲವರು ತಮ್ಮ ಇಷ್ಟ ದೈವವನ್ನು ವಚನದ ಅಂಕಿತವಾಗಿ ಇಟ್ಟುಕೊಂಡಿದ್ದರು.

ಶರಣರು ತಮ್ಮ ವಚನಗಳಲ್ಲಿ ಪ್ರಚಲಿತ ವಿದ್ಯಮಾನಗಳ ವಿಮರ್ಶೆ,ಕಾಯಕ ಪ್ರೀತಿ, ಧರ್ಮ,ನಿಷ್ಠೆ, ಕರುಣೆ, ಮಾನವಿಯತೆ,ವಿಶ್ವಮಾನವ ಪರಿಕಲ್ಪನೆ, ನೇರನುಡಿ, ಆತ್ಮವಿಶ್ವಾಸದಿಂದ ವಚನಗಳನ್ನು ರಚಿಸಿರುವುದು ಕಂಡುಬರುತ್ತದೆ ಎಂದು ಹೇಳಿ ಅಕ್ಕಮಹಾದೇವಿ, ಗಂಗಾಂಬಿಕೆ, ನೀಲಾಂಬಿಕೆ,ಅಮುಗೆ ರಾಯಮ್ಮ, ಅಕ್ಕಮ್ಮ, ಅಕ್ಕನಾಗಮ್ಮ, ಆಯ್ದಕ್ಕಿ ಲಕ್ಕಮ್ಮ, ಕದಿರ ರೆಮ್ಮವ್ವೆ,ಕನ್ನಡಿ ಕಾಯಕದ ರೇಮವ್ವ, ಕಾಳವ್ವೆ,ಕಾಲಕಣ್ಣಿ ಕಾಮವ್ವ, ಮೋಳಿಗೆ ಮಹಾದೇವಿ ಕೊಟ್ಟಣದ ಸೋಮವ್ವ,ಕೇತ ಲಾದೇವಿ, ಗೊಗ್ಗವ್ವೆ, ದುಗ್ಗಳೆ, ಬೊಂತಾದೇವಿ, ಮಸಣಮ್ಮ, ರೇಕಮ್ಮ, ಲಿಂಗಮ್ಮ, ಲಕ್ಷ್ಮಮ್ಮ, ವೀರಮ್ಮ, ಸತ್ಯಕ್ಕ ಹೀಗೆ ಎಲ್ಲ ಶರಣೆಯರ ಪರಿಚಯವನ್ನು ಅತ್ಯುತ್ತಮವಾಗಿ ಮಾಡಿಕೊಟ್ಟರು.

ಪ್ರಾರಂಭದಲ್ಲಿ ಶರಣೆ ಲಕ್ಷ್ಮಿ ಜೇವಣಿ ಸಾಮೂಹಿಕ ಪ್ರಾಥ೯ನೆ ನಡೆಸಿಕೊಟ್ಟರು.ಮಹಾಂತೇಶ ಮೆಣಸಿನಕಾಯಿ, ಉಪನ್ಯಾಸಕರು ಪರಿಚಯಿಸಿದರು.ವಿ. ಕೆ .ಪಾಟೀಲ,ಲಕ್ಷೀ ಜವಣಿ, ಅಕ್ಕಮಹಾದೇವಿ ತೆಗ್ಗಿ, ಲಲಿತಾ ಪಾಟೀಲ, ಶಿವಕುಮಾರ ಪಾಟೀಲ ಶರಣ ಶರಣೆಯರು
ವಚನ ವಿಶ್ಲೇಷಣೆ ಮಾಡಿದರು.

ಲಕ್ಷೀಕಾಂತ ಗುರವ ದಾಸೋಹ ಸೇವೆಗೈದರು.ಸಂಗಮೇಶ ಅರಳಿ ನಿರೂಪಿಸಿದರು.ಸಿದ್ದಪ್ಪಾ ಸಾರಾಪೂರಿ, ಸದಾಶಿವ ದೇವರಮನಿ,ಶಶಿಭೂಷಣ ಪಾಟೀಲ, ಶಂಕರ ಗುಡಸ, ಬಸವರಾಜ ಕರಡಿಮಠ,ಸೋಮಶೇಖರ ಕಟ್ಟಿ, ಗುರಸಿದ್ದಪ್ಪ ರೇವಣ್ಣವರ, ಶoಕರಪ್ಪಾ ಮೆಣಸಗಿ, ಬಾಳಗೌಡ ದೊಡಬoಗಿ, ಸುರೇಶ ಹಂಜಿ,ಕಮ್ಮಾರ,ಪಾಟೀಲ,ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group