spot_img
spot_img

ಮೂಡಲಗಿಯ ಜಿಲ್ಲಾಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಕುರಿತು ವಿಷಯ ಮಂಡನೆ

Must Read

spot_img
- Advertisement -

ಮೂಡಲಗಿಯ ಆರ್.ಡಿ.ಎಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಪ್ರೊ. ಕೆ.ಜಿ. ಕುಂದಣಗಾರ ವೇದಿಕೆಯಲ್ಲಿ ಆಯೋಜಿಸಿದ 16ನೇ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ “ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ” ಪರಿಸರ ಕಾರ್ಯಕರ್ತ ಭಾಲಚಂದ್ರ ಜಾಬಶೆಟ್ಟಿ ಯವರು ಉಪನ್ಯಾಸ ನೀಡಿದರು.

8 ಶತಕೋಟಿ ಜನರಿಗೆ ಆಹಾರ ಭದ್ರತೆ, ನೀರಿನ ಭದ್ರತೆ ಹಾಗೂ ಪೋಷಕಾಂಶ ಭದ್ರತೆ ಒದಗಿಸುವುದು ಒಂದು ಬ್ರಹತ್ ಸಮಸ್ಯೆಯಾಗಿದ್ದು, ಮುಂದಿನ ದಿನಗಳಲ್ಲಿ ಕೃಷಿ ಹಾಗೂ ಕೃಷಿಕರಿಗೆ ಒಳ್ಳೆಯ ಅವಕಾಶಗಳು ದೊರೆಯಲಿದ್ದು ವೈಜ್ಞಾನಿಕ ಬೆಲೆ ದೊರೆತು ರೈತನ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ದಿ ಸಾಧ್ಯವೆಂದು ನುಡಿದರು.

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಇಂದು ಭಾರತವು ಇಡೀ ಜಗತ್ತಿನ ದೊಡ್ಡಣ್ಣನೆನಿದ ಹಾಗೆ, ಕೃಷಿ ಕ್ಷೇತ್ರವೂ ಸಹ ಆಧುನಿಕ ತಂತ್ರಜ್ಞಾನಗಳನ್ನು ಕ್ಷೇತ್ರಮಟ್ಟದಲ್ಲಿ ಅಳವಡಿಸಿ ವಿಶಿಷ್ಟ ಸಾಧನೆಗೈಯುವ ಕಾಲ ಸನ್ನಿಹಿತವಾಗಿದೆ.ಕೃಷಿ ಒಳಸುರಿಗಳನ್ನು ಹಿತಮಿತವಾಗಿ ಬಳಸಿ ಕ್ರಯಪರಿಣಾಮಕಾರಿ ತಂತ್ರಗಳನ್ನು ಬಳಸಿ, ಖರ್ಚುವೆಚ್ಚಗಳಲ್ಲಿ ಕಡಿತಗೊಳುಸುವದಲ್ಲದೆ, ಗರಿಷ್ಠ ಉತ್ಪಾದನೆ ಹಾಗೂ ಗುಣಮಟ್ಟದ ಇಳುವರಿ ಪಡೆಯುವುದರಿಂದ ಆರ್ಥಿಕ ಅಭಿವೃದ್ದಿಗಾಗಿ ನಾಂದಿ ಹಾಡುವುದರಿಂದ ಜಾಗತಿಕ ಆಹಾರ ಭದ್ರತೆ, ನೀರಿನ ಹಾಗೂ ಪೌಷ್ಟಿಕಾಂಶ ಭದ್ರತೆಯ ಸಲುವಾಗಿ ಕೈಜೋಡಿಸಲು ಕರೆ ನೀಡಿದರು,

- Advertisement -

ಇತ್ತೀಚೆಗೆ ಮುನ್ನೆಲೆಗೆ ಬಂದಿರುವ ಆಯ್.ಓ.ಟಿ. (ಇಂಟರನೆಟ್ ಆಫ್ ಥಿಂಗ್ಸ್), ಉಪಗ್ರಹ ಆಧಾರಿತ, ಡ್ರೋಣ್ ಆಧಾರಿತ ಮಾಹಿತಿ ತಂತ್ರಜ್ಞಾನ ಆಧಾರಿತ ಆಧುನಿಕ ತಂತ್ರಗಳನ್ನು ಕೃಷಿಯಲ್ಲಿ ಅಳವಡಿಸುವುದರಿಂದ, ಒಳಸುರಿಗಳ ವೆಚ್ಚಗಳನ್ನು ಕಡಿತಗೊಳಿಸಿ, ಉತ್ತಮ ಗುಣಮಟ್ಟದ ಹೆಚ್ಚು ಇಳುವರಿ ಪಡೆಯುವುದರಿಂದ ಆರ್ಥಿಕ ಪ್ರಗತಿ ಸಾಧಿಸಬಹುದು.ಈ ತಂತ್ರಗಳನ್ನು ಅಳವಡಿಸಿ ದೂರಸಂವೇದಕಗಳ ಮೂಲಕ ಪಡೆಯುವ ಮಾಹಿತಿಗಳನ್ನಾಧರಿಸಿ ಬೆಳೆಗಳಿಗೆ ಕಾಲ ಕಾಲಕ್ಕೆ ಬೇಕಾಗುವ ನೀರು, ಪೋಷಕಾಂಶ, ಕೀಟನಾಶಕ, ಕಳೆ ನಿಯಂತ್ರಿಸುವ ಕ್ರಮಕೈಗೊಳ್ಳುವುದರಿಂದ ಶ್ರಮ ಕಡಿತಗೊಳ್ಳುವದು.ಮಣ್ಣಿನ ಪಿಎಚ್, ಲಭ್ಯವಿರುವ ತೇವಾಂಶ, ಪೋಷಕಾಂಶಗಳ ಲಭ್ಯತೆ, ವಾತಾವರಣದ ಉಷ್ಣತೆ, ಗಾಳಿಯಲ್ಲಿರುವ ತೇವಾಂಶ, ಮಳೆ ಕುರಿತಾದ ಮುನ್ಸೂಚನೆ ನೀಡಿ ರೈತನಿಗೆ ಸಹಾಯಮಾಡುತ್ತದೆ.ಸೂಕ್ತ ಪ್ರಮಾಣದ ಒಳಸುರಿಗಳಿಂದಾಗಿ ಹಸಿರು ಅನಿಲಗಳು ಉತ್ಪದನೆಗೊಳ್ಳುವುದನ್ನು ತಡೆದು ಭೂಮಿ, ನೀರು ಹಾಗೂ ಗಾಳಿಯ ಕಲುಷಿತತೆಯನ್ನು ತಡೆಯಲು ಸಹಕಾರಿ ಎಂದರು.

ಹಸಿರು ಮನೆಗಳ ಬಳಕೆ ತತಿ ಪೂರ್ವ ಕಾಲದಲ್ಲಿ ಸಸಿಗಳನ್ನು ಬೆಳೆಯುವುದಕ್ಕೆ ಮಾತ್ರ ಸೀಮಿತಗೊಂಡಿದ್ದು ಈ ತಂತ್ರಗಳ ಅಳವಡಿಕೆಯಿಂದ ವರ್ಷವಿಡಿ ವಿವಿಧ ಬೆಳೆಗಳನ್ನು ಬೆಳೆಯಲು ಸಾಧ್ಯವಾಗತೊಡಗಿದೆ.ಹೈಡ್ರೋಫೋನಿಕ್, ಏರೋಫೋನಿಕ್ಸ್, ಮಲ್ಟಿಲೇಯರ್ ಫಾರ್ಮಿಂಗ್ (ಬಹು ಶ್ರೇಣಿ), ಗಳ ಮೂಲಕ ನಿಗದಿತ ಸ್ಥಳಗಳಲ್ಲಿ ಏಕಕಾಲದಲ್ಲಿ ನಾಲ್ಕೈದು ಬೆಳೆಗಳನ್ನು ಬೆಳೆದು ವರ್ಷವಿಡಿ ಆಹಾರ ಉತ್ಪಾದಿಸಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ!ಕಬ್ಬಿನ ಸೋಗೆ ಹಾಗೂ ಇನ್ನಿತರ ಕೃಷಿತ್ಯಾಜ್ಯವನ್ನು ಸುಡುವ ಪ್ರವೃತ್ತಿ ಯನ್ನು ನಿಲ್ಲಿಸಲು ಅವರು ಸಲಹೆ ನೀಡಿದರು.

ಕೃಷಿಭೂಮಿಯಲ್ಲಿನ ತ್ಯಾಜ್ಯ ಸುಡುವುದರಿಂದ ಭೂಮಿಗೆ ದರಿದ್ರತನ ಬರುತ್ತದೆಯೆಂದು ದಶಲಕ್ಷ್ಮಿಯರ ಕಥೆ ಹೇಳಿ ಮಾರ್ಮಿಕವಾಗಿ ತ್ಯಾಜ್ಯ ಸುಡುವುದರಿಂದಾಗುವ ಅನಾಹುತಗಳನ್ನು ಎಳೆಎಳೆಯಾಗಿ ವಿವರಿಸಿದರು.

- Advertisement -

ಕೃಷಿಭೂಮಿಯಲ್ಲಿ ತ್ಯಾಜ್ಯದಿಂದ, ಪರಿಸರ ಸ್ನೇಹಿ ಸೂಕ್ಷ್ಮಾಣುಗಳಾದ ಲ್ಯಾಕ್ಟೋ ಬ್ಯಾಸಿಲಸ್, ಯೀಷ್ಟ, ಆ್ಯಕ್ಟಿನೋಮೃಸೀಟ್ಸ, ಫಿಲಾಮೆಂಟಸ್ ಫಂಗೈ, ಹಾಗೂ ಫೋಟೋಸಿಂಥೆಟಿಕ್ ಬ್ಯಾಕ್ಟೀರಿಯಾ ಬಳಕೆ ಜೈವಿಕ ತಂತ್ರಜ್ಞಾನವಾದ “ಅಮೃತ ಸಿಂಚನ” ಅಳವಡಿಕೆಯಿಂದ ಜೈವಿಕ ಗೊಬ್ಬರ ತಯಾರಿಕೆ ಹಾಗೂ ಶೂನ್ಯವೆಚ್ಚದ ಎರೆಗೊಬ್ಬರ ಸಿದ್ಧಪಡಿಸಿ ಬಳಸುವುದರಿಂದ ಭೂಮಿಯ ಫಲವತ್ತತೆ ಹೆಚ್ಚಿಸುವುದಲ್ಲದೆ, ಗೊಬ್ಬರ ಖರೀದಿಸುವುದು ತಪ್ಪಿ ಹಣದ ಉಳಿತಾಯವಾಗುತ್ತದೆಯೆಂದರು.

ಇಷ್ಟೊಂದು ಅಗಾಧ ಪ್ರಮಾಣಗಳ ಮಾಹಿತಿ ಸಂಗ್ರಹಣೆಗಾಗಿ ಬಹಳಷ್ಟು ದೊಡ್ಡ ಪ್ರಮಾಣದಲ್ಲಿ ಖರ್ಚುವೆಚ್ಚಗಳಾಗುತ್ತದೆನ್ನುವ ಮಾತಿಗೆ ಪುಷ್ಟಿಕೊಡುವ ಅವಶ್ಯಕತೆಯಿಲ್ಲ, ಯಾಕೆಂದರೆ, ಕಡಿಮೆ ವೆಚ್ಚದಲ್ಲಿ ಕೃಷಿ ಆ್ಯಪ್ಗಳು ಮಾರಕಟ್ಟೆಯಲ್ಲಿ ಲಭ್ಯವಿವೆ. ಅವುಗಳಲ್ಲಿ ಜಿಯೋ-ಕೃಷಿ ಆ್ಯಪ್ ಹಾಗೂ ಕಿಟ್ ಅಳವಡಿಕೆಯಿಂದ ಕಡಿಮೆ ಸಂಪನ್ಮೂಲಗಳನ್ನು ಬಳಸಿ ಗರಿಷ್ಠ ಪ್ರಮಾಣದ ಉತ್ತಮ ಗುಣಮಟ್ಟದ ಇಳುವರಿ ಪಡೆಯಲು ಸಾಧ್ಯವೆಂದು ವಿವರಿಸಿದರು.

ಆಧುನಿಕ ಕೃಷಿ ತಂತ್ರಜ್ಞಾನ ಅಳವಡಿಕೆಯಿಂದ ರೈತನ ಸಂಕಷ್ಟಗಳು ಪರಿಹಾರವಾಗಿ ಜಾಗತಿಕ ಆಹಾರ, ನೀರು, ಹಾಗೂ ಪೋಷಕಾಂಶಗಳ ಭದ್ರತೆಗೆ ದಾರಿಯಾಗಲಿದೆ.

ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಡಾ. ವಾಯ್.ಎಮ್ ಯಾಕೊಳ್ಳಿಯವರು ಮಾತನಾಡಿ, ಕೇವಲ ಸಾಹಿತ್ಯಿಕ ಚಟುವಟಿಕೆಗಳಿಗೆ ಮಾತ್ರ ಸೀಮಿತಗೊಳಿಸದೇ ಕೃಷಿಗೆ ಪೂರಕ ಹಾಗೂ ಜೀವನ ಕಟ್ಟಿಕೊಡುವ ಇಂಥ ಮಾಹಿತಿಗಳನ್ನು ಹಂಚಿಕೊಳ್ಳಲು ಮೂಡಲಗಿಯ ಸಾಹಿತ್ಯ ಸಮ್ಮೇಳನದಲ್ಲಿ ಅವಕಾಶಕಲ್ಪಿಸಿರುವುದು ಸ್ತುತ್ತ್ಯರ್ಹವಾಗಿದ್ದು, ಇದೇ ಮಾದರಿಯನ್ನು ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನಗಳಲ್ಲಿ ಅಳವಡಿಡುವುದು ಸೂಕ್ತವೆಂದು ಅಭಿಪ್ರಾಯಪಟ್ಟರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ದೂರದೃಷ್ಟಿಯ ನಾಯಕ ಎಸ್ ಎಮ್ ಕೃಷ್ಣ

ಸಿಂದಗಿ: ಸರಕಾರ ಆರ್ಥಿಕ ಅವಲಂಬನೆ ಹೆಚ್ಚಾಗಿರೋಕೆ ಮಾಜಿ ಮುಖ್ಯಮಂತ್ರಿ ಎಸ್.ಎಮ್.ಕೃಷ್ಣಾ ಅವರ ದೂರ ದೃಷ್ಟಿಯೇ ಕಾರಣ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ಪಟ್ಟಣದ ಬ್ಲಾಕ್ ಕಾಂಗ್ರೆಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group