spot_img
spot_img

ಜನಪದ ಸಾಹಿತ್ಯದಲ್ಲಿ ರೇಣುಕಾ ಯಲ್ಲಮ್ಮ ಕುರಿತು ಉಪನ್ಯಾಸ

Must Read

- Advertisement -

ಬೆಳಗಾವಿ – ಜಿಲ್ಲೆಯ ಕ.ಸಾ.ಪ ಘಟಕದ ವತಿಯಿಂದ ವೆಬಿನಾರ್ ಮೂಲಕ ಉಪನ್ಯಾಸ ಮಾಲಿಕೆಯ ಮೂರನೇ ಕಾರ್ಯಕ್ರಮ ರವಿವಾರ ಜರುಗಿತು. ಕಾರ್ಯಕ್ರಮದಲ್ಲಿ ಮೊದಲಿಗೆ ಇತ್ತೀಚಿಗೆ ಅಗಲಿದ ಹಿರಿಯ ಸಾಹಿತಿ ಡಾ. ಸಿದ್ದಲಿಂಗಯ್ಯ ರವರಿಗೆ. ನುಡಿನಮನದ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ಕರೋನಾ ಘಟ್ಟದಲ್ಲಿ ನಾವು ಅನೇಕ ಹಿರಿಯ ಜೀವಿಗಳನ್ನು ಮತ್ತು ಬುದ್ಧಿಜೀವಿಗಳನ್ನು ಕಳೆದುಕೊಂಡು ಲೋಕವೇ ಬಡವಾಗಿದೆ ಎಂದು ಕ.ಸಾ.ಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ ಶ್ರದ್ಧಾಂಜಲಿ ಸಲ್ಲಿಸುತ್ತ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಹಿರಿಯ ಸಾಹಿತಿಗಳು ಮತ್ತು ಉಪನ್ಯಾಸಕರು ಮತ್ತು ಹಿರಿಯ ಸಂಶೋಧಕರಾದ ಡಾ.ವೈ ಎಂ. ಯಾಕೊಳ್ಳಿಯವರು, ಕರ್ನಾಟಕ ರಾಜ್ಯದ ಅತ್ಯಂತ ಪವಿತ್ರ ಕ್ಷೇತ್ರ ಮತ್ತು ಜಾಗೃತ ಕ್ಷೇತ್ರ ಎಂದೇ ಹೆಸರುವಾಸಿಯಾದ ಇತಿಹಾಸ ಪ್ರಸಿದ್ಧ ಶ್ರೀ ರೇಣುಕಾ ಯಲ್ಲಮ್ಮ ಕುರಿತು ಮಾತನಾಡಿ, ಇತಿಹಾಸದಲ್ಲಿ ಮತ್ತು ಜನಮಾನಸದಲ್ಲಿ ಯಾವ ರೀತಿಯಾಗಿ ಭಾವನಾತ್ಮಕವಾಗಿ ಯಲ್ಲಮ್ಮ ದೇವಿ ಜನರ ಜೀವನದಲ್ಲಿ ಹಾಸುಹೊಕ್ಕಾಗಿದ್ದಾಳೆ ಮತ್ತು ಬಾಯಿಂದ ಬಾಯಿಗೆ ಜನಪದಗಳನ್ನು ಸಾರುತ್ತ ಆಕೆಯ ಇತಿಹಾಸ ಮತ್ತು ಮಹಾತ್ಮೆ ಭಕ್ತ ಜನರ ಜೀವನದ ಜೊತೆಗೆ ಭಕ್ತಿಪೂರ್ವಕ ಮತ್ತು ಭಾವನಾತ್ಮಕವಾಗಿ ಬೆಸೆದುಕೊಂಡಿದೆ ಎಂದು ಜನಪದ ಶೈಲಿಯಲ್ಲಿ ಅತ್ಯಂತ ಸುಂದರವಾಗಿ ಜನಪದ ಹಾಡುಗಳ ಮೂಲಕ “ಜಾನಪದ ಸಾಹಿತ್ಯದಲ್ಲಿ ರೇಣುಕಾಯಲ್ಲಮ್ಮ” ಎಂಬ ವಿಷಯವನ್ನು ಮಂಡಿಸಿದರು.

- Advertisement -

ನಂತರ ಪ್ರಶ್ನೋತ್ತರ ವೇಳೆಯಲ್ಲಿ ಜಿಲ್ಲಾ ನಿಕಟಪೂರ್ವ ಕ.ಸಾ.ಪ. ಅಧ್ಯಕ್ಷರಾದ ಶ್ರೀ ಯ.ರು. ಪಾಟೀಲ್ ರವರು ಮಾತನಾಡಿ, ತಾಯಿ ಸತ್ಯವತಿ ಕುರಿತಾದ ಮಾಹಿತಿಯನ್ನು ವಿವರವಾಗಿ ಬಿಚ್ಚಿಡುವ ಮೂಲಕ ಸತ್ಯಾಸತ್ಯತೆಗಳನ್ನು ಕೂಲಂಕುಷವಾಗಿ ಚರ್ಚೆಯ ಮೂಲಕ ಮನದಟ್ಟು ಮಾಡಿಕೊಳ್ಳಲು ಇಂತಹ ವೇದಿಕೆಗಳು ಸಹಾಯಕವಾಗಿವೆ ಎಂದರು.

ಅಧ್ಯಕ್ಷತೆ ವಹಿಸಿದ್ಧ ಪ್ರೊ. ಸಿ.ವಿ. ಜ್ಯೋತಿ ಮಾಜಿ ಕ.ಸಾ.ಪ ಅಧ್ಯಕ್ಷರು ಮಾತನಾಡಿ, ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ತಂತ್ರಜ್ಞಾನವನ್ನು ವ್ಯವಸ್ಥಿತವಾಗಿ ಬಳಸಿಕೊಂಡು ಈ ಮೂಲಕ ವಿಶೇಷವಾಗಿರುವ ವಿಷಯಗಳನ್ನು ಸಾಹಿತ್ಯಾಸಕ್ತರಿಗೆ ಸೇರಿದಂತೆ ಎಲ್ಲರಿಗೂ ಉಣಬಡಿಸುತ್ತಿರುವ ಕ.ಸಾ.ಪ ದ ಕಾರ್ಯ ಶ್ಲಾಘನೀಯ ಎಂದು ಸಂತೋಷ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮೈತ್ರಿಯಿನಿ ಗದಿಗೆಪ್ಪ ಗೌಡರ್, ನಿರ್ಮಲ ಬಟ್ಟಲ, ಹೇಮಾವತಿ ಸೊನೊಳ್ಳಿ, ಚಂದ್ರಶೇಖರ್ ಗಣಾಚಾರಿ, ರಾಜೇಂದ್ರ ವಾಲಿ, ಶ್ರೀ ಮರಲಿಂಗನವರ, ಶಬಾನಾ ಅಣ್ಣಿಗೇರಿ. ಎಂ.ಎಸ್ ಹೊಂಗಲ್, ಶ್ರೀಶೈಲ್ ಮನಗುತ್ತಿ, ವಿಜಯ ಕುಮಾರ್ ಜೀರಗ್ಯಾಳ, ಜಯಶ್ರೀ ಅಬ್ಬಿಗೇರಿ ಸೇರಿದಂತೆ ಕ.ಸಾ.ಪ ವಿವಿಧ ತಾಲೂಕುಗಳ ಅಧ್ಯಕ್ಷರಾದ , ವಿದ್ಯಾವತಿ ಜನವಡೆ, ಶ್ರೀಪಾದ ಕುಂಬಾರ, ಮಹಾಂತೇಶ ಉಕ್ಕಲಿ, ಶೇಖರ ಹಲಸಗಿ, ಸಿದ್ದರಾಮ ದ್ಯಾಗ್ಯಾನಟ್ಟಿ, ಜಿಲ್ಲಾ ಕಾರ್ಯದರ್ಶಿ ಮಹಾಂತೇಶ್ ಮೆಣಸಿನಕಾಯಿ, ಜ್ಯೋತಿ ಬದಾಮಿ ಭಾಗವಹಿಸಿದ್ದರು.

- Advertisement -

ಕಾರ್ಯಕ್ರಮವನ್ನು ಪಾಂಡುರಂಗ ಜಟಗನ್ನವರ್ ಸಂಯೋಜಿಸಿ, ನಿರ್ವಹಿಸಿದರು. ವಿ. ಎಂ. ಅಂಗಡಿ ವಂದನಾರ್ಪಣೆ ಸಲ್ಲಿಸಿದರು.

- Advertisement -
- Advertisement -

Latest News

ಬಡವರ ಮನೆ ಊಟ ಚಂದ ಸ್ಥಿತಿವಂತರ ಮನೇಲಿ ಆಟ ಚಂದ ಆದರೂ ಯಾರ ನೆಮ್ಮದಿ ಎಲ್ಲಿ ಅಡಗಿದೆಯೋ ಬಲ್ಲವರಾರು?

ಅಮ್ಮ ನಿನಗ್ ಎಷ್ಟ ಸಲ ಹೇಳಿದಿನಿ ಪಕ್ಕದ ಮನೆಗೆ ಹೋಗಬೇಡಾ ಅಂತ.ನಿನಗೆ ಬೇಜಾರಾದ್ರೆ ಟಿವಿ ನೋಡು,ನಿದ್ದೆ ಮಾಡು, ಬೇಕಿದ್ರೆ ಮನೇಲೆ ಭಜನೆ, ದೇವರ ನಾಮಸ್ಮರಣೆ ಇಂತದ್ದೇನೋ...
- Advertisement -

More Articles Like This

- Advertisement -
close
error: Content is protected !!
Join WhatsApp Group