spot_img
spot_img

ಕಸಾಪ ವತಿಯಿಂದ ವೆಬಿನಾರ್ ಮಾಲಿಕೆಯಲ್ಲಿ ಬೆಳಗಾವಿ ಜಿಲ್ಲೆಯ ದೇವಾಲಯಗಳ ವಾಸ್ತುಶಿಲ್ಪ ಕುರಿತು ಉಪನ್ಯಾಸ

Must Read

- Advertisement -

ಬೆಳಗಾವಿ ಜಿಲ್ಲೆಯ ಕ.ಸಾ.ಪ ಘಟಕದ ವತಿಯಿಂದ ವೆಬಿನಾರ್ ಮೂಲಕ ಉಪನ್ಯಾಸ ಮಾಲಿಕೆಯ ಎರಡನೇ ಕಾರ್ಯಕ್ರಮ ರವಿವಾರ ಜರುಗಿತು. ಕೋವಿಡ್ ಸಂದಿಗ್ದ ಪರಿಸ್ಥಿತಿಯಲ್ಲಿ ಯಾವುದೇ ಸುದ್ದಿ ಕೇಳಿದರೂ ಸಹ ಸಾವು, ತೊಂದರೆ ಇಂತಹ ವಿಷಮ ವಿಷಯಗಳನ್ನು ಕೇಳುತ್ತಿರುವ ಈ ದಿನಗಳಲ್ಲಿ ಮನಸ್ಸು ಉಲ್ಲಸಿತಗೊಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದ್ದು ಎಲ್ಲ ಸಾಹಿತ್ಯಾಸಕ್ತರ ಮನ ಸೆಳೆಯುತ್ತಿದೆ ಎಂದು ಕ.ಸಾ.ಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಇತಿಹಾಸ ಸಂಶೋಧಕರು, ತಜ್ಞರು ಆದ ಡಾ. ಸ್ಮಿತಾ ಸುರೇಬಾನಕರ್ ರವರು ಬೆಳಗಾವಿ ಜಿಲ್ಲೆಯ ದೇವಾಲಯಗಳ ವಾಸ್ತುಶಿಲ್ಪದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಕ್ರಿಸ್ತಶಕ ಒಂದನೇ ಶತಮಾನದಿಂದಲೂ ಪ್ರಾಕೃತ ಶಾಸ್ತ್ರ ವಡಗಾವಿ ಯಲ್ಲಿ ಅತಿ ಹಳೆಯ ಶಾಸನವನ್ನು, ಅದೇ ರೀತಿ ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿ ಇರುವ ಸೇಂಟ್ ಮೇರಿಸ್ ಚರ್ಚ್ ಮೂಲಕ ಆಧುನಿಕ ಇತ್ತೀಚಿನ ಶಿಲ್ಪವನ್ನು ನಾವು ಕಾಣಬಹುದು.

- Advertisement -

ಬೆಳಗಾವಿ ಜಿಲ್ಲೆಯಲ್ಲಿ ತನ್ನದೇ ಆದ ಇತಿಹಾಸ ಸಾರುವ ಅನೇಕ ದೇವಾಲಯಗಳಿವೆ. ವಾಸ್ತುಶಿಲ್ಪದ ಪ್ರಕಾರ ಅನೇಕ ಶೈಲಿಗಳಲ್ಲಿ ವಿಂಗಡನೆಗೊಳ್ಳುತ್ತವೆ. ಕದಂಬರ ಶೈಲಿ, ಕಳಿಂಗ ಶೈಲಿ, ದ್ರಾವಿಡ ಶೈಲಿಯಲ್ಲಿ ನಾವು ವಿವಿಧ ದೇವಾಲಯಗಳನ್ನು ಕಾಣಬಹುದು.

ಬೆಳಗಾವಿ ವಿಶೇಷವಾಗಿ ಶಾತವಾಹನರು, ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರು, ಗೋವಾ ಕದಂಬರು, ಸವದತ್ತಿಯ ರಟ್ಟರು, ದೇಸಾಯಿ ವಾಡೆ, ಇನಾಂದಾರ್, ದೇಶಪಾಂಡೆ, ಮರಾಠರ ಪೇಶ್ವೆಗಳು, ಮುಸಲ್ಮಾನರು ಆಳ್ವಿಕೆ ಮಾಡಿದ ಅನೇಕ ಪ್ರದೇಶಗಳು ಬೆಳಗಾವಿಯಲ್ಲಿವೆ. ಇಲ್ಲಿನ ಅನೇಕ ಬಸದಿಗಳು ದೇವಾಲಯಗಳಾಗಿ, ದೇವಾಲಯಗಳು ಮಸೀದಿಗಳಾಗಿ ಪರಿವರ್ತನೆಯಾಗಿದೆ.

- Advertisement -

ನಮ್ಮ ಜಿಲ್ಲೆಯ ಅನೇಕ ದೇವಾಲಯಗಳು ಅತ್ಯಂತ ವಿಶಿಷ್ಟ ರೀತಿಯ ವಾಸ್ತುಶಿಲ್ಪವನ್ನು ಹೊಂದಿದೆ. ಆದರೆ ಸರಕಾರದ ಮತ್ತು ಜನಸಾಮಾನ್ಯರ ದಿವ್ಯ ನಿರ್ಲಕ್ಷದಿಂದ ಹಾಳಾಗಿ ಹೊರಟಿವೆ. ಅವನ್ನು ನಾವು ರಕ್ಷಿಸಬೇಕಿದೆ. ಎಂದು ಸವಿವರವಾದ ದಾಖಲಾತಿಗಳ ಮೂಲಕ ಜಿಲ್ಲೆಯ ಅನೇಕ ದೇವಾಲಯಗಳ ಇತಿಹಾಸವನ್ನು ಬಿಚ್ಚಿಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹುಕ್ಕೇರಿ ಕ.ಸಾ.ಪ ಮಾಜಿ ಅಧ್ಯಕ್ಷ ಎಲ್. ವಿ ಪಾಟೀಲ್ ರವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಮೈತ್ರಿಯಿನಿ ಗದಿಗೆಪ್ಪ ಗೌಡರ್, ನಿರ್ಮಲ ಬಟ್ಟಲ, ಹೇಮಾವತಿ ಸೊನೊಳ್ಳಿ, ಪ್ರೇಮ ಅಂಗಡಿ, ಜಯಶ್ರೀ ಅಬ್ಬಿಗೇರಿ ಸೇರಿದಂತೆ ಕ.ಸಾ.ಪ ವಿವಿಧ ತಾಲೂಕುಗಳ ಅಧ್ಯಕ್ಷರಾದ ವಿಜಯ ಬಡಿಗೇರ್, ವಿದ್ಯಾವತಿ ಜನವಡೆ, ಶ್ರೀಪಾದ ಕುಂಬಾರ, ಮಹಾಂತೇಶ ಉಕ್ಕಲಿ, ಶೇಖರ ಹಲಸಗಿ, ಸಿದ್ದರಾಮ ದ್ಯಾಗ್ಯಾನಟ್ಟಿ, ನಿವೃತ್ತ ಪೊಲೀಸ್ ಅಧಿಕಾರಿ ಸಾಹಿತಿ ಪಾಂಡುರಂಗ ಯಲಿಗಾರ, ಜಿಲ್ಲಾ ಕಾರ್ಯದರ್ಶಿ ಮಹಾಂತೇಶ್ ಮೆಣಸಿನಕಾಯಿ, ಜ್ಯೋತಿ ಬದಾಮಿ ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಪಾಂಡುರಂಗ ಜಟಗನ್ನವರ್ ಸಂಯೋಜಿಸಿ, ನಿರ್ವಹಿಸಿದರು. ಶಿವಾನಂದ ತಲ್ಲೂರ ವಂದನಾರ್ಪಣೆ ಸಲ್ಲಿಸಿದರು.

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group