spot_img
spot_img

ಸ್ವಾತಂತ್ರ್ಯ ಹೋರಾಟಗಾರ ‘ಬಸವಣ್ಣೆಪ್ಪ ಮ. ಸಾಣಿಕೊಪ್ಪ’ ಕುರಿತಾದ ಉಪನ್ಯಾಸ ಕಾರ್ಯಕ್ರಮ

Must Read

spot_img

ಖಾನಾಪೂರ: ತಾಲೂಕಿನ ಇಟಗಿ ಗ್ರಾಮದ ಸಂಭ್ರಮ ಫೌಂಡೇಶನ್ ಹಾಗೂ ಜನತಾ ಶಿಕ್ಷಣ ಪ್ರಸಾರ ಸಮಿತಿ ಇಟಗಿ ಸಹಯೋಗದಲ್ಲಿ, “ಸ್ವಾತಂತ್ರ್ಯದ ಅಮೃತ ಮಹೋತ್ಸವ” ಅಂಗವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ, ಇಟಗಿ ಗ್ರಾಮದ ಬಸವಣ್ಣೆಪ್ಪ ಮ. ಸಾಣಿಕೊಪ್ಪ ಅವರ ಪಾತ್ರ ಕುರಿತಾಗಿ ‘ಬೆಳ್ಳಿ ಚುಕ್ಕಿ’ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು, ಚೆನ್ನಮ್ಮ ರಾಣಿ ಸ್ಮಾರಕ ಸಂಯುಕ್ತ ಪದವಿ ಪೂರ್ವ ಕಾಲೇಜು ಸಭಾ ಭವನ, ಇಟಗಿಯಲ್ಲಿ ದಿನಾಂಕ 13.08.2022 ಶನಿವಾರ ಬೆಳಗ್ಗೆ 10 ಗಂಟೆಗೆ ‘ಸಂಭ್ರಮ ಫೌಂಡೇಶನ್ ‘ಇಟಗಿ ಅಧ್ಯಕ್ಷರಾದ ಕಿರಣ ಕಲ್ಲಪ್ಪ ಗಣಾಚಾರಿ ಇವರ ಅಧ್ಯಕ್ಷತೆಯಲ್ಲಿ ಜರುಗಲಿದೆ.

ಉಪನ್ಯಾಸಕರಾಗಿ ವಿಜಯ ವೀ.ಬಡಿಗೇರ ಮಾಜಿ ತಾಲೂಕ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ಖಾನಾಪೂರ ಆಗಮಿಸುತ್ತಿದ್ದಾರೆ. ಮುಖ್ಯ ಅತಿಥಿಗಳಾಗಿ ರವಿ ಬಿ.ಸಾಣಿಕೊಪ್ಪ ಖ್ಯಾತ ಮಕ್ಕಳ ವೈದ್ಯರು ಇಂಗ್ಲಂಡ ಮತ್ತು ವಿಜಯ ಬಿ.ಸಾಣಿಕೊಪ್ಪ ಚೇರಮನ್ನರು, ಜೆ ಎಸ್ ಪಿ ಎಸ್ ಇಟಗಿ ಇವರು ಆಗಮಿಸಲಿದ್ದು, ಕಲ್ಲಪ್ಪ ವೀ.ಗಣಾಚಾರಿ ಉಪಾಧ್ಯಕ್ಷರು ಸಂಭ್ರಮ ಪೌಂಡೇಶನ್ ಇಟಗಿ ಉಪಸ್ಥಿತಿ ಇರುತ್ತಾರೆ.

ವಿಶೇಷ ಆಮಂತ್ರಿತರಾದ ಜೆ ಎಸ್ ಪಿ ಎಸ್ ಇಟಗಿ ಆಡಳಿತ ಮಂಡಳಿಯ ಸರ್ವ ಸದಸ್ಯರ ಹಾಗೂ ಸಾಹಿತ್ಯ, ಸಂಸ್ಕೃತಿ, ಕಲಾರಾಧಕರ ಉಪಸ್ಥಿತಿಯಲ್ಲಿ “ಬೆಳ್ಳಿಚುಕ್ಕಿ” ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿರುತ್ತದೆ ಎಂದು ‘ಸಂಭ್ರಮ ಫೌಂಡೇಶನ್ ‘ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಅದೇ ರೀತಿ ಸಂಭ್ರಮ ಫೌಂಡೇಶನ್ ಇಟಗಿಯ ಸರ್ವ ಸದಸ್ಯರು, ಇಟಗಿಯ ಊರ ನಾಗರಿಕರು,ಸಿ ಆರ್ ಎಸ್ ಎಚ್ ಪ್ರೌಢಶಾಲೆ ಹಾಗೂ ಸಂಯುಕ್ತ ಪದವಿ ಪೂರ್ವ ಕಾಲೇಜು ಮತ್ತು ಬಿ ಎಂ ಎಸ್ ಪದವಿ ಕಾಲೇಜು ಇಟಗಿ ಉಪನ್ಯಾಸಕರು, ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ ವರ್ಗ, ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಹೃತ್ಪೂರ್ವಕವಾಗಿ ಕೋರಿಕೊಂಡಿರುತ್ತಾರೆ.

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!