ಹಕ್ಕುಗಳ ರಕ್ಷಣೆಗೆ ಕಾನೂನು ಸಹಾಯ ಅವಶ್ಯ ಬೇಕು – ನ್ಯಾಯಾಧೀಶ ಈರಣ್ಣ

Must Read

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...

“ಕಲಾಸೃಷ್ಟಿ” ಆರ್ಟ್ ವರ್ಕ್ ಗೆ ಚಾಲನೆ ನೀಡಿದ ಲೋಕಲ್ ಲೀಡರ್ ನಟ ಕಲ್ಮೇಶ್

ಬಾಗಲಕೋಟೆ: ಇದೆ ಅಕ್ಟೋಬರ್ ೧೫ ರಂದು, ಗದ್ದನಕೇರಿಯಲ್ಲಿ "ಕಲಾಸೃಷ್ಟಿ" ಆರ್ಟ್ ವರ್ಕ್ ಪ್ರಾರಂಭವಾಯಿತು. ಇದನ್ನು ನಟ ಕಲ್ಮೇಶ್, ಬಾಗಲಕೋಟೆಯ ನಟಿ ಅಂಕಿತಾ ನಾಯ್ಡು ಹಾಗೂ ಸಹ...

ಗೋವಿಂದಹಳ್ಳಿಯ ಪಂಚಲಿಂಗೇಶ್ವರ ; ಐದು ಶಿಖರಗಳ ಅಪರೂಪದ ಗುಡಿ

ಸ್ಥಳದ ಬಗ್ಗೆ ಕಿರು ಪರಿಚಯ: ಪ್ರಖ್ಯಾತ ಪ್ರವಾಸಿ ತಾಣವಾದ ಗೋವಿಂದನಹಳ್ಳಿಯ ಬ್ರಹ್ಮಲಿಂಗೇಶ್ವರ ಗುಡಿಯಿರುವುದು ಮಂಡ್ಯದಿಂದ 52 ಕಿ.ಮೀ ಹಾಗೂ ಕೃಷ್ಣರಾಜಪೇಟೆಯಿಂದ 20 ಕಿ.ಮೀ ಹಾಗು ಕಿಕ್ಕೇರಿಯಿಂದ...

ಸಿಂದಗಿ: “ದೀನ ದಲಿತರಿಗೆ, ಬಡವರಿಗೆ ಅಲ್ಲದೆ ಪ್ರತಿಯೊಬ್ಬರಿಗೆ ತಮ್ಮ ಹಕ್ಕುಗಳ ರಕ್ಷಣೆಗೆ ಕಾನೂನು ಅವಶ್ಯವಾಗಿ ಬೇಕು ಅಲ್ಲದೆ ನಿಮ್ಮಲ್ಲಿ ಅನ್ಯಾಯ ಅಗಿದ್ದರೆ ತಾವುಗಳು ಮುಕ್ತವಾಗಿ ಕಾನೂನು ಪ್ರಾಧಿಕಾರಕ್ಕೆ ಬಂದು ಅರ್ಜಿ ಸಲ್ಲಿಸಬೇಕು ಆ ಅರ್ಜಿಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ಯಾವುದೇ ರೀತಿಯಿಂದ ಹಣವನ್ನು ಪಡೆದುಕೊಳ್ಳದೆ ಉಚಿತವಾಗಿ ನ್ಯಾಯ ಒದಗಿಸಿಕೊಡುತ್ತೆವೆ ಎಂದು ಜೆ ಎಮ್ ಎಫ್ ಸಿ ಹಿರಿಯ ಸಿವಿಲ್ ನ್ಯಾಯಾಧೀಶ ಎ. ಈರಣ್ಣ ಹೇಳಿದರು.

ಪಟ್ಟಣದ ಸಂಗಮ ಸಂಸ್ಥೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ಹಾಗೂ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರ ಇವರ ಸಹಯೋಗದಲ್ಲಿ ಸ್ವತಂತ್ರ ಭಾರತದ ಅಮೃತ ಮಹೋತ್ಸವದ ಪ್ರಯುಕ್ತ ಕಾನೂನು ಅರಿವು- ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜೆ ಎಮ್ ಎಫ್ ಸಿ ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಸಾದ ಕೆ . ಬಿ ಮಾತನಾಡಿ, ಹಿಂಸೆ ಅಸತ್ಯ ಅಸಮಾಧಾನ ಮನುಕುಲದಲ್ಲಿ ಅಹಿಂಸೆಯ ಮೂಲಕ ನಮಗೆ ಮಾತನಾಡಲು ಹಕ್ಕುಕೊಟ್ಟವರು ಅಹಿಂಸಾವಾದಿ ಮಹಾತ್ಮ ಗಾಂಧೀಜಿಯವರು ನಮಗೆ ಸ್ವತಂತ್ರವನ್ನು ತಂದು ಕೊಟ್ಟರು. ಕಾನೂನು ಅರಿವು ಎಂದರೆ ತಿಳಿದು ಕೊಂಡು ತಾವುಗಳು ನೆರವು ಎಂದರೆ ಪಡೆದು ಕೊಳ್ಳಬೇಕು ಅಂದರೆ ರಾಷ್ಟ್ರ , ರಾಜ್ಯ, ಜಿಲ್ಲಾ ಹಾಗೂ ತಾಲೂಕಿನ ನ್ಯಾಯಾಲಯಗಳಲ್ಲಿ ಕಾನೂನು ಸೇವಾ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿ ನ್ಯಾಯವನ್ನು ಪಡೆದುಕೊಳ್ಳಿ ಎಂದು ಕರೆ ನೀಡಿದರು.

- Advertisement -

ಜೆ.ಎಮ್.ಎಫ್.ಸಿ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ರಮೇಶ ಗಾಣಿಗೇರ ಮಾತನಾಡಿ, ಅಪಘಾತದಲ್ಲಿ ಜೀವವನ್ನು ಕಳೆದು ಕೊಂಡಾಗ ತಮ್ಮ ಕುಟುಂಬ ಬೀದಿ ಪಾಲಾಗುತ್ತಾರೆ ಅಪಘಾತದಲ್ಲಿ ತಮ್ಮ ಅಂಗಾಂಗಗಳು ಕಳೆದುಕೊಂಡರೆ ತಮಗೆ ಹಣ ಬರಬೇಕೆಂದರೆ ಹಾಗೂ ನೀವು ಯಾರಿಗಾದರು ಅಪಘಾತ ಮಾಡಿದರೆ ಅವರಿಗೆ ಹಣ ಕೊಡಬೇಕಾಗುತ್ತದೆ ಆಗ ನೀವು ಹೊಲ ಅಥವಾ ಮನೆ ಮಾರಿ ದುಡ್ಡು ಕೊಡಬೇಕಾಗುತ್ತದೆ. ಇದನ್ನು ತಪ್ಪಿಸಬೇಕಾದರೆ ನೀವು ಕಡ್ಡಾಯವಾಗಿ ಚಾಲನಾ ಪರವಾನಿಗೆ ಮಾಡಿಸಬೇಕು ಹಾಗೂ ಇನ್ಸೂರನ್ಸ್ ತುಂಬಿರಬೇಕು. ಕಟ್ಟಡ ಕಾರ್ಮಿಕರು, ಕಾರ್ಮಿಕರ ಕಾರ್ಡನ್ನು ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಜೆ ಎಮ್ ಎಫ್ ಸಿ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಆಶಪ್ಪರವರು ಮಾತನಾಡಿ, ಪ್ರತಿಯೊಬ್ಬರಿಗೂ ಜೀವಿಸುವ ಹಕ್ಕಿದೆ ಪ್ರತಿಯೊಬ್ಬರು ನ್ಯಾಯಾಲಯದಿಂದ ನೇಮಿಸಿದ ಸರಕಾರಿ ವಕೀಲರ ಸೌಲಭ್ಯ ಪಡೆದುಕೊಳ್ಳಬೇಕು. ಪ್ರಾಧಿಕಾರದಿಂದ ರಾಜಿ ಮಾಡಿಸುವ ಕೆಲಸ ಮಾಡುತ್ತದೆ ಎಂದರು.

ಸಂಗಮ ಸಂಸ್ಥೆಯ ನಿರ್ದೇಶಕ ಫಾದರ್ ಆಲ್ವಿನ್ ಡಿಸೋಜ ಮಾತನಾಡಿ, ಸಂಗಮ ಸಂಸ್ಥೆ ಹಾಗೂ ನ್ಯಾಯಾಲಯದ ಗುರಿ ಒಂದೆ. ಅನ್ಯಾಯಕ್ಕೆ ಒಳಗಾದವರನ್ನು ನ್ಯಾಯ ಕೊಡಿಸುವುದಾಗಿದೆ ಅಲ್ಲದೆ ಬಡವರಿಗೆ ನ್ಯಾಯ ಸಿಗಬೇಕು ಎಂದು ಹೇಳಿದರು.

ಸಂಗಮ ಸಂಸ್ಥೆಯ ಸಹನಿರ್ದೇಶಕರಾದ ಸಿಸ್ಟರ್ ಸಿಂತಿಯಾ ಡಿಮೆಲ್ಲೊರವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ವಕೀಲರ ಸಂಘ ಅಧ್ಯಕ್ಷ ಎಸ್ ಬಿ ದೊಡಮನಿ ಸಹಾಯಕ ಸರಕಾರಿ ಅಭಿಯೋಜಕರಾದ ಆನಂದ ರಾಠೊಡ, ವಿ ಬಿ ಪಾಟೀಲ,ಅಪರ ಸರಕಾರಿ ವಕೀಲ ಎಮ್ ಎಸ್ ಪಾಟೀಲ, ಪೆನಲ್ ಅಡ್ವೊಕೇಟ್ ತಾಲೂಕು ಕಾನೂನು ಸೇವಾ ಸಮಿತಿ ಬಿ ಎಸ್ ಪಾಟೀಲ ಉಪಸ್ಥಿತರಿದ್ದರು ಮತ್ತು ಕಟ್ಟಡ ಕಾರ್ಮಿಕರು ,ಯುವಕರು, ವಿಕಲ ಚೇತನರು , ಮತ್ತು ಮಹಿಳೆಯರು ಹಾಜರಿದ್ದರು.

ವಿಜಯ್ ಬಂಟನೂರ ಇವರು ನಿರೂಪಿಸಿದರು. ಮಲಕಪ್ಪ ಹಲಗಿ ಸ್ವಾಗತಿಸಿದರು, ತೇಜಸ್ವಿನಿ ಹಳ್ಳದಕೇರಿ ಇವರು ಭಾರತದ ಪ್ರಸ್ತಾವನೆಯನ್ನು ವಾಚಿಸಿದರು. ರಾಜೀವ ಕುರಿಮನಿ ವಂದಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...
- Advertisement -

More Articles Like This

- Advertisement -
close
error: Content is protected !!