spot_img
spot_img

ಸಿಂದಗಿ ತಾಪಂ ಕೆಡಿಪಿ ಸಭೆ ನಡೆಸಿದ ಶಾಸಕ ಭೂಸನೂರ

Must Read

ಸಿಂದಗಿ: ಈ ತಾಲೂಕಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ನಿರ್ಮಾಣವಾಗಿ ಕೆಲ ವರ್ಷಗಳೆ ಗತಿಸಿವೆ ಆದರೆ ಇವುಗಳ ನಿರ್ವಹಣೆಯಲ್ಲಿ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ ಏನು ಮಾಡುತ್ತಿದ್ದಿರಿ ಎಂದು ಕೆಡಿಪಿ ಸದಸ್ಯರಾದ ಶಿವಕುಮಾರ ಬಿರಾದಾರ ಹಾಗೂ ಅರ್ಜುನ ಮಾಲಗಾರ ಹರಿಹಾಯ್ದರು.

ಪಟ್ಟಣ ತಾಪಂ ಕಛೇರಿಯ ಸಭಾ ಭವನದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗೆ ತರಾಟೆಗೆ ತೆಗೆದುಕೊಳ್ಳುವಂತೆ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಅಧಿಕಾರಿ ಭಾಗ್ಯಶ್ರೀ ಕಟಿಗೇರಿ ಮಾತನಾಡಿ, ಒಟ್ಟು 51 ಶುದ್ಧ ಕುಡಿಯುವ ಘಟಕಗಳಿವೆ ಅದರಲ್ಲಿ 14 ಮಾತ್ರ ಚಾಲ್ತಿಯಲ್ಲಿವೆ ಒಂದು ಏಜನ್ಸಿ ನಿರ್ವಹಣೆಗೆ ಟೆಂಡರ ಪಡೆದಿದ್ದು ಅವರ ನಿರ್ಲಕ್ಷದಿಂದ ಈ ಘಟಕಗಳು ಬಂದಾಗಿವೆ ಎಂದು ಉತ್ತರಿಸಿದರು.

ಅಧ್ಯಕ್ಷತೆ ವಹಿಸಿದ ಶಾಸಕ ರಮೇಶ ಭೂಸನೂರ ಮಾತನಾಡಿ, ಈ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪಾರದರ್ಶಕತೆ ಅವಶ್ಯಕತೆಯಿದ್ದು ಯಾವುದೇ ಸಮಸ್ಯೆ ಇದ್ದರು ಕೂಡಾ ನೆರವಾಗಿ ಬಂದು ಸಮಸ್ಯೆಯ ಬಗ್ಗೆ ಚರ್ಚಿಸಬೇಕು ಇತ್ಯರ್ಥ ಮಾಡಲು ಅನುಕೂಲವಾಗುತ್ತದೆ. ಜಿಡ್ಡು ಗಟ್ಟಿದ ಆಡಳಿತ ಹೋಗಬೇಕು ಡಿಜಿಟಲ್ ಅಡಳಿತ ತರಬೇಕು ಅಭಿವೃದ್ಧಿ ವಿಷಯದಲ್ಲಿ ಯಾವುದೇ ರಾಜಿಯಿಲ್ಲ. ಈ ಕ್ಷೇತ್ರದ 76 ಹಳ್ಳಿಗಳ ಕ್ರಿಯಾ ಯೋಜನೆ ರೂಪಿಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಎಂದು ಖಡಕ್ಕಾಗಿ ಎಚ್ಚರಿಸಿದರು.

ಕೃಷಿ ಅಧಿಕಾರಿ ಎಚ್.ವೈ.ಸಿಂಗೆಗೋಳ ಮಾತನಾಡಿ, ಈ ತಾಲೂಕಿನಲ್ಲಿ 157153 ಹೇಕ್ಟೇರ ಪ್ರದೇಶವಿದ್ದು ಅದರಲ್ಲಿ 110386 ಹೆಕ್ಟೆರ ಪ್ರದೇಶ ಬಿತ್ತನೆಯಾಗಿತ್ತು 76.8ಎಂಎಂ ಮಳೆಯಾಗಿ ಕೊನೆಯ 4 ವಾರ ಸರಾಸರಿ ಮಳೆಯಾಗದ ಕಾರಣ ರೈತರಿಗೆ ಎಕರೆಗೆ 4 ಚೀಲ ಬೆಳೆಯುವ ಬೆಳೆ 1ರಿಂದ2 ಚೀಲ ಬೆಳೆ ಕೈಗೆ ಬಂದು ಇಳುವರಿ ಕಡಿಮೆಯಾಗಿದೆ ವಿಜ್ಞಾನಿಗಳ ತಂಡದೊಂದಿಗೆ ಜಮೀನುಗಳ ಸಮೀಕ್ಷೆ ಮಾಡಿ 38 ಸಾವಿರ ಹೆಕ್ಟೇರ ಪ್ರದೇಶ ಬೆಳೆ ಹಾನಿಯಾಗಿದೆ ಎಂದು ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ ಇಲ್ಲಿಯವರೆಗೆ ಯವುದೇ ಪರಿಹಾರ ಬಂದಿಲ್ಲ. ಸರಕಾರ ಮಟ್ಟದಲ್ಲಿ ಪರಿಹಾರ ಘೋಷಣೆಯಾಗಿಲ್ಲ. ಅತ್ತ ಅತೀವೃಷ್ಠಿಯೂ ಆಗಲ್ಲಿಲ್ಲ ಇತ್ತ ಅನಾವೃಷ್ಠಿಯೂ ಆಗದ ಕಾರಣ ಬೆಳೆ ಬಂದಿಲ್ಲ ಅದಕ್ಕೆ ಸರಕಾರ ಮಟ್ಟದಲ್ಲಿ ಪರಿಗಣನೆಗೆ ತೆಗೆದುಕೊಂಡಿಲ್ಲ ಎಂದು ತಿಳಿದು ಬಂದಿದ್ದು ಇನ್ನೂ ಬೆಳೆವಿಮೆ ತುಂಬಿದವರಿಗೆ ಹಣ ಜಮೆಯಾಗುವ ಸಂಭವಿದೆ. ಇಲ್ಲಿಯವರೆಗೆ 10 ಜನ ರೈತ ಆತ್ಮಹತ್ಯೆ ಪ್ರಕರಣಗಳು ಜರುಗಿದ್ದು ಅದರಲ್ಲಿ 7 ಪ್ರಕರಣಗಳು ಇತ್ಯರ್ಥಗೊಂಡು ಪರಿಹಾರ ಸಿಗುವ ಹಂತದಲ್ಲಿವೆ ಇನ್ನೂ 3 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಬೆಂಕಿ ಹಚ್ಚಿದ ಪ್ರಕರಣಗಳು 7 ಅದರಲ್ಲಿ 5 ಇತ್ಯರ್ಥವಾಗಿದ್ದು ಇನ್ನೂ 2 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. 20-21 ನೇ ಸಾಲಿನಲ್ಲಿ ಕಬ್ಬು ಮತ್ತು ಹತ್ತಿ ಬೆಳೆಗೆ 16ಕೋಟಿ 54 ಲಕ್ಷ ಪರಿಹಾರ ದೊರಕಿದೆ. ಆಕಸ್ಮಿಕವಾಗಿ ಕಬ್ಬು ಸುಟ್ಟರೆ 1 ಹೆಕ್ಟೇರ ಪ್ರದೇಶಕ್ಕೆ ರೂ 20 ಸಾವಿರ ನೀಡಲು ಅವಕಾಶವಿದೆ ಎಂದು ತಿಳಿಸಿದರು.

ಶಿಕ್ಷಣ ಇಲಾಖೆಯಲ್ಲಿ ಬಿಆರ್ಪಿ ಮತ್ತು ಸಿಆರ್ಪಿ ಅಧಿಕಾರಿಗಳ ನೇಮಕಾತಿಗೆ ರಾಜಕಾರಣಿಗಳ ಶಿಫಾರಸ್ಸಿನ ಮೇರೆಗೆ ನೇಮಕಾತಿ ಮಾಡಿಕೊಳ್ಳುವ ಅಧಿಕಾರ ಎಲ್ಲಿದೆ ಹಾಗಿದ್ದರೆ ಪಾರದರ್ಶಕತೆ ಎಲ್ಲಿದೆ ಹೀಗಾಗಿ ಶಿಕ್ಷಣ ಇಲಾಖೆ ಹಾಳು ಮಾಡುತ್ತಿದ್ದೀರಿ ಎಂದು ಕೆಡಿಪಿ ಸದಸ್ಯ ಶಿವಾನಂದ ಆಲಮೇಲ ಪ್ರಶ್ನಿಸಿದರು.

ಬಿಇಓ ಆರ್.ಎಸ್.ನಿರಲಗಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕಾತಿಗೆ ಅವಕಾಶವಿದೆ ಇನ್ನೂ ಕೆಲ ಸಂದರ್ಭದಲ್ಲಿ ಖಾಲಿಇದ್ದ ಹುದ್ದೆಗಳನ್ನು ಆಯಾ ಸಂದರ್ಭಕ್ಕೆ ತಕ್ಕಂತೆ ನೇಮಕಾತಿ ಮಾಡಿಕೊಳ್ಳುವ ಅಧಿಕಾರ ಮೇಲಾಧಿಕಾರಿಗಳಿದೆ ಮತ್ತು ಸಿಬ್ಬಂದಿ ಕೊರತೆಯಿಂದ ಆಂಗ್ಲ ಮಾದ್ಯಮ ಶಾಲೆಗಳು ಪ್ರಾರಂಭಿಸಿಲ್ಲ. ಕೇವಲ 4 ಶಾಲೆಗಳಲ್ಲಿ ಮಾತ್ರ ಪ್ರಾರಂಭಿಸಲಾಗಿದೆ ಎಂದು ಹೇಳುತ್ತಿರುವಂತೆ ಶಾಸಕರು ಮಾತನಾಡಿ, ಕಡ್ಡಾಯ ಶಿಕ್ಷಣ ಯೋಜನೆಯಡಿ ಎಲ್ಲ ಮಕ್ಕಳಿಗೂ ಶಿಕ್ಷಣ ದೊರಕಬೇಕು ಆ ಕಾರಣಕ್ಕೆ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ಮತ್ತು ವಲಸೆ ಹೋದ ಮಕ್ಕಳ ಸಂಖ್ಯೆಯಲ್ಲಿ ಪಾರದರ್ಶಕತೆ ಇರಲಿ ಬರೀ ಸರಕಾರಿ ದಾಖಲಾತಿಯಲ್ಲಿ ಇರಕೂಡದು ಎಂದು ಎಚ್ಚರಿಕೆ ನೀಡಿದರು.

ವಿವಿಧ ಇಲಾಖೆಗಳ ಅಧಿಕಾರಿಗಳು ವರದಿ ಮಂಡಿಸಿದರು. ತಾಪಂ ಇಓ ಕೆ.ಹೊಂಗಯ್ಯ, ಆಡತಾಧಿಕಾರಿ ನಿಂಗಪ್ಪ ಗೋಠೆ ವೇದಿಕೆ ಮೇಲಿದ್ದರು.

- Advertisement -
- Advertisement -

Latest News

ಉಂಡು ಮಲಗಿದ ಮೇಲೂ ಗಂಡ ಹೆಂಡಿರ ಜಗಳ !

ಸಂಸಾರದ ಬಂಡಿ ಸರಾಗವಾಗಿ ಸಾಗಬೇಕಾದರೆ ಗಂಡ ಹೆಂಡತಿ ಎನ್ನುವ ಎರಡು ಗಾಲಿಗಳು ಸಮಸಮವಾಗಿ ಚಲಿಸಬೇಕು. ಎರಡೂ ಗಾಲಿಗಳಿಗೆ ಪ್ರಾಧಾನ್ಯತೆಯಿದೆ. ಒಂದು ಹೆಚ್ಚು ಒಂದು ಕಡಿಮೆ ಇಲ್ಲ....
- Advertisement -

More Articles Like This

- Advertisement -
close
error: Content is protected !!