ರಾಜ್ಯದ ಎಲ್ಲ ೨೨೫ ಶಾಸಕರನ್ನೂ ತನಿಖೆ ಮಾಡಿದರೆ ಯಾರು ಏಕ ಪತ್ನೀವೃತಸ್ಥರು ಅಂತ ಗೊತ್ತಾಗುತ್ತದೆ. ನನ್ನನ್ನೂ ಸೇರಿ ಎಲ್ಲರ ತನಿಖೆಯಾಗಬೇಕು ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ ಹೇಳಿದ್ದಾರೆ.
ಈವತ್ತು ಮರ್ಯಾದಾ ಪುರುಷೋತ್ತಮರಂತೆ ಮಾತನಾಡುವವರೆಲ್ಲರ ಬಗ್ಗೆ ತನಿಖೆಯಾಗಬೇಕು. ಯಾರು ಮುಖ್ಯಮಂತ್ರಿಯಾಗಿದ್ದರೋ ಅವರದೂ ತನಿಖೆಯಾಗಲಿ ಎಲ್ಲರ ಹೂರಣ ಹೊರಬರುತ್ತದೆ ಎಂದು ಅವರು ಪತ್ರಕರ್ತರೆದುರು ಆಕ್ರೋಶ ವ್ಯಕ್ತಪಡಿಸಿದರು.