ಕನ್ನಡದ ಸೇವೆ ಮಾಡುವ ಅವಕಾಶ ಮಾಡಿಕೊಡಬೇಕು- ನಾಡೋಜ ಡಾ. ಮಹೇಶ ಜೋಶಿ ಮನವಿ

Must Read

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...

ಅರುಣ ಕಿರಣ ಪ್ರತಿದಿನ

. . .🕉. . . . || ಶ್ರೀ ಗುರುಭ್ಯೋ ನಮಃ || || ಓ೦ ಗ೦ ಗಣಪತಯೇ ನಮಃ || 🙏ಶುಭೋದಯ🙏 16: 06: 2021 ಬುಧವಾರ ಕಲಿಯುಗಾಬ್ದ...

ಟೈಮ್ಸ್ ಆಫ್ ಕರ್ನಾಟಕ ವರದಿಗೆ ಸ್ಪಂದನೆ ; ಅಕ್ರಮ ಮರಳು ದಂಧೆಯ ಬಗ್ಗೆ ಸ್ಪಷ್ಟೀಕರಣ ನೀಡಿದ ಎಸಿ

ಸಿಂದಗಿ: "ಅಕ್ರಮ ಮರಳು ಸಾಗಾಟ ನಿರಂತರ ; ಜಾಣ ಕುರುಡರಾದ ಅಧಿಕಾರಿಗಳು " ಎಂಬ ಶೀರ್ಷಿಕೆಯಲ್ಲಿ ನಮ್ಮ ಟೈಮ್ಸ ಆಫ್ ಕರ್ನಾಟಕ ವೆಬ್ ಪತ್ರಿಕೆಯಲ್ಲಿ ದಿ....

ಮೂಡಲಗಿ: ‘ಕನ್ನಡದ ಸೇವೆ ಮಾಡುವ ಸಲುವಾಗಿ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ನನಗೆ ಕನ್ನಡದ ಸೇವೆ ಮಾಡಲಿಕ್ಕೆ ಅವಕಾಶ ಮಾಡಿಕೊಡಬೇಕು’ ಎಂದು ನಾಡೋಜ ಡಾ. ಮಹೇಶ ಜೋಶಿ ಮನವಿ ಮಾಡಿಕೊಂಡರು.

ಇಲ್ಲಿಯ ಚೈತನ್ಯ ವಸತಿ ಆಶ್ರಮ ಶಾಲೆಯಲ್ಲಿ ಏರ್ಪಡಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಕನ್ನಡ ಸಾಹಿತ್ಯ ಪರಿಷತ್‍ವನ್ನು ಜನರ ಬಳಿಗೆ ತಂದು, ಜನಸಾಮಾನ್ಯರ ಪರಿಷತ್ತನ್ನಾಗಿ ಮಾಡುವೆ ಎಂದರು.

ಕರ್ನಾಟಕದಲ್ಲಿ ಕನ್ನಡಿಗರು ಉದ್ಯೋಗದಿಂದ ವಂಚಿತರಾಗುತ್ತಿದ್ದು, ಕನ್ನಡ ಯುವಕರಿಗೆ ಉದ್ಯೋಗ ದೊರಕಿಸಿ ಕೊಡುವ ನಿಟ್ಟಿನಲ್ಲಿ ಪರಿಷತ್‍ದಿಂದ ಒತ್ತಾಯ ಮತ್ತು ಹೋರಾಟ ಮಾಡುವುದು ಮತ್ತು ಕನ್ನಡ ಭಾಷೆಯು ಅನ್ನದ ಭಾಷೆಯಾಗುವ ನಿಟ್ಟಿನಲ್ಲಿ ಪರಿಷತ್‍ದಿಂದ ಕಾರ್ಯಮಾಡಲಾಗುವುದು ಎಂದರು.

- Advertisement -

ಕನ್ನಡ ಸಾಹಿತ್ಯ ಪರಿಷತ್‍ವು ರಾಜಕೀಯದಿಂದ ಹೊರತಾಗಿರಬೇಕು ರಾಜಕಾರಣಿಗಳನ್ನು ಸಮ್ಮೇಳನದ ಅಧ್ಯಕ್ಷತೆಯನ್ನಾಗಿಸುವ ಕೆಟ್ಟ ಸಂಪ್ರದಾಯಕ್ಕೆ ಅವಕಾಶ ದೊರೆಯದಂತೆ ನಿಯಮಗಳನ್ನು ಸೃಷ್ಟಿಸಲಾಗುವುದು ಎಂದು ಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ಮಾತೃಭಾಷೆ ಕನ್ನಡದಲ್ಲಿಯೇ ಪ್ರಾಥಮಿಕ ಶಿಕ್ಷಣದ ಅನುಷ್ಠಾನ, ಕನ್ನಡ ಶಾಲೆಗಳು ಮುಚ್ಚದಂತೆ ಕಾವಲುವಹಿಸುವುದು, ಕಸಾಪ ಕಾರ್ಯಗಳ ಪಾರದರ್ಶಕತೆ, ಕಸಾಪ ಸದಸ್ಯತ್ವದ ಸರಳೀಕರಣ, ದಿವ್ಯಾಂಗರಿಗೆ, ಸೈನಿಕರಿಗೆ ಕಸಾಪದ ಉಚಿತ ಆಜೀವ ಸದಸ್ಯತ್ವದ ಗೌರವ ಕೊಡಿಸುವುದು, ಹಳ್ಳಿ ಹಳ್ಳಿಗೆ ಸಾಹಿತ್ಯದ ಕಂಪನ್ನು ಬೀರುವಂತ ನಿರಂತರ ಕಾರ್ಯಚಟುವಟಿಕೆಗಳನ್ನು ನಡೆಸಲಾಗುವುದು ಎಂದರು.

ನಾನು ಕನ್ನಡ ಸಾಹಿತ್ಯ ಪರಿಷತ್‍ಗೆ ಸೇವಾಕಾಂಕ್ಷಿಯಾಗಿ ಬರುತ್ತಿರುವೆ ಹೊರತು ಸ್ಪರ್ಧಿಯಾಗಿ, ಆಧಿಕಾರಕ್ಕಾಗಿ ಅಲ್ಲ ಎಂದು ಸ್ಪಷ್ಟಪಡಿಸಿದರು.

ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಅವರು ಮಾತನಾಡಿ ಡಾ. ಮಹೇಶ ಜೋಶಿ ಅವರು ದೂರದರ್ಶನದ ಕಾರ್ಯಕ್ರಮಗಳ ಮೂಲಕ ಕನ್ನಡ ಭಾಷೆಯನ್ನು ಬೆಳೆಸಿದ್ದಾರೆ. ಕನ್ನಡ ಶಾಲೆಗಳ ರಕ್ಷಣೆ, ಗಡಿ ಭಾಗದಲ್ಲಿ ಉಳಿಸುವ ಕಾರ್ಯಗಳನ್ನು ಮಾಡಬೇಕಾಗಿದೆ. ಕನ್ನಡ ಕನ್ನಡ ಕಟ್ಟುವ ಕಾರ್ಯಮಾಡುವಂತ ಉತ್ಸಾಹ ಡಾ. ಮಹೇಶ ಜೋಶಿ ಅವರಲ್ಲಿದ್ದು, ಅಂಥ ಸಮರ್ಥ ವ್ಯಕ್ತಿಗೆ ನಾನು ಬೆಂಬಲವಾಗಿ ಕಾರ್ಯಮಾಡುತ್ರಿರುವೆ ಎಂದರು.

ಜೋಶಿ ಅವರಂತ ಸಂಘಟಕರು ಕನ್ನಡ ಸಾಹಿತ್ಯ ಪರಿಷತ್ತಗೆ ಅತೀ ಅವಶ್ಯವಿದ್ದು, ಅವರನ್ನು ಬಹುಮತಗಳಿಂದ ಆಯ್ಕೆ ಮಾಡಿ ಅವರಿಗೆ ಕನ್ನಡ ಸೇವೆ ಮಾಡುವ ಅವಕಾಶ ನೀಡಬೇಕು ಎಂದರು.

ಚೈತನ್ಯ ಸಂಸ್ಥೆಯ ಅಧ್ಯಕ್ಷ ಸಿದ್ದಣ್ಣ ಹೊರಟ್ಟಿ, ಬಿ.ಬಿ. ಹಂದಿಗುಂದ, ಬಾಲಶೇಖರ ಬಂದಿ ಅವರು ಮಾತನಾಡಿದರು.

ನಬೀಸಾಬ ಕುಷ್ಟಗಿ, ಗುರುರಾಜ ಜೋಶಿ, ಚಂದ್ರು ಹಾಲೋಳ್ಳಿ, ಎಸ್.ಎಸ್. ಪಾಟೀಲ, ರವಿ ಭರಮನಾಯ್ಕ, ಸುನಿಲ ಹುಲ್ಲೋಳಿ, ಸಂಧ್ಯಾ ಪಾಟೀಲ ಇದ್ದರು.

- Advertisement -
- Advertisement -

Latest News

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...
- Advertisement -

More Articles Like This

- Advertisement -
close
error: Content is protected !!