ಹಾಲು ಕುಡಿಸುವ ಸ್ವಾಭಿಮಾನಿ ನಾಯಕ ನಮ್ಮ ಪ್ರತಿನಿಧಿಯಾಗಲಿ: ಆರ್.ಎಸ್.ದರ್ಗೆ

Must Read

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...

ಜನ ಸಾಮಾನ್ಯರ ತುರ್ತು ಸೇವೆಗಾಗಿ ಅರಭಾವಿ ಕ್ಷೇತ್ರದ ಎಲ್ಲ ಪಿಎಚ್‍ಸಿಗಳಿಗೆ ರಕ್ಷಾ ಕವಚ ವಾಹನ ಸೌಲಭ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿಯಲ್ಲಿ ಟಾಸ್ಕ್ ಫೋರ್ಸ್ ಸಭೆ ಮೂಡಲಗಿ : ಕೋವಿಡ್ ಎರಡನೆಯ ಅಲೆಯ ವಿರುದ್ದ ಹೋರಾಟ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಕೊರೋನಾ ವಾರಿಯರ್ಸ್‌ ಗಳ ಕಾರ್ಯ...

ಪುರಸಭೆಯ ಸಾಮಾನ್ಯ ಸಭೆ ಕರೆಯಲು ಮನವಿ

ಸಿಂದಗಿ: ಪಟ್ಟಣದ ಹಲವು ವಾರ್ಡುಗಳಲ್ಲಿ ನೀರಿನ ಸಮಸ್ಯೆ, ಗಟಾರಗಳ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ಉಲ್ಬಣ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಲು ಸಾಮಾನ್ಯ ಸಭೆ...

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮತದಾರರು ಸ್ವಾಭಿಮಾನ ಹಾಗೂ ಜನಪರ ನಾಯಕತ್ವಕ್ಕೆ ಗೌರವ ನೀಡಬೇಕು. ಹಾಲು ಕುಡಿಸುವ ನಾಯಕನನ್ನು ತಮ್ಮ ಪ್ರತಿನಿಧಿಯನ್ನಾಗಿ ಲೋಕಸಭೆಗೆ ಕಳುಹಿಸಬೇಕು ಎಂದು ಬಸವ ಭೀಮ ಸೇನೆಯ ಅಧ್ಯಕ್ಷ ಆರ್.ಎಸ್.ದರ್ಗೆ ಮನವಿ ಮಾಡಿದ್ದಾರೆ.

ಲೋಕಸಭೆ ಉಪ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸತೀಶ ಜಾರಕಿಹೋಳಿ ಅವರಿಗೆ ಬೆಂಬಲ ಸೂಚಿಸಿ, ಅವರಿಗೆ ಶಾಲು ಹೊದಿಸಿ, ಬಸವಣ್ಣನವರ ಭಾವಚಿತ್ರ ನೀಡಿ ಗೌರವಿಸಿ, ಮಾತನಾಡಿದ ಅವರು, ಬಾಬಾಗೌಡ ಪಾಟೀಲರ ಪ್ರತಿನಿಧಿತ್ವದ ನಂತರದ 17 ವರ್ಷಗಳ ಕಾಲ ಬೆಳಗಾವಿ ಲೋಕಸಭೆ ಕ್ಷೇತ್ರವು ಸ್ವಾಭಿಮಾನದ ಪ್ರತಿನಿಧಿತ್ವ ಇಲ್ಲದ ಕಾರಣ ತನ್ನ ಗೌರವವನ್ನು ಕಳೆದುಕೊಂಡಿದೆ ಎಂದರು.

ಈ ಮತಕ್ಷೇತ್ರದಲ್ಲಿ ಬಹುಸಂಖ್ಯಾತರಾಗಿರುವ ಲಿಂಗಾಯತರನ್ನು ಅಪಮಾನಿಸುವ, ಲಿಂಗಾಯತ ಮಠಾಧೀಶರ ವಿರುದ್ಧ ಅವಹೇಳನಕಾರಿ ಮಾತನಾಡಿದ, ಸ್ವಾಭಿಮಾನಿ ಮರಾಠಿಗರ ಮೀಸಲಾತಿ ಹೋರಾಟವನ್ನು ನಿಂದಿಸುವ, ಕನ್ನಡ ಪರ ಹೋರಾಟಗಾರರನ್ನು ಅವಮಾನಿಸುವ, ಮತಗಳಿಗಾಗಿ ಎಂಇಎಸ್‍ನ ಝಂಡಾಹಿಡಿದು, ನಂತರ ಕ್ಷೆಮೆ ಯಾಚಿಸಿದ, ಸ್ವಂತ ವಿವೇಚನೆ ಮತ್ತು ಆಲೋಚನೆ ಇಲ್ಲದೇ ಸೊರಗಿರುವ ಈ ಕ್ಷೇತ್ರದಲ್ಲಿ ಸ್ವಾಭಿಮಾನಿ ನಾಯಕನನ್ನು ಪ್ರತಿಷ್ಠಾಪಿಸಬೇಕು.

- Advertisement -

17 ವರ್ಷಗಳ ಕಾಲ ಅಧಿಕಾರ ಕಂಡರೂ ಸಂಪಿಗೆ ರಸ್ತೆಯ ಮನೆ, ಎಂದೂ ದಾಸೋಹದ ಮನೆಯಾಗಲಿಲ್ಲ. ಲಾನ್‍ಡೌನ್‍ನಂತಹ ಗಂಭೀರ ಸಮಯದಲ್ಲೂ ಜನರ ನೆರವಿಗೆ ಬರಲಿಲ್ಲ. ಅನುಕಂಪ ಮೂಡ ಬಹುದಾದ ಯಾವ ತ್ಯಾಗ, ಬಲಿದಾನ, ದಾನ-ಧರ್ಮ ಇಲ್ಲ. ಕ್ಷೇತ್ರದ ಜನರು ಸಮರ್ಥ ನಾಯಕನ ಆಯ್ಕೆಗೆ ನಿರ್ಧರಿಸಬೇಕು.

ಮಾನವ ಬಂಧುತ್ವ ವೇದಿಕೆಯ ಮೂಲಕ ಮೂಢ ನಂಬಿಕೆಗಳ ವಿರುದ್ಧ ನಾಡಿನಾದ್ಯಂತ ಜಾಗೃತಿ ಮೂಡಿಸುತ್ತಿರುವ, ಯುವ ಜನತೆಗೆ ಶಕ್ತಿಯಾಗಿರುವ, ಬಸವಣ್ಣನವರ ಲಿಂಗೈಕ್ಯದ ದಿನವಾಗಿರುವ ಬಸವ ಪಂಚಮಿಯನ್ನು ವೈಚಾರಿಕ ಚಿಂತನೆಗಳಿಗೆ ವೇದಿಕೆಯಾಗಿಸಿರುವ, ಬಸವ ಪಂಚಮಿಯೆಂದು ನಮ್ಮ ಮಕ್ಕಳಿಗೆ ಹಾಲು ಕುಡಿಸುವ ಮತ್ತು ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಎರಡು ಬಾರಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವ ಮೂಲಕ ಸ್ವಾಭಿಮಾನವನ್ನು ಎತ್ತಿ ಹಿಡಿದಿರುವ ಸತೀಶ ಜಾರಕಿಹೊಳಿ ಅವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಅವರು ಮನವಿ ಮಾಡಿದರು, ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...
- Advertisement -

More Articles Like This

- Advertisement -
close
error: Content is protected !!