spot_img
spot_img

ರಾಜ್ಯೋತ್ಸವ ನಿತ್ಯೋತ್ಸವವಾಗಲಿ – ಡಾ.ಭೇರ್ಯ ರಾಮಕುಮಾರ್

Must Read

ನವಂಬರ್ ತಿಂಗಳಲ್ಲಿ ಮಾತ್ರ ಕನ್ನಡ ರಾಜ್ಯೋತ್ಸವ ಆಚರಿಸಿದರೆ ಸಾಲದು ,ದಿನನಿತ್ಯದ ವ್ಯವಹಾರಗಳಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬಳಸುವ ಮೂಲಕ ರಾಜ್ಯೋತ್ಸವವು ನಿತ್ಯೋತ್ಸವವಾಗಬೇಕು. ಆಗ ಮಾತ್ರ ಕನ್ನಡ ನಾಡು, ನುಡಿ ಬಲಗೊಳ್ಳುತ್ತದೆ ಎಂದು ಹಿರಿಯ ಸಾಹಿತಿ, ಪತ್ರಕರ್ತ, ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ಹಾಗೂ ಮೈಸೂರು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ.ಭೇರ್ಯ ರಾಮಕುಮಾರ್ ಕರೆ ನೀಡಿದರು.

ಅವರು ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹಾನುಬಾಳು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ನಡೆಸಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಕನ್ನಡ ಭಾಷೆಗೆ ಸುಮಾರು ಮೂರು ಸಾವಿರ ವರ್ಷಗಳ ಇತಿಹಾಸವಿದೆ. ಕನ್ನಡ ಲಿಪಿಗೆ ಐದುನೂರು ವರ್ಷಗಳ ಇತಿಹಾಸವಿದೆ.

ಕನ್ನಡ ಭಾಷೆಯ ಸಾಹಿತಿಗಳಿಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು, ಎರಡು ಸರಸ್ವತಿ ಸಮ್ಮಾನ್ ಪ್ರಶಸ್ತಿ, ಮೂರು ಭಾರತರತ್ನ ಪ್ರಶಸ್ತಿ ಹಾಗೂ ಮೂರು ರಾಷ್ಟ್ರಕವಿ ಪ್ರಶಸ್ತಿ ದೊರೆತಿದೆ. ಇಂತಹ ಸತ್ವಯುತವಾದ ಕನ್ನಡ ಭಾಷೆ ಕನ್ನಡಿಗರ ನಿರ್ಲಕ್ಷ್ಯದಿಂದಾಗಿ ವಿನಾಶದತ್ತ ಸಾಗಿದೆ. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಅನ್ಯ ಭಾಷಿಗರ ಹಾವಳಿ ತೀವ್ರವಾಗಿದೆ.

ಇನ್ನು ರಾಜ್ಯದ ಗಡಿ ಪ್ರದೇಶಗಳಲ್ಲಿ ಅನ್ಯ ಭಾಷೆಗಳು ಕನ್ನಡಿಗರ ಮೇಲೆ ಆಕ್ರಮಣ ನಡೆಸಿವೆ. ಬ್ಯಾಂಕ್ ಹಾಗೂ ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಅನ್ಯ ರಾಜ್ಯಗಳ ವ್ಯಕ್ತಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಅವರು ಕನ್ನಡದಲ್ಲಿ ವ್ಯವಹರಿಸುತ್ತಿಲ್ಲ. ಇದರಿಂದಾಗಿ ಗ್ರಾಮೀಣ ರೈತರು, ಮಹಿಳೆಯರು ಅಪಾರ ತೊಂದರೆಗೆ ಸಿಲುಕಿದ್ದಾರೆ ಎಂದವರು ವಿಷಾದ ವ್ಯಕ್ತಪಡಿಸಿದರು.

ಕನ್ನಡವನ್ನೇ ಜೀವನದ ಉಸಿರಾಗಿಸಿಕೊಂಡವರು ಮಹಾನ್ ಸಾಧಕರಾಗಿದ್ದಾರೆ. ಹೆಚ್ಚು ವಿದ್ಯಾಭ್ಯಾಸ ಪಡೆಯದ ವರನಟ ಡಾ.ರಾಜಕುಮಾರ್ ಹಲವಾರು ರಾಷ್ಟ್ರೀಯ, ಅಂತರರಾಷ್ಟ್ರೀಯ ಪ್ರಶಸ್ತಿ ಗಳಿಸಿದ್ದು, ರಾಷ್ಟ್ರಕವಿ ಕುವೆಂಪು ಅವರು 62 ಪ್ರತಿಷ್ಟಿತ ಪ್ರಶಸ್ತಿಗಳನ್ನು ಗಳಿಸಿದ್ದು ಕನ್ನಡ ಸೇವೆಯಿಂದಲೇ ಎಂಬುದನ್ನು ಎಲ್ಲರೂ ಮನಗಾಣಬೇಕು.ಮಕ್ಕಳಿಗೆ ನೂರು ಮಂದಿ ಜೊತೆಯಲ್ಲಿದ್ದರೂ ಹೆತ್ತ ತಾಯಿಯ ಮೇಲೆ ಹೇಗೆ ಬಿಡಿಸಲಾರದ ಅನುಬಂಧವೋ ಹಾಗೇಯೇ ಬದುಕಿಗಾಗಿ ನೂರು ಭಾಷೆ ಕಲಿತರೂ ಕನ್ನಡ ತಾಯಿಯ ಮೇಲೆ ಅಪರಿಮಿತ ಪ್ರೀತಿ,ಮಮತೆ ಇರಬೇಕು ಎಂದವರು ನುಡಿದರು.

ಸಕಲೇಶಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀಮತಿ ಶಾರದಾ ಗುರುಮೂರ್ತಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕನ್ನಡದ ಕವಿಗಳು ,ಚಿಂತಕರು ಶತಮಾನಗಳ ಕಾಲ ವಚನಗಳ ಮೂಲಕ, ದಾಸವಾಣಿಗಳ ಮೂಲಕ, ಕೃತಿಗಳ ಮೂಲಕ ಜನಜಾಗೃತಿ ಮೂಡಿಸುತ್ತಾ ಬಂದಿದ್ದಾರೆ. ಕನ್ನಡವೆನ್ನುವುದು ಬರೀ ನುಡಿಯಲ್ಲ ಅದೊಂದು ಶಕ್ತಿ, ಅದೊಂದು ವಿಶ್ವ ಶಾಂತಿ, ಅದೊಂದು ಮಹಾಮಂತ್ರ ಎಂದು ಮಹಾಕವಿಗಳು, ಚಿಂತಕರು ನುಡಿದಿದ್ದಾರೆ. ಕನ್ನಡಿಗರಿಗೆ ಇದುವೇ ಮಹಾಮಂತ್ರ ಎಂದು ನುಡಿದರು.

ಹಾನುಬಾಳು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಿ.ಎಸ್.ಲೋಕೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ವಿಮಲಾ ರಾಜಯ್ಯ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಾಹಿತಿ ಡಾ.ಭೇರ್ಯ ರಾಮಕುಮಾರ್, ಸಕಲೇಶಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀಮತಿ ಶಾರದಾ ಗುರುಮೂರ್ತಿ, ಸ್ಥಳೀಯ ಸರ್ಕಾರಿ ಆರೋಗ್ಯ ಕೇಂದ್ರದ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.

ರಮೇಶ್ ಭಟ್ ಪ್ರಾರ್ಥಿಸಿದರು.ಕವಯತ್ರಿ ಕೀರ್ತಿ ಕಿರಣಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ವಿಜಯಕುಮಾರ್ ಸ್ವಾಗತಿಸಿದರು. ಅಬ್ದುಲ್ ಲತೀಫ್ ಪ್ರಸ್ತಾವಿಕ ಭಾಷಣ ಮಾಡಿದರು. ಶ್ರೀಮತಿ ಪ್ರೇಮ ಪುಣ್ಯಮೂರ್ತಿ ಅತಿಥಿಗಳನ್ನು ಪರಿಚಯಿಸಿದರು. ಹೆಚ್.ಜಿ.ಮೋಹನಕುಮಾರ್ ವಂದಿಸಿದರು. ನಂತರ ಶಾಲಾ ಕಾಲೇಜುಗಳ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

- Advertisement -
- Advertisement -

Latest News

ಜಲಜೀವನ ಮಿಷನ್ ಪ್ರಚಾರ ವಾಹನಕ್ಕೆ ಚಾಲನೆ

ಬೈಲಹೊಂಗಲ: ಕೇಂದ್ರ ಮತ್ತು ರಾಜ್ಯ ಸರ್ಕಾರದ ವತಿಯಿಂದ ಪ್ರತಿ ಮನೆಗೆ ನಲ್ಲಿಯ ಮೂಲಕ ಶುದ್ಧ ಕುಡಿಯುವ ನೀರು ಜಲಜೀವನ ಮಿಷನ್ ಯೋಜನೆ ಕುರಿತು ಆಟೋ ಪ್ರಚಾರ...
- Advertisement -

More Articles Like This

- Advertisement -
close
error: Content is protected !!