spot_img
spot_img

ಗುರು ಶಿಷ್ಯರ ಬಾಂಧವ್ಯ ವೃದ್ದಿಯಾಗಲಿ

Must Read

spot_img
- Advertisement -

ಮೂಡಲಗಿ – ಕಲಿಸಿದಾತ ವರ್ಣ ಮಾತ್ರಂ ಗುರು ಎಂಬ ನಾಣ್ನುಡಿಯಂತೆ ಅಕ್ಷರ ಕಲಿಸಿದ ಗುರು ಎಂದಿಗೂ ಶ್ರೇಷ್ಠರೆ.ಅವರ ಋಣ ತಿರಿಸಲು ಎಂದಿಗೂ ಸಾಧ್ಯವಿಲ್ಲ.

ಶಿಕ್ಷಕರ ದಿನದಂದು ಮೂಡಲಗಿಯ 1990 ನೇ ಸಾಲಿನ ಎಸ್.ಎಸ್ ಆರ್ ಪ್ರೌಢ ಶಾಲೆಯ ವಿಧ್ಯಾರ್ಥಿಗಳು ಈ ಸಲ ಶಿಕ್ಷಕರ ದಿನಾಚರಣೆಯನ್ನು ಅರ್ಥ ಪೂರ್ಣವಾಗಿ ಆಚರಿಸುವ ಮೂಲಕ ಸಮಾಜಕ್ಕೆ ಮತ್ತು ಈಗಿನ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ.

ತಮಗೆ ಪ್ರೌಢ ಶಾಲೆಯಲ್ಲಿ ಮತ್ತು ಪ್ರಾಥಮಿಕ‌ ಶಾಲೆಯಲ್ಲಿ ಕಲಿಸಿದ ಗುರುಗಳ ಮನೆಗೆ ತೆರಳಿ ಗುರುವಿನ ಕಾಲಿಗೆ ನಮಸ್ಕರಿಸಿ, ಗುಲಾಬಿ ನೀಡಿ, ಆರೋಗ್ಯ ವಿಚಾರಿಸಿ, ಸಿಹಿ ಹಂಚಿ ಅವರ ಕುಟುಂಬಕ್ಕೆ ನಾವು ಗುರುಗಳ ಶಿಷ್ಯರು ಎಂಬದನ್ನು ತೋರಿಸುವ ಮೂಲಕ ಗುರು ಶಿಷ್ಯರ ಸಂಬಂಧವನ್ನು ಗಟ್ಟಿ ಗೊಳಿಸಿದ್ದಾರೆ.

- Advertisement -

ಹಳೆಯ ವಿದ್ಯಾರ್ಥಿಗಳ ಆಗಮನದಿಂದ ಹಳೆಯ ದಿನಗಳನ್ನು ಮೆಲುಕು ಹಾಕುವುದರೊಂದಿಗೆ ಗುರುಗಳ ಮುಖದಲ್ಲಿಯ ಹರ್ಷಕಂಡ ವಿದ್ಯಾರ್ಥಿಗಳು ಸಹ ಭಾವಪರವಶರಾಗಿದ್ದು ಇದೊಂದು ಘಟನೆ ಎಷ್ಟೋ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿದೆ.

ಹಳೆಯ ವಿದ್ಯಾರ್ಥಿ ಶಿವಾನಂದ ಮುಧೋಳ ಮಾತನಾಡಿ,ಯುವಕರು ಮೊಬೈಲ್ ಹಾಗೂ ತಂತ್ರಜ್ಞಾನದ ಅವರಸದಲ್ಲಿ ಕಲಿಸಿದ ಗುರುಗಳನ್ನು ಮರೆಯುತ್ತಿದ್ದಾರೆ. ಗುರು ಶಿಷ್ಯರ ಸಂಬಂಧ ತಂದೆ ಮಕ್ಕಳ ಸಂಬಂಧ ತರಹದು. ಅದು ಎಂದೂ ಕೊನೆಯಾಗಲಾರದು. ಸದ್ಯದ ವಿದ್ಯಾರ್ಥಿ ಗಳಲ್ಲಿ ಈ ಪರಂಪರೆ, ಸಂಸ್ಕೃತಿ ಮತ್ತು ಗುರುವಿನ ಮೌಲ್ಯಗಳನ್ನು ತುಂಬಬೇಕಾದ ಅವಶ್ಯಕತೆ ಬಂದಿರುವುದು ಖೇದಕರ ಸಂಗತಿ.ಆದರೂ ಈಗಿನ ವಿದ್ಯಾರ್ಥಿಗಳು ಬೇಗನೆ ಕಲಿಯುತ್ತಾರೆ ಎಂಬ ವಿಶ್ವಾಸ ಇದೆ ಎಂದರು.

ಹಳೆಯ ವಿದ್ಯಾರ್ಥಿಗಳಾದ ಶಿವಾನಂದ ಕಂಬಾರ,ಚಿದಾನಂದ ಬೆಳಕೂಡ, ಮಹೇಶ ಹೀರೆಮಠ, ಉಮೇಶ ಬೆಳಕೂಡ, ಸಂತ್ರಾಮ ನಾಶಿ, ಅನ್ವರ ಮೋಮಿನ,ಈರಪ್ಪ ಬಡಿಗೇರ, ಶಂಕರ ಮೂಡಲಗಿ ಇದ್ದರು.

- Advertisement -
- Advertisement -

Latest News

ಹನಿಗವನಗಳು

ಹನಿಗವನಗಳು 1) ಸುಳ್ಳುಗಾರರು ಹತ್ತು ನಾಲಿಗೆಯ ರಾವಣ ಹೇಳಲಿಲ್ಲ ಒಂದು ಸುಳ್ಳು ಒಂದೇ ನಾಲಿಗೆಯ ರಾಜಕಾರಣಿ ಹೇಳುತ್ತಾನೆ ದಿನಕ್ಕತ್ತು ಸುಳ್ಳು! 2) ಶೀಲಾ ನೆರೆಮನೆ ಶೀಲಾ ಪರ ಪುರುಷರೊಡನೆ ಸೇರಿ ಹೆಸರು ಕೆಡಿಸಿಕೊಂಡಳು 3) ಟಿವಿ ಹಾವಳಿ ಮನೆಯಲ್ಲಿ ಟಿವಿ ಮುಂದೆ ಸದಾ ಇರುವ ವಿದ್ಯಾ ರ್ಥಿಗಳು ಶಾಲೆಯಲ್ಲಿ ಹಿಂದೆ ಬೀಳುವರು. 4) ವಾಸ್ತವ ಕಟ್ಟುವವು...
- Advertisement -

More Articles Like This

- Advertisement -
close
error: Content is protected !!
Join WhatsApp Group