ಬೆಳಗಾವಿ : ಆಗಸ್ಟ್ -31 ರಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವರಾದ ಶ್ರೀ. ಸಂತೋಷ ಕಾಮಗೌಡ ಅವರು ಸ್ವಚ್ಛತೆ ನಮ್ಮ ಆದ್ಯ ಕರ್ತವ್ಯವಾಗಲಿ ಎಂದು ವಂಟಮೂರಿಯಲ್ಲಿ ನಡೆದ ರಾಷ್ಟ್ರಿಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷೀಯ ಮಾತುಗಳನ್ನಾನಾಡಿದರು.
ವ್ಯಕ್ತಿತ್ವ ವಿಕಸನಕ್ಕೆ, ಜೀವನದಲ್ಲಿ ಸದುದ್ದೇಶ ಹೊಂದಲು ಎನ್. ಎಸ್. ಎಸ್. ಸಹಕಾರಿಯಾಗಲಿದೆ. ವಿದ್ಯಾರ್ಥಿಗಳು ಪಠ್ಯತೇರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಅಂದಾಗ ವಿದ್ಯಾರ್ಥಿಗಳು ಸಾಮಾಜಿಕವಾಗಿ ಬೆಳವಣಿಗೆ ಹೊಂದಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರೊ. ರವೀಂದ್ರ ಕದಂ, ಕುಲಸಚಿವರು(ಮೌಲ್ಯಮಾಪನ) ಇವರು ಮಾತನಾಡಿ ಶಿಬಿರಾರ್ಥಿಗಳು ಒಂದು ವಾರಗಳ ಪರಿಯಂತರ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಂಟಮುರಿ ಗ್ರಾಮದಲ್ಲಿ ಜಾಗೃತಿ ಮೂಡಿಸಿದ್ದೀರಿ ಮತ್ತು ನಿಮ್ಮ ವೈಯಕ್ತಿಕ ಬೆಳವಣಿಗೆ ಕೂಡ ಇದರಿಂದ ಸಾಧ್ಯವಾಗುತ್ತದೆ ಎಂದು ಹೇಳಿದರು.
ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಮತ್ತು ಅತ್ಯುತ್ತಮ ಸ್ವಯಂ ಸೇವಕಿಯಾಗಿ ಕು. ಸುಜನ ರೆಡ್ಡಿ, ಹಾಗೂ ಕು. ಕಮಲೇಶ, ಅತ್ಯುತ್ತಮ ತಂಡವಾಗಿ ನಳಂದ ತಂಡ ಪ್ರಶಸ್ತಿ ಸ್ವೀಕರಿಸಿದರು. ಡಾ. ಸಂತೋಷ ಪಾಟೀಲ ಸ್ವಾಗತಿಸಿದರು. ಡಾ. ಅಶ್ವಿನಿ ಜಾಮೂನಿ ವರದಿ ವಾಚಿಸಿದರು, ಡಾ. ಸಂಜೀವ ತಳವಾರ ಪ್ರಶಸ್ತಿ ಘೋಷಿಸಿದರು, ಕಾರ್ಯಕ್ರಮದಲ್ಲಿ ಶ್ರೀ ಪ್ರಕಾಶ ಕುರೂಪಿ, ಶ್ರೀ.ಮಾವುತ ಎಂ ಉಪಸ್ಥಿತರಿದ್ದರು. ಕು. ಸಹನಾ ಮತ್ತು ಅರುಣ ನಿರೂಪಿಸಿದರು ಶಿಬಿರಾಧಿಕಾರಿಗಳಾದ ಡಾ. ಬಸವರಾಜ ಹಡಪದ ವಂದಿಸಿದರು.