spot_img
spot_img

ಕಮಿಷನ್ ಆರೋಪದ ದಾಖಲೆ ಕೊಡಲಿ – ಮುನೇನಕೊಪ್ಪ

Must Read

ಬೀದರ – ನರೇಂದ್ರ ಮೋದಿ ಸರ್ಕಾರದಲ್ಲಿ ಯಾವುದೇ ಭ್ರಷ್ಟಾಚಾರ ನಡೆಯದು. ಗುತ್ತಿಗೆದಾರರು ೩೦% – ೪೦% ಕಮಿಷನ್ ಬಗ್ಗೆ ಹೇಳುತ್ತಾರೆ. ಗುತ್ತಿಗೆದಾರರ ಹತ್ತಿರ ಏನು ದಾಖಲೆ ಇದೆ ? ದಾಖಲೆಯಿಲ್ಲದೆ ಆರೋಪ ಮಾಡುವುದರಲ್ಲಿ ಏನು ಪ್ರಯೋಜನ ಎಂದು ಬೀದರ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಕೇಳಿದರು.

ನಗರದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ಭ್ರಷ್ಟಾಚಾರ ನಡೆಯ ಬಾರದು ಎಂಬ ಉದೇಶದಿಂದ ಇಡೀ ದೇಶಾದ್ಯಂತ ಜೀರೊ ಅಕೌಂಟ್ ಖಾತೆ ತೆಗೆದಿದ್ದಾರೆ ಪ್ರಧಾನಿ ನರೇಂದ್ರ ಮೋದಿಯವರು.ಯಾರೋ ಒಬ್ಬರು ಆಧಾರ ರಹಿತ ಆರೋಪ ಮಾಡಿದರೆ ಏನು ಪ್ರಯೋಜನ. ದಾಖಲೆ ಇದ್ದರೆ complaint ಮಾಡಲಿ. ರಾಜ್ಯ ಸರ್ಕಾರದಲ್ಲಿ ಹಲವು ಸಂಸ್ಥೆಗಳು ತನಿಖೆ ಮಾಡಲು ಇವೆ ಅವುಗಳಿಂದ ನಿಜ ಸಂಗತಿ ಹೊರಬರುತ್ತದೆ ಎಂದರು.

ನಾಯಕತ್ವ ಬದಲಾವಣೆ ಇಲ್ಲ

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತ ವದಂತಿಗಳನ್ನು ತಳ್ಳಿಹಾಕಿದ ಮುನೇನಕೊಪ್ಪ ಅವರು, ನಾಯಕತ್ವ ಬದಲಾವಣೆಯ ಬಗ್ಗೆ ಸುದ್ದಿಗಳನ್ನು ನಾವು ಕೇವಲ ಟಿವಿ ಮತ್ತು ಪತ್ರಿಕೆಗಳಲ್ಲಿ ನೋಡುತ್ತಾ ಇದ್ದೇವೆ ಆದರೆ ವಾಸ್ತವದಲ್ಲಿ ಬದಲಾವಣೆ ಇಲ್ಲ ಎಂದರು.

ನಮ್ಮ ಪ್ರಧಾನಿ ನರೇಂದ್ರ ಮೋದಿಯವರು, ವರಿಷ್ಠ ನಾಯಕರಾದ ಜೆ ಪಿ ನಡ್ಡಾ ಹಾಗೂ ಅಮಿತ್ ಷಾ ಇದ್ದಾರೆ, ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್ ಇದ್ದಾರೆ. ನಾಯಕತ್ವ ಬದಲಾವಣೆ ಅಂತ ಇದ್ದರೆ ಅದರ ಬಗ್ಗೆ ವರಿಷ್ಠರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಶಂಕರ ಪಾಟೀಲ ಹೇಳಿದರು.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಮಣ್ಣು ಉಳಿಸಿ ಹೋರಾಟಕ್ಕೆ ಬೆಂಬಲ ನೀಡೋಣ – ಅಶೋಕ ಅಲ್ಲಾಪೂರ

ಸಿಂದಗಿ - ಜಗತ್ತಿನ ಜೀವ ಸಂಕುಲಕ್ಕೆ ಆಶ್ರಯವಾದ ಭೂಮಿಯನ್ನು ಮತ್ತು ಮಣ್ಣನ್ನು ಉಳಿಸಿ ಮುಂದಿನ ಜನಾಂಗಕ್ಕೆ ಫಲವತ್ತಾದ ಭೂಮಿ ನೀಡಲು ಶ್ರೀ ಸದ್ಗುರು ಜಗ್ಗಿ ವಾಸುದೇವ್...
- Advertisement -

More Articles Like This

- Advertisement -
close
error: Content is protected !!