spot_img
spot_img

ನೈತಿಕ ಹೊಣೆ ಹೊತ್ತು ಪುರಸಭಾಧ್ಯಕ್ಷರು ರಾಜೀನಾಮೆ ನೀಡಲಿ – ಹಣಮಂತ ಸುಣಗಾರ

Must Read

ಸಿಂದಗಿ: ಕಳೆದ ನ 26 ಹಾಗೂ ಜ. 24 ರಂದು ನಡೆಸಿದ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಅವಿಶ್ವಾಸ ಸಭೆ ನಡೆಸದೇ ಸಾಮಾನ್ಯ ಸಭೆ ನಡೆಸಿದ್ದು ಕಾನೂನು ಬಾಹಿರವಾಗಿದ್ದು ಅಂದೇ ಅಧ್ಯಕ್ಷರ ಅವಧಿ ಮುಗಿದು ಹೋಗಿದೆ ನ್ಯಾಯಾಲಯ ಮೂಲಕ ಕುರ್ಚಿ ಮೇಲೆ ಕುಳಿತಿದ್ದಾರೆ ಕಾರಣ ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ ತೊಲಗಬೇಕು ಎಂದು ಪುರಸಭೆ ಸದಸ್ಯ ಹಣಮಂತ ಸುಣಗಾರ ಆಗ್ರಹಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾತನಾಡಿ, ಹಿಂದೆ 2 ಬಾರಿ ಕಾನೂನಿನ ಮೂಲಕ ಸಬೆಗಳು ರದ್ದಾಗಿವೆ ಈಗ 15 ಜನ ಸದಸ್ಯರು ಸೇರಿ ಅವಿಶ್ವಾಸ ಗೊತ್ತುವಳಿ ಮನವಿ ಅನ್ವಯ ಪುರಸಭೆ ನಿಯಮಾನುಸಾರ ಎಲ್ಲ ಸದಸ್ಯರ ಸಭೆ ಕರೆದು ಸಹಿ ದೃಢೀಕರಿಸಬೇಕಿತ್ತು ಹಾಗೆ ಮಾಡದೆ ಕಾನೂನು ಬಾಹಿರ ಸಭೆ ನಡೆಸಿದ್ದಾರೆ. ಈ ಬಾರಿ ಸಲ್ಲಿಸಿದ ಅವಿಶ್ವಾಸ ಗೊತ್ತುವಳಿ ಅಧಿಕೃತವಾಗಿದೆ ಕಾರಣ ಕಳೆದ 2 ಬಾರಿ ನಡೆಸಿದ ಸಭೆಗಳನ್ನು ರದ್ದುಗೊಳಿಸುವಂತೆ 14 ಜನ ಸದಸ್ಯರು ಜ. 27ರಂದು ಯೋಜನಾಧಿಕಾರಿಗಳಿಗೆ ಹಾಗೂ ಇಂಡಿ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರನ್ವಯ ಮಾರ್ಚ 14 ರಂದು ಪತ್ರ ರವಾನೆ ಮಾಡಲಾಗಿದ್ದು ಇಲ್ಲಿಯವರೆಗೆ ಸಿಬ್ಬಂದಿ ಆ ಪತ್ರವನ್ನು ಇಲ್ಲಿಯವರೆಗೆ ಮುಚ್ಚಿಟ್ಟು ಪಟ್ಟಣವನ್ನು ಹಾಳುಗೆಡವಿದ್ದಾರೆ ಎಂದು ಆರೋಪಿಸಿದರು.

ಮಾಜಿ ಅಧ್ಯಕ್ಷ ಬಾಷಾಸಾಬ ತಾಂಬೋಳಿ, ಶರಣಗೌಡ ಪಾಟೀಲ, ಗೊಲ್ಲಾಳ ಬಂಕಲಗಿ, ರಾಜಣ್ಣಿ ನಾರಾಯಣಕರ ಮಾತನಾಡಿ, ಪುರಸಭೆಯ ಅಧ್ಯಕ್ಷರ ಮತ್ತು ಉಪಾಧ್ಯಕ್ಷರು ಅವಿಶ್ವಾಸ ಗೊತ್ತುವಳಿಗಾಗಿ 14 ಜನ ಪುರಸಭೆಯ ಸದಸ್ಯರು ಜ.01 ರಂದು ಸದರಿ ಸಭೆ ನಡೆಸಲು ಮನವಿ ಸಲ್ಲಿಸಿದ್ದು, ಮುಖ್ಯಾಧಿಕಾರಿಗಳು ಜ.21 ರಂದು ಪುರಸಭೆ ಸಭಾಭವನದಲ್ಲಿ ವಿಶೇಷ ಸಾಮಾನ್ಯ ಸಭೆಯ ತಿಳಿವಳಿಕೆ ನೀಡಿದ್ದು  ಆದರೆ ಜ.24  ರಂದು ಕೇವಲ 08 ಸದಸ್ಯರೊಂದಿಗೆ ಸಭೆಯನ್ನು ಮಾಡಿದ್ದು ಕಾನೂನು ಬಾಹಿರವಾಗಿದೆ ಯಾವುದೇ ಸಾಮಾನ್ಯ ಸಭೆ ಅಥವಾ ವಿಶೇಷ ಸಾಮಾನ್ಯ ಸಭೆಗೆ ಹಾಜರಾಗಲು ಪುರಸಭೆ ಕಾಯ್ದೆ 1964 ಅಧಿನಿಯಮ-50 ರಡಿಯಲ್ಲಿ ಕೌನ್ಸಿಲ್‍ಗಳ ಒಟ್ಟು ಸಂಖ್ಯೆಯ ಮೂರನೇ ಒಂದಕ್ಕಿಂತ ಕಡಿಮೆ ಕೌನ್ಸಿಲ್‍ಗಳು ಹಾಜರಿರಬೇಕಾಗಿತ್ತು ಯಾವುದೇ ರೀತಿಯ ನಿಯಮಾನುಸಾರ ತೆಗೆದುಕೊಳ್ಳದೆ ಕೋರಂ ಇಲ್ಲದೆ ಸಭೆ ನಡೆಸಿ ಕಾನೂನನ್ನು ಗಾಳಿಗೆ ತೂರಿದ್ದಾರೆ.

ಅಧ್ಯಕ್ಷರು 22 ತಿಂಗಳ ಕಾರ್ಯಾವಧಿಯಲ್ಲಿ ಕೇವಲ 2 ಸಭೆಗಳನ್ನು ಮಾತ್ರ ನಡೆಸಿದ್ದಾರೆ. ಕಾರಣ ಅಧ್ಯಕ್ಷರ ಅಧಿಕಾರ ತೃಪ್ತಿಕರವಾಗಿರದಿದ್ದರೆ 6 ತಿಂಗಳಲ್ಲಿ ಅವಿಶ್ವಾಸ ಗೊತ್ತುವಳಿ ಮಂಡಿಸಬಹುದು ಎನ್ನುವ ಪುರಸಭೆ ಕಾಯ್ದೆಯಲ್ಲಿ ಬರುತ್ತದೆ ಅದನ್ನು ಕೂಡಾ ಪಾಲನೆ ಮಾಡದೇ ನ್ಯಾಯಾಲಯಕ್ಕೂ ದಾರಿ ತಪ್ಪಿಸಿದ್ದಾರೆ. ಅಲ್ಲದೆ ಪಟ್ಟಣದ ಅಭಿವೃದ್ಧಿಗೆ ರೂ 1ಕೋಟಿ 73 ಲಕ್ಷ ಅನುದಾನ ಬಂದಿದ್ದು ಇನ್ನೂವರೆಗೂ ಕ್ರಿಯಾಯೋಜನೆ ರೂಪಿಸಿಲ್ಲ. ಅದನ್ನು ಕೆಲ ಸದಸ್ಯರು ಸೇರಿ ಲೂಟಿ ಹೊಡೆಯುವ ಹುನ್ನಾರದಲ್ಲಿದ್ದಾರೆ ಆದಕಾರಣ ಬೇಗನೇ ಅವಿಶ್ವಾಸ ಮಂಡನೆ ಸಭೆ ಕರೆದು ಸಂವಿಧಾನಾತ್ಮಕ ಬದ್ದತೆ ಕಾರಣರಾಗಲಿ ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಸಂದೀಪ ಚೌರ, ಸದಸ್ಯರ ಪ್ರತಿನಿಧಿ ಸರಣಪ್ಪ ಸುಲ್ಪಿ, ಮಹಾಂತೇಶ ನಾಯ್ಕೋಡಿ, ಆನಂದ ಡೋಣ್ಣೂರ ಸೇರಿದಂತೆ ಅನೇಕರಿದ್ದರು.

- Advertisement -
- Advertisement -

Latest News

ನಿಪ್ಪಾಣಿ ನಗರಸಭೆಯ ಮೇಲಿನ ಭಗವಾಧ್ವಜ ತೆರವುಗೊಳಿಸಲು ಗಡಾದ ಆಗ್ರಹ

ಮೂಡಲಗಿ - ಸುಮಾರು ೩೧ ವರ್ಷಗಳಿಂದ ಬೆಳಗಾವಿಯ ನಿಪ್ಪಾಣಿ ನಗರಸಭೆಯ ಕಟ್ಟಡದ ಮೇಲೆ ಅನಧಿಕೃತವಾಗಿ ಹಾರಾಡುತ್ತಿರುವ ಭಗವಾ ಧ್ವಜವನ್ನು ತೆರವುಗೊಳಿಸಬೇಕು ಎಂದು ಮನವಿ ಸಲ್ಲಿಸಿ ಒಂದು...
- Advertisement -

More Articles Like This

- Advertisement -
close
error: Content is protected !!