ಸವದತ್ತಿ – ಶಿಕ್ಷಣ ಇಲಾಖೆಯ ಕಾರ್ಯ ಸುಗಮವಾಗಿ ಸಾಗಲು ವಿವಿಧ ಹುದ್ದೆಗಳನ್ನು ಪರೀಕ್ಷೆ ಮೂಲಕ ಭರ್ತಿ ಮಾಡುವ ಜೊತೆಗೆ ಶೈಕ್ಷಣಿಕ ಗುಣಮಟ್ಟ ಹೆಚ್ಚಲು ವ್ಯವಸ್ಥೆ ಕಾರ್ಯ ಜರುಗಿದಾಗ ಹಲವು ಹುದ್ದೆಗಳು ಸೃಷ್ಟಿಯಾದವು. ಕ್ಷೇತ್ರ ಸಂಪನ್ಮೂಲ ವ್ಯಕ್ತಿ, ವಲಯ ಸಂಪನ್ಮೂಲ ವ್ಯಕ್ತಿ, ಶಿಕ್ಷಣ ಸಂಯೋಜಕ ಹೀಗೆ ಇತ್ಯಾದಿ ಹುದ್ದೆಗಳನ್ನು ಸೃಜಿಸಲಾಯಿತು. ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಈ ಹುದ್ದೆಗಳು ಕಾರ್ಯ ನಿರ್ವಹಿಸಲಾರಂಭಿಸಿದವು. ಸಿಆರ್ ಪಿ.ಬಿಆರ್ ಪಿ.ಹುದ್ದೆಗಳ ಜೊತೆಗೆ ಶಿಕ್ಷಣ ಸಂಯೋಜಕ ಹುದ್ದೆ ಮಹತ್ವದ್ದಾಗಿದೆ.ಹಳಬರ ನಿರ್ಗಮನದ ಜೊತೆಗೆ ಹೊಸಬರ ಆಗಮನ ಸಹಜ ಪ್ರಕ್ರಿಯೆ ಈ ದಿಸೆಯಲ್ಲಿ ಹಳಬರ ಕಾರ್ಯ ವೈಖರಿ ನೆನೆಯುವದರ ಜೊತೆಗೆ ಹೊಸಬರ ಕಾರ್ಯ ಕೂಡ ಯಶಸ್ವಿಯಾಗಿ ಸಾಗಲಿ ಎಂದು ಆಶಿಸುವುದು ಎಲ್ಲರ ಆಶಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ ದಂಡಿನ ಕರೆ ನೀಡಿದರು.
ಅವರು ಸವದತ್ತಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಜರುಗಿದ ನೂತನ ಶಿಕ್ಷಣ ಸಂಯೋಜಕರ ಹಾಜರುಪಡಿಸಿಕೊಳ್ಳುವ ಹಾಗೂ ಹಳಬರ ಬೀಳ್ಕೊಡುಗೆಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಎಂ.ಡಿ ಹುದ್ದಾರ, ಗುರುನಾಥ ಕರಾಳೆಯವರ ಬೀಳ್ಕೊಡುಗೆ ಸುಧೀರ ವಾಗೇರಿ, ಅರ್ಜುನ ಕಾಮಣ್ಣವರ ಇವರ ಸ್ವಾಗತ ಜರುಗಿತು. ವೇದಿಕೆಯಲ್ಲಿ ಪ್ರಾಥಮಿಕ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷರಾದ ಕಿರಣ ಕುರಿ, ದೈಹಿಕ ಶಿಕ್ಷಣ ಪರವೀಕ್ಷಕರಾದ ಎಮ್.ಬಿ.ಕೊಪ್ಪದ, ಅಧೀಕ್ಷಕರರಾದಂತ ವಿಠ್ಠಲ ರಾವಳ ಉಪಸ್ಥಿತರಿದ್ದರು
ಇದೇೆ ಸಂದರ್ಭದಲ್ಲ್ಲಿ ಮಾತನಾಡಿದ ಜಿ.ಎಮ್.ಕರಾಳೆ, ವಿವಿಧ ಕಾರ್ಯಗಳಲ್ಲಿ ಅನುಭವ ಹೊಂದಲು ಶಿಕ್ಷಣ ಸಂಯೋಜಕ ಹುದ್ದೆ ಸಹಾಯಕ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಹಕಾರ ಮರೆಯಲಾಗದು ಎಂದರು.
ಎಂ.ಡಿ.ಹುದ್ದಾರ ಮಾತನಾಡಿ “ಇದೇ ತಾಲೂಕಿನಲ್ಲಿ ಕಳೆದ ೧೫ವರ್ಷಗಳಿಂದ ಸೇವೆ ಮಾಡುತ್ತಿದ್ದ ನನಗೆ ಶಿಕ್ಷಣ ಸಂಯೋಜಕ ಹುದ್ದೆ ಒಳ್ಳೆ ಅವಕಾಶವನ್ನು ನೀಡಿತು ವಿವಿಧ ಸಂಘಗಳ ಪದಾಧಿಕಾರಿಗಳ ಸಹಕಾರವನ್ನು ಮರೆಯಲಾಗದು. ೫ ಜನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಅನುಭವಗಳು ನನಗೆ ದಾರಿದೀಪವಾಗಿವೆ ಎಂದು ಸ್ಮರಿಸಿದರು.
ಶಿಕ್ಷಕ ಸಂಘದ ಅಧ್ಯಕ್ಷರಾದ ಕಿರಣ ಕುರಿ ಮಾತನಾಡಿ, “ಶಿಕ್ಷಕರ ಬೇಕು ಬೇಡಿಕೆಗಳ ಕುರಿತು ಶಿಕ್ಷಣ ಸಂಯೋಜಕರ ಸಹಕಾರ ಮರೆಯಲಾಗದು ಮುಂದಿನ ದಿನಗಳಲ್ಲಿ ನೂತನ ಶಿಕ್ಷಣ ಸಂಯೋಜಕರು ಕೂಡಾ ಉತ್ತಮ ಕಾರ್ಯವನ್ನು ಮಾಡಲೆಂದು ಆಶಿಸುತ್ತೇನೆ.” ಎಂದರು ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಾದ ವಾಯ್.ಬಿ.ಕಡಕೋಳ ಮಾತನಾಡಿ “ಹಿಂದಿನ ಶಿಕ್ಷಣ ಸಂಯೋಜಕರ ಕಾರ್ಯ ವೈಖರಿ ನೆನೆಯುತ್ತ ಮುಂದಿನವರ ಕಾರ್ಯವೈಖರಿ ಸುಗಮವಾಗಿ ಸಾಗಲಿ ಎಂದು ಹಾರೈಸಿದರು. ಇದೇ ಸಂದರ್ಭದಲ್ಲಿ ಸುಧೀರ ವಾಘೇರಿ, ಎನ್.ಎಸ್.ವಗೆನ್ನವರ ಹಾಗೂ ಅರ್ಜುನ ಕಾಮಣ್ಣವರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಚಿಕ್ಕುಂಬಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಎಮ್.ವಾಯ್.ಇಂಗಳೇಶ್ವರ, ಸಿಬ್ಬಂದಿ ಸವಿತಾ ಕಡಿವಾಲ, ಆರ್.ಎಮ್.ಪತಂಗಿ, ಎಸ್.ಎಸ್.ತೊರಗಲ್ಲ, ಬಿ.ಐ.ಗಾಣಿಗೇರ, ವಿನಾಯಕ ಕುರುಬಗಟ್ಟಿ ಸಿ.ಆರ್.ಪಿಳಾದ ಜಿ.ಎಸ್.ಚಿಪ್ಪಲಕಟ್ಟಿ,ರವಿ ನಲವಡೆ, ನಾಗೇಶ ಹೊನ್ನಳ್ಳಿ ವಿಠ್ಠಲ ದಳವಾಯಿ, ಬಾಳೇಶ ಸಿದ್ದಬಸಣ್ಣವರ,ಬಿ.ಆರ್.ಪಿಗಳಾದ ಕರಡಿಗುಡ್ಡ ಬಿಐಇಆರ್ ಟಿ ದುರಗಪ್ಪ ಭಜಂತ್ರಿ.ಶಿಕ್ಷಕರಾದ ಗುರುನಾಥ ಪತ್ತಾರ, ಎಮ್.ಎನ್.ಕಿತ್ತೂರ, ರವಿ.ಸಣಕಲ, ಬಿ,ಎನ್.ತೋರನಗಟ್ಟಿ. ಭಾರತಿ ಹೋಟಿ,ಸುಜಾತಾ ಹೊನ್ನಳ್ಳಿ,ಪ್ರಭಾಕರ ದೊಡಮನಿ, ಶೆಟ್ಟರ, ಮಹಾಂತೇಶ ಜೇವೂರ.ಎನ್ ಎನ್ ಕಬ್ಬೂರ, ಕೆ.ಎಸ್.ಜಿ.ಮೇವಾದ ತಾಲೂಕು ಘಟಕದ ಅಧ್ಯಕ್ಷ,ಎಮ್.ಎಸ್.ಕೊಳಚಿ ಕಾರ್ಯಲಯದ ಸಿಬ್ಬಂದಿಯವರಾದ ಎನ್.ಎಮ್.ಮುಜಾವರ, ಪ್ರಶಾಂತ.ಎನ್.ಮೊಟೆಕರ.ಬಾಬಾಜಾನ ಮಾಳಗಿ, ಎಫ್.ಹೆಚ್.ಮಾಹುತ, ವಿದ್ಯಾ ಗಾಣಗಿ, ರಾಜು ಹನಸಿ, ಆಯಿಷಾ ಜಾಗಿರದಾರ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಟಿ ಎನ್ ಏಗನಗೌಡರ ಪ್ರಾರ್ಥನಾ ಗೀತೆ ಹೇಳಿದರು. ನಾಗೇಶ ಹೊನ್ನಳ್ಳಿ ಕಾರ್ಯ ಕ್ರಮ ನಿರೂಪಿಸಿದರು