ಸವದತ್ತಿಃ ನಲಿಕಲಿ ಯೋಜನೆ ಬಹುವರ್ಗ ಮತ್ತು ಬಹುಹಂತದ ಕಲಿಕಾ ಚಟುವಟಿಕೆಗಳನ್ನು ಒಳಗೊಂಡ ಯೋಜನೆಯಾಗಿದೆ. ಬುನಾದಿ ಅಕ್ಷರ ಜ್ಞಾನ ಮತ್ತು ಸಂಖ್ಯಾ ಜ್ಞಾನ ಇವುಗಳ ಸಮ್ಮಿಳಿತ ತರಗತಿಯಲ್ಲಾಗಲಿ ಕನ್ನಡ ಮಾಧ್ಯಮದ ಜೊತೆಗೆ ಇಂಗ್ಲೀಷ ಮಾಧ್ಯಮದಲ್ಲಿಯೂ ಕಲಿಕಾ ಚೇತರಿಕೆ ತರಬೇತಿ ಜರುಗುತ್ತಿದೆ. ಇದರೊಟ್ಟಿಗೆ ಮಗುವಿನ ಮಾತೃಭಾಷೆ ಕಲಿಕೆಗಾಗಿ ನಲಿಕಲಿ ಯೋಜನೆಯಲ್ಲಿ ಶಿಕ್ಷಕರ ಪಾತ್ರ ಬಹಳ ಮಹತ್ವದ್ದಾಗಿದೆ. ಈ ತರಬೇತಿಯ ಪಲಶ್ರುತಿ ತರಗತಿಯ ಕೊಠಡಿಯಲ್ಲಿ ಆಗುವ ಮೂಲಕ ತರಬೇತಿಯು ವಿಶಿಷ್ಟವಾಗಿ ಕಾರ್ಯಗತವಾಗಲಿ”ಎಂದು ಸವದತ್ತಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಶೈಲ ಕರೀಕಟ್ಟಿ ತಿಳಿಸಿದರು.
ಅವರು ಪಟ್ಟಣದ ಕುಮಾರೇಶ್ವರ ಮಹಾವಿದ್ಯಾಲಯದಲ್ಲಿ ಸಸಿಗೆ ನೀರುಣಿಸುವ ಮೂಲಕ ನಲಿಕಲಿ ಕಲಿಕಾ ಚೇತರಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಎಂ.ಬಿ.ಬಳಿಗಾರ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷರಾದ ಎಚ್.ಆರ್.ಪೆಟ್ಲೂರ. ಪ್ರಧಾನ ಕಾರ್ಯದರ್ಶಿಗಳಾದ ಎಫ್.ಜಿ.ನವಲಗುಂದ ಉಪಸ್ಥಿತರಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಎಂ.ಬಿ.ಬಳಿಗಾರ, “ ಗುಣಾತ್ಮಕ ಶಿಕ್ಷಣವನ್ನು ಪ್ರಭುತ್ವ ಮಟ್ಟದಲ್ಲಿ ಪ್ರಾಥಮಿಕ ಹಂತದಲ್ಲಿ ನೀಡಬೇಕೆಂಬ ಸದಾಶಯದೊಂದಿಗೆ ಅಳವಡಿಸಿಕೊಳ್ಳಲಾದ ನಲಿಕಲಿ ಯೋಜನೆ ಸಂತಸ ಕಲಿಕೆ ಮತ್ತು ಸ್ವವೇಗದ ಕಲಿಕೆ,ಸ್ವ ಕಲಿಕೆ, ಬಹುವರ್ಗ ಕಲಿಕೆ,ಶಿಶು ಸ್ನೇಹಿ ಹಾಗೂ ಶಿಕ್ಷಕ ಸ್ನೇಹಿಯಾಗಿದ್ದು. ಈ ತರಬೇತಿಯ ಸದುಪಯೋಗ ಎಲ್ಲರೂ ಪಡೆದುಕೊಳ್ಳುವ ಮೂಲಕ ತರಗತಿಯ ಕೋಣೆಯಲ್ಲಿ ಗುಣಾತ್ಮಕ ಶಿಕ್ಷಣ ರೂಪಿಸಿರಿ”ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕರಾದ ಗುರುನಾಥ ಕರಾಳೆ, ಬಿ.ಐ,ಇ.ಆರ್.ಟಿ ಗಳಾದ ವೈ.ಬಿ.ಕಡಕೋಳ, ಸಿ.ವ್ಹಿ.ಬಾರ್ಕಿ,ಎಸ್.ಬಿ.ಬೆಟ್ಟದ, ಬಿ.ಆರ್.ಪಿ ಗಳಾದ ರಾಜು ಭಜಂತ್ರಿ, ಡಾ.ಬಿ.ಐ.ಚಿನಗುಡಿ,ರತ್ನಾ ಸೇತಸನದಿ, ವ್ಹಿ.ಸಿ.ಹಿರಮೇಮಠ,ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಪ್ರೇಮಾ ಹಲಕಿ, ವೀರೇಶ ಚಂದರಗಿ, ಡಿ.ಎ.ಮೇಟಿ, ನೌಕರರ ಸಂಘದ ರಾಮಣ್ಣ ಗುಡಗಾರ ಸಂಪನ್ಮೂಲ ವ್ಯಕ್ತಿಗಳಾದ ಕುಶಾಲ ಮುದ್ದಾಪುರ, ಶ್ರೀಮತಿ ಪಿ.ಎಚ್.ಕುಲಕರ್ಣಿ, ಎಫ್.ಜಿ.ನವಲಗುಂದ,ಆರ್.ಎಸ್.ನೇಸರಗಿ ಸೇರಿದಂತೆ ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ರತ್ನಾ ಸೇತಸನದಿ ಪ್ರಾರ್ಥನಾ ಗೀತೆ ಹಾಡಿದರು. ವ್ಹಿ.ಸಿ.ಹಿರೇಮಠ ನಿರೂಪಿಸಿದರು.ಎಸ್.ಬಿ.ಬೆಟ್ಟದ ವಂದಿಸಿದರು.