ಸಾರಿಗೆ ನೌಕರರು ಎಚ್ಚತ್ತುಕೊಳ್ಳಲಿ

Must Read

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...

ಪ್ರಕೃತಿಯೇ ನಿಜವಾದ ದೇವರು – ಶಾಂತ ಗಂಗಾಧರ ಶ್ರೀಗಳು

ಸಿಂದಗಿ: ಪ್ರಕೃತಿಯೇ ನಿಜವಾದ ದೇವರು ನಿಸರ್ಗವೇ ಕೂಡಲ ಸಂಗಮ ಎಂದು ಹೇಳಿದ ಬಸವಣ್ಣನವರ ಹಾಗೂ ಶರಣೆ ಮಾತುಗಳು ಅಕ್ಷರಶಃ ಪ್ರಸ್ತುತವಾಗಿವೆ. ಎಂದು ಪಟ್ಟಣದ ಗುರುದೇವಾಶ್ರಮದ ಶ್ರೀ ಶಾಂತಗಂಗಾಧರ...

ಉತ್ತಮ ಸಮಾಜ ನಿರ್ಮಾಣದಲ್ಲಿ ಶರಣರ ಪಾತ್ರ ಕುರಿತು ಪ್ರವಚನ

ಸಿಂದಗಿ: ಪ್ರತಿಯೊಬ್ಬರಲ್ಲಿ ವಚನ ಸಾಹಿತ್ಯ ಭಂಡಾರವೇ ಅಡಗಿರುತ್ತದೆ ಅದನ್ನು ಪ್ರಸ್ತುತ ಪಡಿಸುವ ಸಾಮರ್ಥ್ಯ ಹೊಂದಿದವರಿಗೆ ಮಾತ್ರ ಸಂಗ್ರಹ ಮಾಡುವ ಧ್ಯೇಯ ಇರುತ್ತದೆ ಅಂಥವರ ಸಾಲಿನಲ್ಲಿ ಶ್ರೀ ಶಾಂತಗಂಗಾಧರ...

ಪ್ರಸ್ತುತ ಸಾರಿಗೆ ನೌಕರರ ಮುಷ್ಕರ ನಡೆಯುತ್ತಿದೆ. ಇವರ ನೇತೃತ್ವ ವಹಿಸಿರುವವರು ಯಾರು ? ರೈತರ ಉದ್ಧಾರ ಮಾಡುತ್ತೇನೆಂದು ಬಂದು, ರೈತರನ್ನು ಉದ್ರೇಕಿಸಿ ಚಳವಳಿ ಮಾಡಲು ಹಚ್ಚಿ ತಾನು ಮಾತ್ರ ಕಾರಿನಲ್ಲಿ ಅಡ್ಡಾಡುತ್ತ ಬಂಡವಾಳ ಶಾಹಿಗಳಿಂದ ಅನುಕೂಲತೆಗಳನ್ನು ಪಡೆಯುತ್ತ ಮೆರೆಯುತ್ತಿರುವ ಕೋಡಿಹಳ್ಳಿ ಚಂದ್ರಶೇಖರ ಎಂಬ ನಕಲಿ ಹೋರಾಟಗಾರ !

ಈ ಹಿಂದೆ ಕೆಲವು ಸಕ್ಕರೆ ಕಾರ್ಖಾನೆಯವರು ರೈತರ ಕಬ್ಬಿನ ಬಿಲ್ ಕೊಡದೇ ಇದ್ದಾಗ ರೈತರನ್ನು ಪುಸಲಾಯಿಸಿ ಚಳವಳಿ ಮಾಡಿದ ಈ ಮನುಷ್ಯ ಇನ್ನೇನು ಕಾರ್ಖಾನೆಯನ್ನು ಬಂದ್ ಮಾಡಿಯೇ ಬಿಡುತ್ತಾನೇನೋ ಎಂಬ ಆವೇಶದಲ್ಲಿ ಮಾತನಾಡಿ ರೈತರನ್ನು ಹುರಿದುಂಬಿಸಿ ಕೆಳಗಿಳಿದು ಸುಮ್ಮನೆ ಹೋಗಿದ್ದ. ಆಮೇಲೆ ಯಾವ ಕಾರ್ಖಾನೆಯೂ ಬಂದ್ ಆಗಲಿಲ್ಲ ರೈತರ ಬಿಲ್ ಕೂಡ ಸಮಯಕ್ಕೆ ಬರದೇ, ಬಂದದ್ದು ಕೂಡ ಗೊತ್ತಾಗದೇ ಕಾರ್ಖಾನೆ ಮಾಲೀಕರು ನಗುತ್ತಿದ್ದರು.

ಇಂಥ ಹಲವು ಅಯಶಸ್ವಿ ಹೋರಾಟಗಳನ್ನು ಮಾಡಿಕೊಂಡು ಬಂದಿರುವ ಕೋಡಿಹಳ್ಳಿಯ ಬೆನ್ನು ಹತ್ತಿದ್ದೇ ಸಾರಿಗೆ ನೌಕರರ ಮೊದಲ ತಪ್ಪು. ತಮ್ಮ ಬೇಡಿಕೆಗಳನ್ನು ಸರ್ಕಾರದ ಜೊತೆ ಚರ್ಚಿಸಬೇಕು, ಪರಿಸ್ಥಿತಿ, ಸಮಯವನ್ನು ಅವಲೋಕಿಸಬೇಕು. ಜನರಿಗೆ ವಿನಾಕಾರಣ ತೊಂದರೆ ಕೊಡುವುದರಿಂದ ಯಾರಿಗೂ ಒಳ್ಳೆಯದಾಗುವುದಿಲ್ಲ. ಮೊದಲೇ ಜನರು ಸಂಕಷ್ಟದಲ್ಲಿ ಇರುವಾಗ ಮತ್ತಷ್ಟು ಬರೆ ಹಾಕುತ್ತಿರುವ ಸಾರಿಗೆ ನೌಕರರು ಜನರ ಸಹಾನುಭೂತಿ ಕಳಕೊಳ್ಳುವಂತಾಗಬಾರದು.
ತಮ್ಮ ಇಲಾಖೆಗೇ ಸಂಬಂಧವಿಲ್ಲದ ವ್ಯಕ್ತಿಯೊಬ್ಬನ ಮಾತು ಕೇಳಿ ಮುಷ್ಕರಕ್ಕೆ ಇಳಿದು ಹಾಳಾದ ಇನ್ನೊಂದು ಕಂಪನಿಯ ಕಥೆ ಈ ಸಂದರ್ಭದಲ್ಲಿ ನೆನಪಾಗುತ್ತದೆ.

- Advertisement -

೮೦ರ ದಶಕದಲ್ಲಿ ಮುಂಬಯಿಯಲ್ಲಿ ನಡೆದ (ಕು)ಖ್ಯಾತ ಮಿಲ್ ಕೆಲಸಗಾರರ ಮುಷ್ಕರದ ನೆನಪಾಗುತ್ತಿದೆ. ೬೫ ಬಟ್ಟೆ ಗಿರಣಿಗಳ ಸುಮಾರು ೨೫೦೦೦೦ ಕೆಲಸಗಾರರು ದತ್ತಾ ಸಾಮಂತ್ ಎಂಬವರ ನೇತೃತ್ವದಲ್ಲಿ ಮುಷ್ಕರ ಹೂಡಿದ್ದರು. ವರ್ಷಕ್ಕಿಂತಲೂ ಹೆಚ್ಚು ಕಾಲ ಮುಷ್ಕರ ನಡೆಯಿತು. ಕೊನೆಗೆ ಎಲ್ಲ ಗಿರಣಿಗಳೂ ಬಾಗಿಲು ಹಾಕಿದವು.

ಕೆಲಸಗಾರರು ಬೀದಿಗೆ ಬಿದ್ದರು. ಅವರಿಗೆ ಯಾವ ಸವಲತ್ತೂ ಸಿಗಲಿಲ್ಲ. ಉದ್ಯೋಗವಿದ್ದಾಗ ಅವರಿಗೆ ಮೆಡಿಕಲ್, ಇನ್ಶೂರೆನ್ಸ್, ಪಿಂಚಣಿ, ಇತ್ಯಾದಿ ಸೌಲಭ್ಯಗಳಿದ್ದವು. ಕೆಲಸ ಕಳೆದುಕೊಂಡ ಕೆಲಸಗಾರರು ಅಸಂಘಟಿತ ಕೆಲಸಗಾರರಾದರು. ಸಾವಿರಾರು ಕುಟುಂಬಗಳು ಛಿದ್ರವಾದವು. ಕೆಲಸಗಾರರ ಮಕ್ಕಳನ್ನು ಫೀಸು ಕಟ್ಟಲು ಹಣವಿಲ್ಲದೆ ಶಾಲೆಗಳಿಂದ ಬಿಡಿಸಲಾಯಿತು. ಇನ್ನೂ ಏನೇನೋ ಆಯಿತು. ಈ ಬಗ್ಗೆ ಹಲವು ಲೇಖನಗಳು ಬಂದಿವೆ.

ಈ ಮುಷ್ಕರದ ನೇತೃತ್ವ ವಹಿಸಿದ್ದು ಡಾ. ದತ್ತಾ ಸಾಮಂತ. ಇವರು ಗಿರಣಿ ಕೆಲಸಗಾರರಾಗಿರಲಿಲ್ಲ. ಹೊರಗಿನವರಾಗಿದ್ದರು. ಅವರು ಈ ಮುಷ್ಕರಕ್ಕೆ ಮೊದಲು ಪ್ರೀಮಿಯರ್ ಕಾರ್ ಕಂಪೆನಿಯಲ್ಲಿ ಮುಷ್ಕರ ಹೂಡಿಸಿ ಜಯಸಾಧಿಸಿದ್ದರು. ಅಲ್ಲಿ ಕಂಪೆನಿ ಲಾಭದಲ್ಲಿತ್ತು. ಆದುದರಿಂದ ಇವರ ಬೇಡಿಕೆ ಸಾಧ್ಯವಾಯಿತು. ಆದರೆ ಮುಂಬಯಿಯ ಬಟ್ಟೆ ಗಿರಣಿಗಳು ದೊಡ್ಡ ಲಾಭ ಮಾಡುತ್ತಿರಲಿಲ್ಲ. ಹಾಗಾಗಿ ಇವರ ಬೇಡಿಕೆಗೆ ಒಪ್ಪಲೇ ಇಲ್ಲ.

ಬಟ್ಟೆ ಗಿರಣಿ ಕೆಲಸಗಾರರೆಲ್ಲ ಒಟ್ಟು ಹಣ ಹಾಕಿ ದತ್ತ ಸಾಮಂತರಿಗೆ ಒಂದು ಪ್ರೀಮಿಯರ್ ಪದ್ಮಿನಿ ಕಾರು ಕೊಡಿಸಿದ್ದರು. ದತ್ತ ಸಾಮಂತ ಪಾರ್ಲಿಮಂಟಿಗೆ ಸ್ಪರ್ಧಿಸಿ ಸಂಸದರೂ ಆಗಿದ್ದರು. ಕೊನೆಗೊಂದು ದಿನ ಅವರನ್ನು ಕೊಲೆ ಮಾಡಲಾಯಿತು.

ಈ ವಿಷಯವೆಲ್ಲ ಯಾಕೆ ನೆನಪಾಯಿತು ಎಂದರೆ ಸಾರಿಗೆ ಸಂಸ್ಥೆಯ ಕೆಲಸಗಾರರ ಮುಷ್ಕರದ ನೇತೃತ್ವ ವಹಿಸಿರುವ ಕೋಡಿಹಳ್ಳಿ ಅಲ್ಲಿಯ ಉದ್ಯೋಗಿಯಲ್ಲ. ಸಾರಿಗೆ ಸಂಸ್ಥೆಯವರಿಗೆ ಅವರದೇ ನಾಯಕನಿಲ್ಲವೇ? ಇವರೆಲ್ಲ ಕೆಲಸ ಕಳೆದುಕೊಂಡರೆ ಆ ಹೊರಗಿನಿಂದ ಬಂದ ನಾಯಕರಿಗೆ ಏನು ನಷ್ಟವಾಗುತ್ತದೆ? ಏನೂ ಇಲ್ಲ.

ಸಾರಿಗೆ ಸಂಸ್ಥೆಯ ನೌಕರರು ಮುಷ್ಕರ ಹೂಡುವುದು ಎಷ್ಟು ಸರಿ ನೋಡೋಣ.

ಕಳೆದ ವರ್ಷ ಸಂಪೂರ್ಣ ಲಾಕ್‌ಡೌನ್ ಆಗಿದ್ದಾಗ ಹಲವು ಕಂಪೆನಿಗಳು ಉದ್ಯೋಗಿಗಳಿಗೆ ಅರ್ಧ ಸಂಬಳ ನೀಡಿದವು, ಕೆಲವು ಕಂಪೆನಿಗಳು ಹಲವರನ್ನು ಕೆಲಸದಿಂದ ತೆಗೆದವು, ಇನ್ನು ಕೆಲವರು ಹಲವು ತಿಂಗಳು ಸಂಬಳ ನೀಡಲಿಲ್ಲ. ಆದರೆ ಸಾರಿಗೆ ಸಂಸ್ಥೆಯವರು ಎಲ್ಲರಿಗೂ ಪೂರ್ತಿ ಸಂಬಳ ನೀಡಿದ್ದರು. ಸಂಪಾದನೆಯಿಲ್ಲದಿದ್ದರೂ ಅವರಿಗೆ ಸಂಬಳ ನೀಡಿದ್ದರು. ಈಗಲೂ ದೇಶದ ಅರ್ಥವ್ಯವಸ್ಥೆ ಪೂರ್ತಿ ಸರಿದಾರಿಗೆ ಬಂದಿಲ್ಲ. ಜನರು ಈಗಲೂ ಬಸ್ಸುಗಳಲ್ಲಿ ಹೋಗುವುದನ್ನು ಸಾಧ್ಯವಿದ್ದಷ್ಟು ತಪ್ಪಿಸಿಕೊಂಡು ಸಾಧ್ಯವಿದ್ದಾಗಲೆಲ್ಲ ಸ್ವಂತ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಮತ್ತೆ ಲಾಕ್‌ಡೌನ್ ಆದರೂ ಆಗಬಹುದು. ಹೀಗಿರುವಾಗ ಸಾರಿಗೆ ಸಂಸ್ಥೆಯ ನೌಕರರು ಮುಷ್ಕರ ನಡೆಸುವುದು ಸಂಪೂರ್ಣ ತಪ್ಪು. ಇನ್ನಾದರೂ ಸಾರಿಗೆ ನೌಕರರು ಎಚ್ಚತ್ತುಕೊಳ್ಳಲಿ.

(ಮುಂಬಯಿ ಬಟ್ಟೆ ಗಿರಣಿಗಳ ಮುಷ್ಕರ ಬಗ್ಗೆ – https://en.wikipedia.org/wiki/Great_Bombay_textile_strike
ದತ್ತಾ ಸಾಮಂತ ಬಗ್ಗೆ: https://en.wikipedia.org/wiki/Dutta_Samant)
ಇಲ್ಲಿ ನೋಡಬಹುದು

- Advertisement -
- Advertisement -

Latest News

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...
- Advertisement -

More Articles Like This

- Advertisement -
close
error: Content is protected !!