‘ವಾಹನಗಳ ಬಳಕೆಯು ದೇಶದ ಅಭಿವೃದ್ಧಿಪರವಾಗಿರಲಿ’ – ಕು.ಪ್ರಿಯಾಂಕಾ ಜಾರಕಿಹೊಳಿ

Must Read

ಮೂಡಲಗಿ: ‘ದೇಶದ ವೇಗದ ಅಭಿವೃದ್ಧಿಯಲ್ಲಿ ಇಂಧನ ಆಧಾರಿತ ವಾಹನಗಳ ಪಾತ್ರ ಮಹತ್ವದ್ದಾಗಿದ್ದು, ವಾಹನಗಳ ಬಳಕೆಯು ದೇಶದ ಅಭಿವೃದ್ಧಿ ಪರವಾಗಿರಲಿ’ ಎಂದು ಪ್ರಿಯಾಂಕಾ ಸತೀಶ ಜಾರಕಿಹೊಳಿ ಅವರು ಹೇಳಿದರು.

ತಾಲ್ಲೂಕಿನ ನಾಗನೂರ ಗ್ರಾಮದ ಮನ್ನಿಕೇರಿ ಪೆಟ್ರೋಲಿಯಂ ಹಾಗೂ ಇಂಡಿಯನ್ ಆಯಿಲ್ ಕಾಪೋರೇಶನ್ ದವರು ಏರ್ಪಡಿಸಿದ್ದ ಗ್ರಾಹಕರ ಸಮಾವೇಶ ಮತ್ತು ಉತ್ತಮ ಗ್ರಾಹಕ ಪ್ರಶಸ್ತಿಗಳ ಪ್ರದಾನ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಇಂಧನ ಸಂಪನ್ಮೂಲವು ದೇಶದ ಬಹುದೊಡ್ಡ ಶಕ್ತಿಯಾಗಿದ್ದು, ಅದು ಸದ್ಬಳಕೆಯಾಗಬೇಕು ಎಂದರು.

ಗ್ರಾಹಕರ ಸಮಾವೇಶದಲ್ಲಿ ಬೃಹತ್ ಸಂಖ್ಯೆಯಲ್ಲಿ ಜನ ಸೇರಿದ್ದು ಮನ್ನಿಕೇರಿ ಪೆಟ್ರೋಲಿಯಂದವರು ಗ್ರಾಹಕರಿಂದ ಕಾಯ್ದುಕೊಂಡಿರುವ ವಿಶ್ವಾಸ ಮುಖ್ಯ ಕಾರಣವಾಗಿದೆ. ಇದು ಇನ್ನೂ ಉನ್ನತವಾಗಿ ಬೆಳೆಯಲಿ ಎಂದು ಹೇಳಿದರು.

ಅತಿಥಿಗಳಾಗಿ ಸವೋತ್ತಮ ಜಾರಕಿಹೊಳಿ, ಬಸಗೌಡ ಪಾಟೀಲ, ಮನ್ನಿಕೇರಿ ಪೆಟ್ರೋಲಿಯಂ ಮಾಲೀಕರಾದ ಪಾಂಡುರಾಂಗ ಮನ್ನಿಕೇರಿ, ಇಂಡಿಯನ್ ಆಯಿಲ್ ಕಾರ್ಪೋರೇಶನದ ಅಧಿಕಾರಿ ಜಯಂತಕುಮಾರ ಉಮಾಕಾಂತ, ವಿ. ಮುರಳಿ, ಕವಿದ್ರ ದವನ, ಸತೀಶ ಎಸ್, ಸರ್ವೋ ತೈಲ ಸಂಸ್ಥೆಯ ರಾಘವೇಂದ್ರ ಇದ್ದರು.

ಚಂದ್ರಕಾಂತ ಮೋಟೆಪ್ಪಗೋಳ ಸ್ವಾಗತಿಸಿದರು, ಎ.ಜಿ. ಕೋಳಿ ನಿರೂಪಿಸಿದರು, ಸಂತೋಷ ಕನವಳ್ಳಿ ವಂದಿಸಿದರು.

ಬಹುಮಾನಗಳ ವಿಜೇತರು: ಕಳೆದ ಜನವರಿ ತಿಂಗಳದಲ್ಲಿ ಜರುಗಿದ ಹಬ್ಬದ ಧಮಾಕಾ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ವಿಜೇತರಾದ ಗ್ರಾಹಕರು. ಪ್ರಥಮ ಬಹುಮಾನ ಹೋಂಡಾ ಅಮೇಜ್ ಕಾರು ಮಾರಾಪುರದ ಮಹಾದೇವ ಧರ್ಮಟ್ಟಿ ಅವರಿಗೆ ದೊರೆಯಿತು. ದ್ವಿತೀಯ ಬಹುಮಾನ ಬಜಾಜ್ ಬೈಕ್‍ವು ವಡೇರಹಟ್ಟಿಯ ವಿಠ್ಠಲ ಕ್ಯಾಸ್ತಿ, ತೃತೀಯ ಬಹುಮಾನ ರೆಫ್ರಿಜರೇಟರ್ ನಾಗನೂರಿನ ಕೆ.ಟಿ. ಅಂಗಡಿ ಹಾಗೂ ನಾಲ್ಕನೇ ಬಹುಮಾನ ಬೈಸಿಕಲ್‍ ನಾಗನೂರದ ತುಕಾರಾಮ ಸುಣಗಾರ ಅವರಿಗೆ ಲಭಿಸಿತು.

Latest News

ಸಾಮೂಹಿಕ ಪ್ರಾರ್ಥನೆ ವಚನ ವಿಶ್ಲೇಷಣೆ ಕಾರ್ಯಕ್ರಮ

ಬೆಳಗಾವಿ - ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಭವನ ಮಹಾಂತೇಶ ನಗರ ಲಿಂಗಾಯತ ಸಂಘಟನೆ ಬೆಳಗಾವಿಯಲ್ಲಿ ದಿನಾಂಕ.09.11.2025ರಂದು ಸಾಮೂಹಿಕ ಪ್ರಾರ್ಥನೆ ವಚನ ವಿಶ್ಲೇಷಣೆ,...

More Articles Like This

error: Content is protected !!
Join WhatsApp Group