spot_img
spot_img

ಮಾನವೀಯತೆ ಮೆರೆವ ಸಾಹಿತ್ಯ ಮೂಡಿಬರಲಿ- ಡಾ.ಸಂಗಮನಾಥ ಲೋಕಾಪೂರ

Must Read

spot_img
- Advertisement -

ಮೂಡಲಗಿ: ಇಂದಿನ ಜನಾಂಗ ತಂತ್ರಜ್ಞಾನದ ಜೊತೆಗೆ ಓದಿನತ್ತ ಬರಬೇಕು, ಬರಹಗಾರರು ಮಾನವೀಯತೆ ಮೆರೆವ ಸಾಹಿತ್ಯವನ್ನು ನಾಡಿಗೆ ನೀಡಬೇಕಿದೆ ಎಂದು ಧಾರವಾಡದ ಹಿರಿಯ ಕಥೆಗಾರ ಹಾಗೂ ಚಿಂತಕ ಡಾ.ಸಂಗಮನಾಥ ಲೋಕಾಪೂರ ಹೇಳಿದರು.

ಪಟ್ಟಣದ ಚೈತನ್ಯ ಗ್ರೂಪ್ ಹಾಗೂ ಗೋಕಾವಿ ಗೆಳೆಯರ ಬಳಗ ಸಂಯುಕ್ತಾಶ್ರಯದಲ್ಲಿ  ಚೈತನ್ಯ ಆಶ್ರಮ ವಸತಿ ಶಾಲಾ ಸಭಾಂಗಣದಲ್ಲಿ ಸಾಹಿತಿ ಹಾಗೂ ಕಲಾವಿದ ಜಯಾನಂದ ಮಾದರ ಅವರ ಪುಂಡಿಪಲ್ಲೆ ಪ್ರಥಮ ಕಥಾ ಸಂಕಲನ ಬಿಡುಗಡೆ ಸಂದರ್ಭದಲ್ಲಿ ಪುಸ್ತಕ ವಿಮರ್ಶೆ ಮಾತುಗಳನ್ನಾಡಿದ ಅವರು,  ಜಯಾನಂದ ಮಾದರ ಅವರು ಗ್ರಾಮೀಣರ ಬದುಕಿನ ತುಡಿತ, ಮಿಡಿತಗಳನ್ನು ತಮ್ಮ ಕಥೆಗಳಲ್ಲಿ ಮಾರ್ಮಿಕವಾಗಿ ರುಚಿಕಟ್ಟಾದ ಪದಗಳೊಂದಿಗೆ ಕಟ್ಟಿಕೊಡುವುದರ ಮೂಲಕ ಉತ್ತಮ ಕಥೆಗಾರರಾಗಿ ಹೊರಹೊಮ್ಮಿದ್ದಾರೆ ಎಂದರು.

ಪುಸ್ತಕ ಬಿಡುಗಡೆ ಮಾಡಿದ ರಾಯಚೂರು ವಿಶ್ವವಿದ್ಯಾಲಯ ಸಿಂಡಿಕೇಟ ಸದಸ್ಯ ಹಾಗೂ ಸಾಹಿತಿ ಡಾ.ವಾಯ್.ಎಮ್.ಭಜಂತ್ರಿ ಮಾತನಾಡಿ, ದಲಿತರ ನೋವುಗಳು ಶೋಷಣೆಗೆ ಒಳಗಾದವರಿಗೆ ಮಾತ್ರ ಅರ್ಥವಾಗುತ್ತವೆ. ಕಥೆಗಾರ ನಮ್ಮ ಉತ್ತರ ಕರ್ನಾಟಕದ ದೇಶೀಯ ಬದುಕನ್ನು ನ್ಯೆಜವಾಗಿ ಹಿಡಿದಿಟ್ಟಿದ್ದಾರೆ ಎಂದು ಹೇಳಿದರು.

- Advertisement -

ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಅಕ್ಕಿ ಅಧ್ಯಕ್ಷತೆ ವಹಿಸಿ ಮಾತನಾಡಿ ಲೇಖಕರನ್ನು ಹರಸಿದರು.

ಮೂಡಲಗಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ ಸಂಜಯ ಶಿಂದಿಹಟ್ಟಿ,  ಮಕ್ಕಳ ಸಾಹಿತಿ ಡಾ.ಲಕ್ಷ್ಮಣ ಚೌರಿ, ವಾಯ್ ಬಿ.ಪಾಟೀಲ, ಶಂಕರ ಕ್ಯಾಸ್ತಿ, ಸಾಹಿತಿಗಳಾದ ಸಂಗಮೇಶ ಗುಜಗೊಂಡ, ಬಾಲಶೇಖರ ಬಂದಿ, ಪ್ರಕಾಶ ಕೋಟೀನತೋಟ, ಸಿದ್ರಾಮ ದ್ಯಾಗಾನಟ್ಟಿ, ಜಾನಪದ ಕಲಾವಿದ ಈಶ್ವರಚಂದ್ರ ಬೆಟಗೇರಿ, ಸಿದ್ದಪ್ಪ ಹಿರೇಮನಿ, ಘಜಲ್ ಕವಿ ಈಶ್ವರ ಮಮದಾಪೂರ, ಸಂಶೋಧಕ ಡಾ.ಸುರೇಶ ಹನಗಂಡಿ, ಸಿರಿಗನ್ನಡ ಮಹಿಳಾ ವೇದಿಕೆ ರಾಜ್ಯ ಅಧ್ಯಕ್ಷೆ ರಜನಿ ಜೀರಗ್ಯಾಳ, ಸಾಹಿತಿ ಪುಷ್ಪಾ ಮುರಗೋಡ, ಡಾ.ಅರುಣ ಸವತಿಕಾಯಿ, ನ್ಯಾಯವಾದಿ ಸಾಗರ ಜಂಡೆನ್ನವರ, ಶಿವಾಜಿ ಮೇತ್ರಿ, ಚನ್ನವೀರಯ್ಯ ಹಿರೇಮಠ, ಉದ್ದಣ್ಣ ಗೋಡೇರ ಮತ್ತಿತರರು ಉಪಸ್ಥಿತರಿದ್ದರು.

ಪ್ರಮಿಳಾ ಜಕ್ಕನ್ನವರ ಪ್ರಾರ್ಥಿಸಿದರು, ಲೇಖಕಿ ವಿದ್ಯಾ ರೆಡ್ಡಿ ನಿರೂಪಿಸಿದರು, ಆನಂದ ಸೋರಗಾವಿ ವಂದಿಸಿದರು.

- Advertisement -
- Advertisement -

Latest News

ಶ್ರೀ ಬಸವೇಶ್ವರ ಸೊಸಾಯಿಟಿಗೆ ರಜತ ಮಹೋತ್ಸವ ಸಂಭ್ರಮ

ಮೂಡಲಗಿ -ಪಟ್ಟಣದ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ ೨೫ ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಇದೇ ದಿ. ೨೫ ರಂದು ಸಂಭ್ರಮದ ಬೆಳ್ಳಿ ಮಹೋತ್ಸವ...
- Advertisement -

More Articles Like This

- Advertisement -
close
error: Content is protected !!
Join WhatsApp Group