spot_img
spot_img

ಶಿಕ್ಷಣ ಇಲಾಖೆಯ ಗುರುತರ ಜವಾಬ್ದಾರಿಗಳನ್ನು ನಾವೆಲ್ಲ ಸೇರಿ ನಿಭಾಯಿಸೋಣ – ಎಚ್ ಆರ್ ಪೆಟ್ಲೂರ

Must Read

- Advertisement -

ಯರಗಟ್ಟಿ – ಶಿಕ್ಷಕರ ಸಂಘದ ಅಧ್ಯಕ್ಷ ಸ್ಥಾನ ಅನಿರೀಕ್ಷಿತ.ನಾನು ಯಾವತ್ತೂ ಶಿಕ್ಷಕರ ನಡುವಿನ ಓರ್ವ ಶಿಕ್ಷಕ.ನಿಮ್ಮೆಲ್ಲರ ಸೇವೆಗೆ ಸದಾ ಸನ್ನದ್ಧನಾಗುವೆನು. ಹುದ್ದೆ ಮುಖ್ಯವಲ್ಲ ಸೇವೆ ಮುಖ್ಯ. ಮಕ್ಕಳ ಗುಣಾತ್ಮಕ ಶಿಕ್ಷಣಕ್ಕೆ ಇಲಾಖೆ ಈ ಕೋವಿಡ್ ಸಂದರ್ಭದಲ್ಲಿ ನಮಗೆ ನೀಡಿರುವ ಅವಕಾಶವನ್ನು ನಾವೆಲ್ಲ ಸಮರ್ಥವಾಗಿ ನಿಭಾಯಿಸಿದ್ದೇವೆ.ಮುಂದೆಯೂ ಕೂಡ ಮುಖಾಮುಖಿ ತರಗತಿಗಳು ಆರಂಭವಾಗುವ ಸಾಧ್ಯತೆ ಇದ್ದು ಇಲಾಖೆಯ ಗುರುತರ ಜವಾಬ್ದಾರಿಗಳನ್ನು ನಾವೆಲ್ಲ ನಿಭಾಯಿಸೋಣ ಎಂದು ಸವದತ್ತಿ ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಚ್.ಆರ್.ಪೆಟ್ಲೂರ ತಿಳಿಸಿದರು.

ಅವರು ಯರಗಟ್ಟಿಯ ಮಾದರಿ ಶಾಲೆಯಲ್ಲಿ ಜರುಗಿದ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಯರಗಟ್ಟಿ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶಿವಾನಂದ ಮಿಕಲಿ.ಮುರಗೋಡ ಸಮೂಹ ಸಂಪನ್ಮೂಲ ವ್ಯಕ್ತಿ ರಫೀಕ್ ಮುರಗೋಡ. ಮುನವಳ್ಳಿ ಸಮೂಹ ಸಂಪನ್ಮೂಲ ವ್ಯಕ್ತಿ ಹಾಗೂ ಸವದತ್ತಿ ತಾಲೂಕು ಘಟಕದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಎಫ್.ಜಿ.ನವಲಗುಂದ. ಹಿರಿಯ ಶಿಕ್ಷಕರಾದ ವಿಜಯ ಮರಡಿ. ಪರಸಗಡ ಪ್ರಾಥಮಿಕ ಶಿಕ್ಷಕರ ಪತ್ತಿನ ಸಂಘದ ಅಧ್ಯಕ್ಷರಾದ ಮನೋಹರ ಚೀಲದ.ಶಿಕ್ಷಕರಾದ ಎಸ್.ಬಿ.ಪಾಣಿಶೆಟ್ಟಿ. ಮೊದಲಾದವರು ಉಪಸ್ಥಿತರಿದ್ದರು.

- Advertisement -

ಎಚ್.ಆರ್.ಪೆಟ್ಲೂರರವರು ಸವದತ್ತಿ ತಾಲೂಕಿನ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಿಮಿತ್ತ ಅವರಿಗೆ ಗೌರವ ಸನ್ಮಾನವನ್ನು ಯರಗಟ್ಟಿಯಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದ ಪ್ರಾರಂಭದಲ್ಲಿ ವಿಜಯ ಮರಡಿ ಪ್ರಾಸ್ತಾವಿಕವಾಗಿ ಮಾತನಾಡುತ್ತ “ ಕಿರಿಯ ವಯಸ್ಸಿನಲ್ಲಿ ತಮ್ಮ ಸಂಘಟನಾ ಮನೋಭಾವದಿಂದ ಶಿಕ್ಷಕರ ಕಣ್ಮಣಿಯಾದ ಎಚ್.ಆರ್.ಪೆಟ್ಲೂರ ಸದಾ ಹೀಗೆಯೇ ತಮ್ಮ ಸೇವಾಮನೋಭಾವವನ್ನು ಮುಂದುವರೆಸಿಕೊಂಡು ಹೋಗಲಿ. ಮುಂದಿನ ದಿನಗಳಲ್ಲಿ ಶಿಕ್ಷಕರಿಗೆ ದೊರೆಯಬಹುದಾದ ಸೌಲಭ್ಯಗಳನ್ನು ಶಿಕ್ಷಕರ ಬೇಡಿಕೆಗಳಿಗೆ ಸ್ಪಂದಿಸುತ್ತ ಕಾರ್ಯ ನಿರ್ವಹಿಸುವ ಮೂಲಕ ಜಿಲ್ಲಾ ಮಟ್ಟದಲ್ಲಿಯೂ ಕೂಡ ತಮ್ಮ ಛಾಪನ್ನು ಮೂಡಿಸಲಿ” ಎಂದು ಕರೆ ನೀಡಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಮನೋಹರ ಚೀಲದ,“ ನಮ್ಮ ಜೀವನದಲ್ಲಿ ಹುದ್ದೆಗಳು ಶಾಶ್ವತವಲ್ಲ. ಆ ಹುದ್ದೆ ಇರುವವರೆಗೂ ನಾವು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಹೇಗೆ ನಿರ್ವಹಿಸುತ್ತೇವೆ ಎಂಬುದೂ ಅಷ್ಟೇ ಮುಖ್ಯ. ಸದಾ ಚಟುವಟಿಕೆಗಳಿಂದ ಕೂಡಿದ ಸ್ನೇಹಿತ ಎಚ್.ಆರ್.ಪೆಟ್ಲೂರರವರಿಗೆ ದೇವರು ಇನ್ನೂ ಹೆಚ್ಚಿನ ಸ್ಥಾನಮಾನಗಳನ್ನು ನೀಡಲಿ,ಅವರಿಗೆ ಆಯುರಾರೋಗ್ಯ ದಯಪಾಲಿಸಲಿ”ಎಂದು ಶುಭ ಹಾರೈಸಿದರು.

- Advertisement -

ಈ ಕಾರ್ಯಕ್ರಮದ ಪ್ರಾರಂಭದಲ್ಲಿ ಹಿರಿಯ ಶಿಕ್ಷಕ ವಿಜಯ ಮರಡಿ ಸ್ವಾಗತಿಸಿದರು. ರಾಜ್ಯ ಮಟ್ಟದ ಸಂಪನ್ಮೂಲ ಶಿಕ್ಷಕ ತಿಪ್ಪಾನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಯರಗಟ್ಟಿ ಸಂಪನ್ಮೂಲ ಶಿಕ್ಷಕ ಶಿವಾನಂದ ಮಿಕಲಿ ವಂದಿಸಿದರು

- Advertisement -
- Advertisement -

Latest News

ಡಾ.ರಾಜ್‍ಕುಮಾರ್ ಕಲಾ ಸೇವಾ ಟ್ರಸ್ಟ್ ವತಿಯಿಂದ ಡಾ.ರಾಜ್ ಕಲಾ ಸೇವಾರತ್ನ ಪ್ರಶಸ್ತಿ

ಮೈಸೂರು -ಡಾ.ರಾಜ್‍ಕುಮಾರ್‍ರವರ 96ನೇ ಹುಟ್ಟುಹಬ್ಬದ ಪ್ರಯುಕ್ತ ಒಂದು ವಾರಗಳ ಕಾಲ ನಾದಬ್ರಹ್ಮ ಸಭಾಂಗಣದಲ್ಲಿ ನಗರದ ಡಾ.ರಾಜ್‍ಕುಮಾರ್ ಕಲಾ ಸೇವಾ ಟ್ರಸ್ಟ್ ವತಿಯಿಂದ ಮೈಸೂರು ಜಯರಾಂರವರ ಸಾರಥ್ಯದಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group