spot_img
spot_img

ವಿನಾಯಕನು ಸಕಲರಿಗೆ ಸನ್ಮಂಗಳ ಉಂಟುಮಾಡಲಿ – ಶಾಸಕ ಬಾಲಚಂದ್ರ ಜಾರಕಿಹೊಳಿ

Must Read

spot_img
- Advertisement -

ಮೂಡಲಗಿ ಮಹಾರಾಜ’ ನಿಗೆ ಭಕ್ತಿಯ ಬೀಳ್ಕೊಡುಗೆ

ಮೂಡಲಗಿ- ಹಿಂದೂ ಧರ್ಮದಲ್ಲಿ ಯಾವುದೇ ಪೂಜೆ- ಪುನಸ್ಕಾರವಿರಲಿ ಮೊದಲು ಗಣೇಶನಿಗೆ ಪೂಜೆ ಸಲ್ಲಿಸುವ ವಾಡಿಕೆಯು ಪ್ರಾಚಿನ ಕಾಲದಿಂದಲೂ ರೂಢಿಯಲ್ಲಿದೆ. ಅದು ಯಾವುದೇ ಕೆಲಸವಿರಲಿ. ಶುಭ ಕೆಲಸವಿದ್ದಾಗ ಗಣೇಶನನ್ನು ಪೂಜಿಸಿ ಆರಾಧಿಸಿದರೆ ಕಷ್ಟ- ಕಾರ್ಪಣ್ಯಗಳು ದೂರವಾಗುತ್ತವೆ ಎಂಬ ನಂಬಿಕೆಯು ಈಗಲೂ ನಮ್ಮ ಪೂರ್ವಜರಲ್ಲಿದೆ ಎಂದು ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಶುಕ್ರವಾರದಂದು ಪಟ್ಟಣದ ಬಸವ ಮಂಟಪದಲ್ಲಿ ಏಕದಂತ ಉತ್ಸವ ಸಮಿತಿಯಿಂದ ಜರುಗಿದ “ಮೂಡಲಗಿ ಮಹಾರಾಜ” ಗಣೇಶನ ವಿಸರ್ಜನಾ ಕಾರ್ಯಕ್ರಮದಲ್ಲಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ನಮ್ಮ ಧರ್ಮದಲ್ಲಿ ಗಣೇಶನೇ ಶ್ರೇಷ್ಠವಾದ ದೇವರು ಎಂದು ಹೇಳಿದರು.

- Advertisement -

ನಮ್ಮ ದೇಶವು ಕೋಮು ಸಾಮರಸ್ಯವನ್ನು ಬಿಂಬಿಸುವ ಜಗತ್ತಿನ ಏಕಮೇವ ದೇಶವಾಗಿದೆ. ಅನೇಕ ಜಾತಿಗಳು, ನಾನಾ ಧರ್ಮಗಳು, ವಿವಿಧ ಪಂಥಗಳು ಇದ್ದರೂ ಎಲ್ಲರೂ ಜಾತ್ಯತೀತ ಮನೋಭಾವನೆಯಿಂದ ಬದುಕುತ್ತಿದ್ದೇವೆ. ನಮ್ಮ ಆಚರಣೆಗಳು ಭಿನ್ನವಾಗಿದ್ದರೂ ವಿವಿಧತೆಯಲ್ಲಿ ಏಕತೆಯನ್ನು ಅಳವಡಿಸಿಕೊಳ್ಳುತ್ತಿದ್ದೇವೆ ಎಂದರು.

ಪ್ರಥಮ ಬಾರಿಗೆ ೨೧ ದಿನಗಳ ಗಣೇಶನನ್ನು ಕೂರಿಸಿದ ಸಮಸ್ತ ಯುವಕರನ್ನು ಅಭಿನಂದಿಸುತ್ತೇನೆ ಎಂದು ಹೇಳಿದ ಶಾಸಕರು, ಈ ಭಾಗದ ಆರಾಧ್ಯ ದೈವವಾಗಿರುವ ಶಿವಬೋಧರಂಗನ ಮಠವು ಕೂಡ ಅನೇಕ ಪವಾಡಗಳನ್ನು ಸೃಷ್ಟಿಸಿರುವುದು ಇತಿಹಾಸಕ್ಕೆ ನಾಂದಿಹಾಡಿದೆ. ಪ್ರತಿಯೊಬ್ಬರ ಮನಸ್ಸು- ಹೃದಯಲ್ಲಿ ಶ್ರೀಮಠವು ನೆಲೆಸಿರುವುದು ಭಕ್ತ ಸಮೂಹದ ಜಾತ್ಯತೀತ ತತ್ವಕ್ಕೆ ಮಾದರಿಯಾಗಿದೆ ಎಂದು ಈ ಭಾಗದ ಸಕಲ ಭಕ್ತರ ಸೇವಾ ಕಾರ್ಯಗಳನ್ನು ಮುಕ್ತ ಮನಸ್ಸಿನಿಂದ ಶ್ಲಾಘಿಸಿದರು.

ವಿನಾಯಕನಿಂದ ಸಕಾಲಕ್ಕೆ ಮಳೆಯಾಗಿ, ಉತ್ತಮ ಫಸಲಾಗಿ, ರೈತರ ಮೊಗದಲ್ಲಿ ಸಂತಸವನ್ನುಂಟು ಮಾಡಲಿ. ಅನ್ನದಾತನ ಕಷ್ಟಗಳು ದೂರವಾಗಲಿ, ಸಕಲರಿಗೂ ಸನ್ಮಂಗಳವಾಗಲಿ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.

- Advertisement -

ಪ್ರಮುಖರಾದ ಸುಭಾಸ ಢವಳೇಶ್ವರ, ರವಿ ಸೋನವಾಲಕರ, ಸಂತೋಷ ಸೋನವಾಲಕರ, ಮಹಾದೇವ ಶೆಕ್ಕಿ, ವೇ.ಮೂ. ಶಂಕರಯ್ಯ ಹಿರೇಮಠ, ಅರುಣ ಪತ್ತಾರ, ಮಲ್ಲು ಯಾದವಾಡ, ವಿನೋದ ಮಾನೆ, ಅನ್ವರ ನದಾಫ, ಭೀಮಶಿ ಢವಳೇಶ್ವರ, ಹಣಮಂತ ಗುಡ್ಲಮನಿ, ವಿನೋದ ಪತ್ತಾರ, ಶಿವಬಸು ಸುಣಧೋಳಿ, ಶೀತಲ ಬೇವಿನಕಟ್ಟಿ, ಮನೋಹರ ಸಣ್ಣಕ್ಕಿ, ಪುರಸಭೆಯ ಸದಸ್ಯರು, ಏಕದಂತ ಉತ್ಸವ ಸಮಿತಿ ಸದಸ್ಯರು, ವ್ಯಾಪಾರಸ್ಥರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಸಾಲದ ಸುಳಿಗೆ ಸಿಲುಕಿ ರೈತ ಆತ್ಮಹತ್ಯೆ

ಸಿಂದಗಿ: ಸಾಲದ ಸುಳಿಗೆ ಸಿಲುಕಿದ ರೈತನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಮನ್ನಾಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ದುಂಡಪ್ಪ ಸಿದ್ರಾಮಪ್ಪ ಮನಗೂಳಿ(೩೫) ಮೃತ ದುರ್ದೈವಿ ರೈತನಾಗಿದ್ದಾನೆ....
- Advertisement -

More Articles Like This

- Advertisement -
close
error: Content is protected !!
Join WhatsApp Group