spot_img
spot_img

ಮತಾಂತರಗೊಂಡ ಬಸವಣ್ಣನವರನ್ನು ನಿಷೇಧಿಸಿ ನೋಡೋಣ – ಯು. ಬಸವರಾಜ ಆಗ್ರಹ

Must Read

- Advertisement -

ಸಿಂದಗಿ: ಮತಾಂತರ ನಿಷೇಧ ಕಾನೂನು ತರಲು ಹೊರಟಿರುವ ರಾಜ್ಯ ಸರರ್ಕಾರ 12ನೇ ಶತಮಾನದಲ್ಲಿ ಬ್ರಾಹ್ಮಣರಾಗಿದ್ದ ಬಸವಣ್ಣ ಲಿಂಗಾಯತ ಧರ್ಮಕ್ಕೆ ಮತಾಂತರರಾದರು ಹಾಗಾದರೆ ಅವರನ್ನು ನಿಷೇಧ ಮಾಡಿ ನೋಡೋಣ ಎಂದು ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಯು.ಬಸವರಾಜ ಹರಿ ಹಾಯ್ದರು.

ಪಟ್ಟಣದ ಡಾ|| ಬಾಬಾಸಾಹೇಬ ಅಂಬೇಡ್ಕರ ಭವನದಲ್ಲಿ ಉತ್ತರ ಕನ್ನಡ ಜಿಲ್ಲೆಯ ಪ್ರಕದ ಯುವ ಸದಸ್ಯ ದಿ.ವಿಠ್ಠಲ ಭಂಢಾರಿ ಸಭಾಂಗಣ ಹಾಗೂ ದಿ. ರೈತ ಹೋರಾಟಗಾರ ಮಾರುತಿ ಮಾನ್ಪಡೆ ವೇದಿಕೆಯಲ್ಲಿ ಸಿ.ಪಿ.ಐ.(ಎಂ) 20ನೇ ಬಿಜಾಪುರ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಕೃಷಿಯನ್ನೆ ಅವಲಂಬಿಸಿ ಬದುಕುವ ದೇಶದ 70% ರೈತರು, ಕೃಷಿ ಕೂಲಿಕಾರರ ಭೂಮಿಯನ್ನು ಕಿತ್ತುಕೊಂಡು ಕಾರ್ಪೊರೇಟ್ ಕಂಪನಿಗಳಿಗೆ ವಹಿಸಿಕೊಡಲು ಈ ದೇಶದ ಪ್ರಧಾನಿ ಮೋದಿ ಸರ್ಕಾರವು ಮುಂದಾಗಿತ್ತು. ಸಾವಿರಾರು ರೈತರ ನಡೆಸಿದ ಹೋರಾಟದಿಂದ ಅದನ್ನು ಹಿಂಪಡೆದರು ಇವರಿಗೆ ರೈತರ ಬದುಕಿನ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ ಎಂದು ಹೇಳಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮಾಡಬೇಕಾದ ಜನಪರ ಕೆಲಸಗಳು ಬೇಕಾದಷ್ಟು ಇವೆ ಅವನ್ನು ಮಾಡುವುದನ್ನು ಬಿಟ್ಟು ಬೇಡವಾದ ಕಾನೂನನ್ನು ಜಾರಿಗೆ ತರಲು ಹೊರಟಿದ್ದಲ್ಲದೆ ಜಾನುವಾರು ಹತ್ಯೆ ನಿಷೇಧ ಕಾನೂನು ತಂದು ದಲಿತರು, ಮುಸ್ಲಿಂ ಅಲ್ಪಸಂಖ್ಯಾತರು, ಮಾಂಸ ತಿನ್ನಬಾರದು ಇದು ಪ್ರಾಣಿ ಹಿಂಸೆ ಆಗುತ್ತದೆ. ಭತ್ತ, ಜೋಳ,ಇತ್ಯಾದಿಗಳು ಜೀವ ಇರುವ ಸಸ್ಯಗಳನ್ನು ತಿನ್ನುವವರು ಇದ್ದಾರೆ ಹಾಗಾದರೆ ಅದನ್ನು ನಿಷೇಧಿಸಿ ನೋಡೋಣ ಆಹಾರ ತಿನ್ನುವುದು ಅವರವರ ಇಷ್ಟ ಅವರ ಹಕ್ಕು, ತಿನ್ನುವ ಆಹಾರದ ಮೇಲೆ ದಾಳಿಮಾಡಲು ಇವರಿಗೆ ಯಾವ ಹಕ್ಕಿದೆ ಎಂದು ಪ್ರಶ್ನಿಸಿದರು.

- Advertisement -

ರಾಜ್ಯ ಸಮಿತಿ ಸದಸ್ಯೆ ಶ್ರೀಮತಿ ಎಸ್.ಎಸ್.ಸುನಂದಾ ಮಾತನಾಡಿ, ಕಾರ್ಮಿಕರ ಕಾನೂನುಗಳನ್ನು ಮೊಟಕುಗೊಳಿಸಿ ಅವರ ಶೋಷಣೆ ಹೆಚ್ಚಿಸಿರುವ ಕೇಂದ್ರ ಹಾಗೂ ರಾಜ್ಯದ ಬಿ.ಜೆ.ಪಿ. ಸರರ್ಕಾರಗಳು ಕಾರ್ಪೊರೇಟ್ ಕಂಪನಿಗಳ ಗುಲಾಮರನ್ನಾಗಿಸಲು ಮುಂದಾಗಿ ದೇಶದ ಸಾರ್ವಜನಿಕ ಸಂಸ್ಥೆಗಳನ್ನೆಲ್ಲ ಕಾರ್ಪೊರೇಟ್ ಕಂಪನಿಗಳಿಗೆ ಮೋದಿ ಸರಕಾರ ಧಾರೆ ಎರೆಯುತ್ತಿದೆ ಅದನ್ನು ಮೊದಲು ನಿಲ್ಲಿಸಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಹಿಳೆಯರು, ಮಕ್ಕಳಿಗೆ ಐ.ಸಿ.ಡಿ.ಎಸ್.ಯೋಜನೆಯ ಆಹಾರದಿಂದ ಅವರ ಆರೋಗ್ಯವನ್ನು ಕಾಪಾಡಲಾಗುತ್ತಿದೆ. ಆದರೆ ಕೇಂದ್ರ ಸರಕಾರ ಆಯೋಜನೆಯ ಅನುದಾನ ಕಡಿತಗೊಳಿಸಿದರೆ ರಾಜ್ಯ ಸರಕಾರ ಎಲ್.ಕೆ.ಜಿ, ಯು.ಕೆ.ಜಿ ಸ್ಕೂಲ್‍ಗಳನ್ನು ಪ್ರಾಥಮಿಕ ಶಾಲೆಗಳಲ್ಲಿ ತೆರೆಯುವುದರ ಮುಖಾಂತರ ಅಂಗನವಾಡಿಗಳನ್ನು ಮುಚ್ಚಲು ಮುಂದಾಗಿದೆ ಇದನ್ನು ಕೂಡಲೆ ಕೈ ಬಿಡಬೇಕು ಎಂದು ಅಗ್ರಹಿಸಿದರು.

ಅಧ್ಯಕ್ಷತೆ ವಹಿಸಿದ ಹಿರಿಯ ಧುರೀಣ ಭೀಮಸಿ ಕಲಾದಗಿ, ಜಿಲ್ಲಾ ಕಾರ್ಯದರ್ಶಿ ಅಣ್ಣಾರಾಯ ಈಳಗೇರ, ಜನವಾದಿ ಮಹಿಳಾ ಸಂಘದ ಸುರೇಖಾ ರಜಪೂತ, ಜಿಲ್ಲಾ ಕಾರ್ಯದರ್ಶಿ ಲಕ್ಷಣ ಹಂದ್ರಾಳ ಕ.ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಭೀಮರಾಯ ಪೂಜಾರಿ, ಅಂಗನವಾಡಿ ನೌಕರರ ಸಂಘ ಸರಸ್ವತಿ ಮಠ, ಸುನಂದಾ ನಾಯ್ಕ, ಭಾರತಿ ವಾಲಿ, ಎಸ್.ಜಿ.ಬೋರಗಿ, ಚಡಚಣದ ಅಶ್ವಿನಿ ತಳವಾರ ಮುಂತಾದವರು ವೇದಿಕೆ ಮೇಲಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಪಕ್ಷದ ಹಿರಿಯ ಸದಸ್ಯ ಗುರುಲಿಂಗಪ್ಪ ಶಿರ್ಶಾಡ ರವರು ಧ್ವಜಾರೋಹಣ ನೆರವೇರಿಸಿ ಹುತಾತ್ಮ ಸ್ಥಂಭಕ್ಕೆ ಪುಷ್ಪ ನಮನ ಸಲ್ಲಿಸಿದರು.

- Advertisement -

ಜಿಲ್ಲಾ ಕಾರ್ಯದರ್ಶಿ ಅಣ್ಣಾರಾಯ ಈಳಗೇರ ಅವರು ಕಳೆದ ಮೂರು ವರ್ಷಗಳಿಂದ ನಡೆಸಿದ ಚಟುವಟಿಕೆ ವರದಿ ಮಂಡಿಸಿ ಸಮ್ಮೇಳನದಲ್ಲಿ 17 ನಿರ್ಣಯಗಳನ್ನು ಕೈಕೊಳ್ಳಲಾಯಿತು.

- Advertisement -
- Advertisement -

Latest News

‘Silent killer’ ಎಂದು ಕರೆಯಲ್ಪಡುವ ಒಂದು ಹಾವುಂಟು !

ಈ ಹಾವನ್ನು ಈ ರೀತಿ ಕರೆಯಲು ಹಲವು ಕಾರಣಗಳುಂಟು. ಈ ಹಾವು ರಾತ್ರಿ ವೇಳೆಯಲ್ಲಿಯೇ ಹೆಚ್ಚು ಓಡಾಟ ಮಾಡುವುದು (ನಿಶಾಚರಿ). ಮತ್ತೆ ಈ ಹಾವು ಮನುಷ್ಯರಿಗೆ...
- Advertisement -

More Articles Like This

- Advertisement -
close
error: Content is protected !!
Join WhatsApp Group