spot_img
spot_img

ಸಹಕಾರ ತತ್ವಕ್ಕೆ ಬದ್ಧರಾಗೋಣ: ಚಿದಾನಂದ ಧೂಪದ

Must Read

spot_img
- Advertisement -

ಸೂಳೇಬಾವಿ: ನಮ್ಮ ಜೀವನ ನಿರ್ವಹಣೆಗಾಗಿ ನಾವು ಒಂದಿಲ್ಲೊಂದು ಬಗೆಯಲ್ಲಿ ಉದ್ಯೋಗ, ಉದ್ಯಮ ಮಾಡಿಕೊಂಡಿದ್ದೇವೆ. ಜೊತೆೆಗೆ ನಮ್ಮವರು, ನಮ್ಮ ನೆರೆಹೊರೆಯವರ ಬದುಕಿನ ಒಳಿತಿಗಾಗಿಯೂ ಸಹ ನಮ್ಮ ಸೇವಾಗುಣ ಅರ್ಪಿಸಿಕೊಳ್ಳಬೇಕು ಅಂದಾಗ ಮಾತ್ರ ನಮ್ಮ ಸುತ್ತಮುತ್ತಲ ಸಮಾಜ ಸಹಬಾಳ್ವೆಯಿಂದ ಬದುಕಲು ಸಾಧ್ಯ ಎಂದು ಮಾಜಿ ತಾಲೂಕು ಪಂಚಾಯ್ತಿ ಸದಸ್ಯ, ಜನಸ್ನೇಹಿ ಪತ್ತಿನ ಸಹಕಾರಿ ಸಂಘದ ಸಂಸ್ಥಾಪಕ ಅಧ್ಯಕ್ಷ ಚಿದಾನಂದ ಧೂಪದ ಅಭಿಪ್ರಾಯ ಪಟ್ಟರು.

ಸೂಳೇಭಾವಿ-ಅಮೀನಗಡ ಹೆದ್ದಾರಿಯ ನಾಗರಾಳರ ಕಾಂಪ್ಲೆಕ್ಸ್ನಲ್ಲಿ ನೂತನಾಗಿ ಸ್ಥಾಪಿಸಲಾದ ಜನಸ್ನೇಹಿ ಪತ್ತಿನ ಸಹಕಾರಿ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಅವರು ಮಾತನಾಡಿದರು.

ಯಾವುದೇ ಒಂದು ಸಂಘ ಅಥವಾ ಸಂಸ್ಥೆ ಅಭಿವೃದ್ಧಿಯತ್ತ ತನ್ನ ಹೆಜ್ಜೆ ಇರಿಸಬೇಕಾದರೆ ಸರ್ವಸದಸ್ಯರ ಸಲಹೆ, ಸೂಚನೆ, ಮಾರ್ಗದರ್ಶನ ಮತ್ತು ಎಲ್ಲದಕ್ಕಿಂತ ಮುಖ್ಯವಾಗಿ ವಿಶ್ವಾಸ ನಂಬಿಕೆ ತುಂಬ ಮುಖ್ಯ. ಅಂತಹ ವಿಶ್ವಾಸವನ್ನಿಟ್ಟು ಸರ್ವಾನುಮತದಿಂದ ಅಧ್ಯಕ್ಷನನ್ನಾಗಿ ಆಯ್ಕೆಗೊಳಿಸಿ ಜವಾಬ್ದಾರಿ ನೀಡಿದ್ದೀರಿ. ಅದನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ಪ್ರಯತ್ನ ಮಾಡುತ್ತೇನೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದರು.

- Advertisement -

ಉಪಾಧ್ಯಕ್ಷ ಮಲ್ಲು ಕತ್ತಿ ಅವರು ಮಾತನಾಡಿ, ಸದಸ್ಯರ ಗುಂಪಿನಲ್ಲಿ ನನಗಿಂತಲೂ ಹೆಚ್ಚಿನ ವಯಸ್ಸು ಹಾಗೂ ಅನುಭವ ಉಳ್ಳವರಿದ್ದರೂ ಉಪಾಧ್ಯಕ್ಷ ಸ್ಥಾನಕ್ಕೆ ನನ್ನನ್ನು ಆಯ್ಕೆಗೊಳಿಸಿ ಜವಾಬ್ದಾರಿ ಹೆಚ್ಚಿಸಿದ್ದೀರಿ. ನಿಮ್ಮ ವಿಶ್ವಾಸ ಮತ್ತು ನಂಬಿಕೆ ಚ್ಯುತಿ ಬರದಂತೆ ನಡೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದರು. ಸಂಸ್ಥೆಯ ವ್ಯವಸ್ಥಾಪಕ ಸಂಜು ಗೌಡರ ಉಪಸ್ಥಿತರಿದ್ದರು.

ಸದಸ್ಯರಾದ ಗೈಬುಸಾಬು ಶಿರೂರ, ರಮೇಶ ಕುರಿ, ಪರಶುರಾಮ ಸಂಗಮ, ಜಗದೀಶ ರಕ್ಕಸಗಿ, ಇಬ್ರಾಹಿಂ ಮಳಗಾಂವಿ, ವೀರೇಶ ನೀಲುಗಲ್ಲ, ಶಿವು ಬಳಬಟ್ಟಿ, ಶ್ರೀಮತಿ ಮೀನಾಕ್ಷಿ ಧುತ್ತರಗಿ, ಶ್ರೀಮತಿ ಮಲ್ಲಮ್ಮ ಹನಮಂತ ಹಂಡಿ, ಕಲ್ಯಾಣಿ ಭಜಂತ್ರಿ, ನಿಂಬಣ್ಣ ಹಣಗಿ, ಇದ್ದರು.

- Advertisement -
- Advertisement -

Latest News

ಬೆಳಗಾವಿ ಜಿಲ್ಲಾ ಕೃಷಿಕ ಸಮಾಜದ ನೂತನ ಅಧ್ಯಕ್ಷರಾಗಿ ಶಂಕರಗೌಡ ಪಾಟೀಲ್ ಆಯ್ಕೆ

ಜಿಲ್ಲಾ ಕೃಷಿಕ ಚುನಾವಣೆಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರವೇಶ ; ಎಲ್ಲ ಸ್ಥಾನಗಳೂ ಅವಿರೋಧ ಆಯ್ಕೆ ರಾಜ್ಯ ಪ್ರತಿನಿಧಿಯಾಗಿ ಬಾಳಪ್ಪ ಬೆಳಕೂಡ ಆಯ್ಕೆ ಬೆಳಗಾವಿ- ಸಹಕಾರ ವಲಯದ ಜಿಲ್ಲಾ...
- Advertisement -

More Articles Like This

- Advertisement -
close
error: Content is protected !!
Join WhatsApp Group