spot_img
spot_img

ದಿಲ್ಲಿ ಹಾಗೂ ದಿಲ್ ಗಳ ಅಂತರ ಕಡಿಮೆ ಮಾಡೋಣ – ಪ್ರಧಾನಿ ಮೋದಿ

Must Read

- Advertisement -

ಹೊಸದಿಲ್ಲಿ – ಜಮ್ಮು ಕಾಶ್ಮೀರದಲ್ಲಿ ಅಭಿವೃದ್ಧಿ ವೇಗ ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿಯವರು ವಿಪಕ್ಷಗಳ ಸಭೆಯೊಂದನ್ನು ಕರೆದು ಚರ್ಚೆ ಮಾಡಿದರು.

ಜಮ್ಮು ಕಾಶ್ಮೀರ ಕುರಿತಂತೆ ಜಾರಿಯಲ್ಲಿರುವ ಯಾವುದೇ ಕಾಯ್ದೆಗಳಲ್ಲಿ ಬದಲಾವಣೆ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿರುವ ಮೋದಿ, ಲೋಕತಂತ್ರದ ಅನುಸಾರ ಎಲ್ಲ ವಿಪಕ್ಷಗಳ ಜೊತೆ ಕುಳಿತು ಮಾತನಾಡಲಾಗಿದೆ. ಕಾಶ್ಮೀರದ ಅಭಿವೃದ್ಧಿ ಕುರಿತಂತೆ ೧೪ ಜನ ವಿಪಕ್ಷ ನಾಯಕರ ಜೊತೆ ಇಂದು ಚರ್ಚೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಹಾಗೆಯೇ ದಿಲ್ಲಿ ಹಾಗೂ ದಿಲ್ ಗಳ ನಡುವೆ ಇರುವ ಅಂತರವನ್ನು ಕಡಿಮೆ ಮಾಡಿ ನಾವು ಕೆಲಸ ಮಾಡೋಣ ಎಂದೂ ಮೋದಿಯವರು ನುಡಿದಿದ್ದಾರೆ.

- Advertisement -

ರಾಜ್ಯದಲ್ಲಿ ೩೭೦ ನೇ ಕಲಮ್ ರದ್ದು ಮಾಡಿದ ನಂತರ ಇದು ಮೊದಲ ಸಭೆಯಾಗಿದ್ದು, ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಫರೂಕ್ ಅಬ್ದುಲ್ಲಾ, ಓಮರ್ ಅಬ್ದುಲ್ಲಾ, ಮಹಬೂಬಾ ಮುಫ್ತಿ, ಗುಲಾಮ ನಬಿ ಆಜಾದ ಸೇರಿದಂತೆ ಅನೇಕ ನಾಯಕರು ಭಾಗವಹಿಸಿದ್ದರು.

ಜಮ್ಮು ಕಾಶ್ಮೀರದ ಬೆಳವಣಿಗೆ ಕುರಿತಂತೆ ಪ್ರಧಾನಿಯವರ ಈ ಹೆಜ್ಜೆ ಅತ್ಯಂತ ಮಹತ್ವದ್ದು ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

- Advertisement -
- Advertisement -

Latest News

ಅಹಂಕಾರದಿಂದ ಸರ್ವನಾಶ: ಡಾ. ಶ್ರೇಯಾ ಮಹೀಂದ್ರಕರ್

ಬೀದರ: ಪ್ರತಿ ವರ್ಷ ಶ್ರೀ ರಾಮನವಮಿಗೆ ಶ್ರೀ ರಾಮಜನ್ಮೋತ್ಸವವನ್ನು ನಾವು ಆಚರಿಸುತ್ತೇವೆ. ಶ್ರೀರಾಮ ನಮ್ಮ ಆದರ್ಶದ ಪ್ರತೀಕವಾಗಿದ್ದಾನೆ. ಮರ್ಯಾದಾ ಪುರುಷೋತ್ತಮ ರಾಮ ಮತ್ತು ರಾವಣರ ಮಧ್ಯೆ...
- Advertisement -

More Articles Like This

- Advertisement -
close
error: Content is protected !!
Join WhatsApp Group