ಸರಕಾರದ ಕೋವೀಡ್ ಆದೇಶವನ್ನು ಕಟ್ಟುನಿಟ್ಟಿನಿಂದ ಪಾಲಿಸೋಣ – ಆನಂದ ಮಾಮನಿ

Must Read

ಆಹಾರ ಧಾನ್ಯದ ಕಿಟ್ ವಿತರಣೆ

ಸವದತ್ತಿ - ಕೋರೋನಾ ರೋಗ ಹರಡದಂತೆ ನೋಡಿಕೊಳ್ಳಲು ಸರಕಾರ ಲಾಕ್ ಡೌನ ಮಾಡಿದ್ದರಿಂದ ನಮ್ಮ ಬ್ರಾಹ್ಮಣ ಸಮಾಜದ ಕುಟುಂಬದವರಿಗೆ ಜೀವನ ಸಾಗಿಸಲು ತುಂಬಾ ಕಷ್ಟವಾಗಿದ್ದು ಆದ್ದರಿಂದ...

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...

ಅರುಣ ಕಿರಣ ಪ್ರತಿದಿನ

. . .🕉. . . . || ಶ್ರೀ ಗುರುಭ್ಯೋ ನಮಃ || || ಓ೦ ಗ೦ ಗಣಪತಯೇ ನಮಃ || 🙏ಶುಭೋದಯ🙏 16: 06: 2021 ಬುಧವಾರ ಕಲಿಯುಗಾಬ್ದ...

ಸವದತ್ತಿ – “ಮಹಾ ಮಾರಿ ಕೊರೋನಾ ರೋಗವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ ಬಹಳಷ್ಟು ಜನರ ಪ್ರಾಣವನ್ನು ಬಲಿ ಪಡೆದಿದೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಆಲೋಚಿಸಿ ಮೊದಲು ಸಾರ್ವಜನಿಕರ ಜೀವ ರಕ್ಷಣೆಗಾಗಿ ಹೋರಾಡಬೇಕಿದೆ. ತಾಲೂಕಿನಲ್ಲಿ ಯಾವ ಸರಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಮತ್ತು ಔಷಧಿಯ ಕೊರತೆಯಾಗಬಾರದು.

ಕೊರತೆ ಇದ್ದಲ್ಲಿ ಕೊಡಲೆ ನನಗೆ ತಿಳಿಸಬೇಕು. ದಿನದ 24 ಗಂಟೆಯು ನಾನೂ ದೂರವಾಣಿ ಮುಖಾಂತರ ಮಾತನಾಡಿ ವ್ಯವಸ್ಥೆ ಮಾಡುವೆ. ಸರಕಾರದ ಕೊವಿಡ್ ಮಾರ್ಗಸೂಚಿ ಉಲ್ಲಂಘನೆಯಾಗಬಾರದು ಜೀವ ಉಳಿದರೆ ಜೀವನ ಆದ್ದರಿಂದ ಸರಕಾರದ ಕೋವಿಡ್ ಆದೇಶವನ್ನು ಕಟ್ಟುನಿಟ್ಟಿನಿಂದ ಪಾಲಿಸೋಣ” ಎಂದು ಶಾಸಕ ಹಾಗೂ ಉಪ ಸಭಾಧ್ಯಕ್ಷ ಆನಂದ ಮಾಮನಿ ಹೇಳಿದರು.

ಅವರು ತಾಲೂಕಾ ಪಂಚಾಯತ ಸಭಾಭವನದಲ್ಲಿ ನಡೆದ ಟಾಸ್ಕಪೊರ್ಸ ಹಾಗೂ ಕೋರೋನಾ ಕೋವಿಡ್ ತಾಲೂಕಾ ಮಟ್ಟದ ಅಧಿಕಾರಿಗಳ ಸಭೆಯ ಅದ್ಯಕ್ಷತೆ ವಹಿಸಿ ಮಾತನಾಡಿದರು.

- Advertisement -

ಸವದತ್ತಿ ಸರಕಾರಿ ಆಸ್ಪತ್ರೆಯ ಆವರಣದಲ್ಲಿಯೇ ಆಕ್ಸಿಜನ್ ಘಟಕವನ್ನು ತೆರೆಯಲಾಗುವುದು. ಸೋಂಕು ರೋಗ ದೃಢಪಟ್ಟವರಿಗೆ ಔಷಧಿಯ ಕೊರತೆಯಾಗಬಾರದು ಸೋಂಕು ರೋಗವು ನನಗೂ ಕೊಡಾ ದೃಢಪಟ್ಟಿತ್ತು ನಾನು ಸಂಪೂರ್ಣವಾಗಿ ಮನೆಯಲ್ಲೇ ಉಳಿದು ಔಷಧೋಪಚಾರ ಪಡೆದು ಗುಣ ಮುಖನಾಗಿ ಹೊರಬಂದೆ.

ಆದರೆ ನಾನು ಮನೆಯಲ್ಲಿದ್ದರೂ ಕೂಡಾ ತಾಲೂಕಾಡಳಿತದ ಸಂಪರ್ಕದಲ್ಲಿ ಉಳಿದು ಸೇವೆ ಸಲ್ಲಿಸಿದೆ. ನನ್ನ ಅನುಪಸ್ಥಿತಿಯಲ್ಲೂ ತಾಲೂಕಾ ಮಟ್ಟದ ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಹಾಗೂ ಮುಂದೆಯೂ ಕೂಡ ಆಸ್ಪತ್ರೆಗೆ ಬಂದ ವ್ಯಕ್ತಿಯು ಕೆಮ್ಮು ನೆಗಡಿಯಂತ ಕೋವಿಡ್ ತಪಾಸಣಾ ವರದಿ ಬರುವವರೆಗೂ ಕಾಯಬಾರದು ಅವರಿಗೆ ಪ್ರಾಥಮಿಕ ಹಂತದ ಚಿಕಿತ್ಸೆ ನೀಡಬೇಕು. ಎಂದು ಅಧಿಕಾರಿಗಳಿಗೆ ಹೇಳಿದರು.

ಈ ಸಂದರ್ಭದಲ್ಲಿ ತಹಶಿಲ್ದಾರ ಪ್ರಶಾಂತ ಬಿ ಪಾಟೀಲ. ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಯಶ್ವಂತಕುಮಾರ. ಯರಗಟ್ಟಿ ತಹಶಿಲ್ದಾರ ಎಮ್ ಎನ್ ಮಠದ.ಡಿ ವೈ ಎಸ್ ಪಿ. ರಾಮನಗೌಡಾ ಹಟ್ಟಿ. ಸಿಪಿಐ ಮಂಜುನಾಥ ನಡುವಿನಮನಿ. ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಎಮ್ ಚನ್ನಪ್ಪನವರ. ತಾಲೂಕಾ ವೈದ್ಯಾಧಿಕಾರಿ ಡಾಕ್ಟರ ಮಹೇಶ ಚಿತ್ತರಗಿ. ಸವದತ್ತಿ ಪಿಎಸ್‍ಐ ಶಿವಾನಂದ ಗುಡನಟ್ಟಿ. ಯರಗಟ್ಟಿ ಪಿಎಸಐ ಪಿ ಆರ್ ಗಂಗೂಳ ಸೇರಿದಂತೆ ತಾಲೂಕಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ವರದಿ: ವೈ ಬಿ ಕಡಕೋಳ

- Advertisement -
- Advertisement -

Latest News

ಆಹಾರ ಧಾನ್ಯದ ಕಿಟ್ ವಿತರಣೆ

ಸವದತ್ತಿ - ಕೋರೋನಾ ರೋಗ ಹರಡದಂತೆ ನೋಡಿಕೊಳ್ಳಲು ಸರಕಾರ ಲಾಕ್ ಡೌನ ಮಾಡಿದ್ದರಿಂದ ನಮ್ಮ ಬ್ರಾಹ್ಮಣ ಸಮಾಜದ ಕುಟುಂಬದವರಿಗೆ ಜೀವನ ಸಾಗಿಸಲು ತುಂಬಾ ಕಷ್ಟವಾಗಿದ್ದು ಆದ್ದರಿಂದ...
- Advertisement -

More Articles Like This

- Advertisement -
close
error: Content is protected !!