ಸಿಂದಗಿ – ಜಗತ್ತಿನ ಜೀವ ಸಂಕುಲಕ್ಕೆ ಆಶ್ರಯವಾದ ಭೂಮಿಯನ್ನು ಮತ್ತು ಮಣ್ಣನ್ನು ಉಳಿಸಿ ಮುಂದಿನ ಜನಾಂಗಕ್ಕೆ ಫಲವತ್ತಾದ ಭೂಮಿ ನೀಡಲು ಶ್ರೀ ಸದ್ಗುರು ಜಗ್ಗಿ ವಾಸುದೇವ್ ಅವರ ಹೋರಾಟಕ್ಕೆ ಬೆಂಬಲ ನೀಡೋಣವೆಂದು ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಅಶೋಕ ಎಸ್ ಅಲ್ಲಾಪೂರ ಹೇಳಿದರು.
ನಗರಕ್ಕೆ ಮಣ್ಣು ಉಳಿಸಿ ಅಭಿಯಾನದ ನೇತೃತ್ವವನ್ನು ವಹಿಸಿಕೊಂಡು 7 ಜಿಲ್ಲೆಗಳ ಪ್ರವಾಸ ಹಮ್ಮಿಕೊಂಡಿರುವ ಪ್ರೊ. ಬಸವರಾಜ ಬಿರಾದಾರ್ ಹಾಗೂ ಸಾವಯವ ರೈತರಾದ ಎ.ಆರ್. ಪಾಟೀಲ, ಸುನೀಲ ನಾರಾಯಣಕರ ಸಿಂದಗಿ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಗಾಂಧಿ ಸರ್ಕಲದಲ್ಲಿ ಭವ್ಯ ಸ್ವಾಗತವನ್ನು ನೀಡಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ವಿವೇಕಾನಂದ ವೃತ್ತದಲ್ಲಿ ಸನ್ಮಾನಿಸಿ ಮಾತನಾಡಿ, ಇಂದು ರಾಸಾಯನಿಕ ರಸಗೊಬ್ಬರಗಳ ಬಳಕೆಯಿಂದ ಭೂಮಿಯ ಫಲವತ್ತತೆ ಹಾಳಾಗಿ ಹೋಗಿದೆ ವಿಷ ಮಿಶ್ರಿತ ಬೆಳೆಗಳಲ್ಲಿ ಮನುಷ್ಯನ ಆಯುಷ್ಯ ಕಡಿಮೆಯಾಗುತ್ತಾ ಹೊರಟಿದೆ ಅದನ್ನು ತಡೆಗಟ್ಟಬೇಕಾದರೆ ಮತ್ತೆ ಫಲವತ್ತತೆಯನ್ನಾಗಿ ಮಾಡಲು ಸಾವಯವ ಗೊಬ್ಬರಗಳ ಬಳಕೆ ಮಾಡಿದರೆ ಉತ್ತಮ ಫಸಲು ಪಡೆಯಬಹುದು ಅಲ್ಲದೆ ಆರೋಗ್ಯ ಸುಧಾರಿಸಬಹುದು ಎಂದರು.
ಈ ಸಂದರ್ಭ ಮಹಾದೇವ ಅಂಬಲಿ ಶ್ರೀಶೈಲ ಯಳಮೇಲಿ ರಾಜು ಪೂಜಾರಿ ಶಾಂತೂ ರಾಣಾಗೋಳ ಶಬ್ಬಿರ ಪಟೇಲ ಬಿರಾದಾರ ರೈತ ಸಂಘದ ಕಾರ್ಯದರ್ಶಿ ಕೆರೂರು ಸೇರಿದಂತೆ ಅನೇಕ ಕಾರ್ಯಕರ್ತರು ಈ ಅಭಿಯಾನಕ್ಕೆ ಬೈಕ್ ಮುಖಾಂತರ ಗುಲ್ಬರ್ಗ ಜಿಲ್ಲೆಗೆ ಬೀಳ್ಕೊಟ್ಟರು.