spot_img
spot_img

ಪಂಚಮಸಾಲಿ ಹೋರಾಟಕ್ಕೆ ಪತ್ರ ಚಳವಳಿ : ಶಾಸಕರಿಗೆ ಪತ್ರ ನೀಡಿದ ಶ್ರೀಗಳು

Must Read

spot_img
- Advertisement -

ಸಿಂದಗಿ; ರಾಜ್ಯ ಸರ್ಕಾರದ ಮುಂಗಾರು ಅಧಿವೇಶನದಲ್ಲಿ ಮೀಸಲಾತಿ ಹಕ್ಕನ್ನು ಸರ್ಕಾರಕ್ಕೆ ಪ್ರತಿಪಾದಿಸುವಂತೆ ಹಕ್ಕೊತ್ತಾಯಿಸಿ ಶಾಸಕರುಗಳ ಮನೆಯಲ್ಲಿ ಪಂಚಮಸಾಲಿ ಆಗ್ರಹ ಪತ್ರ ಚಳವಳಿ ಆರಂಭವಾಗಿ ಪತ್ರವನ್ನು ಸಿಂದಗಿ ಶಾಸಕ ಅಶೋಕ ಮ. ಮನಗೂಳಿ ಇವರ ಮನೆಯಲ್ಲಿ ಅರ್ಪಿಸಿದರು.

ಕೂಡಲಸಂಗಮ ಪ್ರಥಮ ಜಗದ್ಗುರುಗಳು, ಲಿಂಗಾಯತ ಪಂಚಮಸಾಲಿ ಮಹಾಪೀಠದ ಬಸವ ಪೂಜ್ಯಶ್ರೀ ಜಯಮೃತ್ಯುಂಜಯ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ, ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮೀಸಲಾತಿ ಚಳವಳಿಯ ಸ್ವಾಗತ ಸಮಿತಿ, ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ, ಪಂಚಸೇನೆ, ಯುವ ಘಟಕ, ಮಹಿಳಾ ಘಟಕ, ವಿದ್ಯಾರ್ಥಿ ಪರಿಷತ್, ಕಾನೂನು ಘಟಕ, ರೈತ ಘಟಕ, ರಾಷ್ಟ್ರೀಯ, ರಾಜ್ಯ, ಜಿಲ್ಲಾ ಘಟಕಗಳು ಇವರ ಸಹಯೋಗದೊಂದಿಗೆ ಹಾಗೂ ವಿಜಯಪುರ ಜಿಲ್ಲಾ ಘಟಕ ಇವರ ಆಶ್ರಯದಲ್ಲಿ. ಪಂಚಮಸಾಲಿ-ಮಲೆಗೌಡ-ಗೌಡ-ಲಿಂಗಾಯತ-ದೀಕ್ಷ ಲಿಂಗಾಯತರುಗಳಿಗೆ ರಾಜ್ಯ ಸರ್ಕಾರದಲ್ಲಿ 2ಎ” ಮೀಸಲಾತಿ ಹಾಗೂ ಎಲ್ಲ ಲಿಂಗಾಯತ ಉಪ ಸಮಾಜಗಳಿಗೆ ಕೇಂದ್ರ ಸರ್ಕಾರದ ಓಬಿಸಿ ಮೀಸಲಾತಿಯನ್ನು ಕೂಡಲೇ, ಶಿಫಾರಸ್ಸು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಹಕ್ಕೊತ್ತಾಯಿಸಿ ಆರಂಭಗೊಂಡಿರುವ ಏಳನೇ ಹಂತದ ಚಳವಳಿಯ ಪಂಚಮಸಾಲಿ ಆಗ್ರಹ ಪತ್ರವನ್ನು ಶಾಸಕರಿಗೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ಕೃಷಿ ಆಧಾರಿತ ಹಾಗೂ ಕೃಷಿ ಒಕ್ಕಲಿಗ ಕಾರ್ಮಿಕರಾಗಿರುವ ಲಿಂಗಾಯತ ಪಂಚಮಸಾಲಿ-ಮಲೆಗೌಡ-ಗೌಡ ಲಿಂಗಾಯತ-ದೀಕ್ಷ ಲಿಂಗಾಯತ ಮಕ್ಕಳಿಗೆ ಶೈಕ್ಷಣಿಕ ಹಾಗೂ ಉದ್ಯೋಗದಲ್ಲಿ ‘2ಎ’ ಮೀಸಲಾತಿ ಹಾಗೂ ಲಿಂಗಾಯತ ಎಲ್ಲ ಉಪ ಸಮಾಜಗಳಿಗೂ ಓಬಿಸಿ ಮೀಸಲಾತಿಗಾಗಿ ಕಳೆದ ಬಾರಿಯ ಆಡಳಿತಾರೂಢ ಬಿಜೆಪಿ ಸರಕಾರದ ಬಿಎಸ್ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಸರ್ಕಾರದಿಂದ ಸೂಕ್ತ ಸ್ಪಂದನೆ ಸಿಗಲಿಲ್ಲ. ಪ್ರಸ್ತುತ ಸರ್ಕಾರವೂ ನಿರ್ಲಕ್ಷ ಧೋರಣೆ ತಾಳುತ್ತಿದೆ. ಪಂಚಮಸಾಲಿಗಳ ಹೋರಾಟಕ್ಕೆ ಯಶಸ್ಸು ಸಿಗದೇ ಇರಲು ಕಾಣದ ಕೈಗಳು ಕೆಲಸ ಮಾಡುತ್ತಿವೆ. ಇದ್ಯಾವುದಕ್ಕೂ ಜಗ್ಗದೆ, ಎದೆಗುಂದದೆ ಯಾರೇ ಮುಖ್ಯಮಂತ್ರಿ ಆಗಿರಲಿ ಯಾವುದೇ ಸರ್ಕಾರ ಬರಲಿ ಜಯ ಸಿಗುವವರೆಗೂ ಹೋರಾಟ ನಿರಂತರವಾಗಿರುತ್ತದೆ ಎಂದ ಅವರು, ಸಮಾಜದ ಕೃಪಾಕಟಾಕ್ಷದಿಂದ ಚುನಾಯಿತ ಶಾಸಕರಲ್ಲಿ ಬೆರಳೆಣಿಕೆಯಷ್ಟು ಶಾಸಕರಿಂದ ಮಾತ್ರ ಸಹಕಾರ ದೊರೆತಿದೆ, ಅವರುಗಳಲ್ಲಿ ಸಿಂದಗಿಯ ಶಾಸಕ ಅಶೋಕ ಮನಗೂಳಿ ಅವರು ಕೂಡ ಒಬ್ಬರು. ಮೀಸಲಾತಿ ಹೋರಾಟದ ಪ್ರಥಮ ಸಭೆ ಸಿಂದಗಿಯಲ್ಲಿ ನಡೆದಾಗ ಮಾಜಿ ಸಚಿವ ದಿವಂಗತ ಎಂ ಸಿ ಮನಗೂಳಿ ಅವರು ಸಹಕಾರ  ನೀಡಿ ಹೋರಾಟಕ್ಕೆ ಬಲ ತುಂಬಿದ್ದರು. ಅವರ ಪುತ್ರ ಅಶೋಕ್ ಮನಗೂಳಿ ಅವರು ಪಕ್ಷಾತೀತವಾಗಿ ಗಟ್ಟಿತನದಿಂದ ಸದನದಲ್ಲಿ ಮೀಸಲಾತಿಯ ಹಕ್ಕು ಪ್ರತಿಪಾದಿಸಬೇಕು.  ನಮ್ಮ ಸಮಾಜದಲ್ಲಿ ನಾನೊಬ್ಬನೇ ಬದುಕಬೇಕೆನ್ನುವ ಶಾಸಕರ್ಯಾರು ಇಲ್ಲ. ಕೃಷಿ ಕ್ಷೇತ್ರ ಸೊರಗಿರುವ ಕಾರಣ ಶಿಕ್ಷಣದಿಂದಾದರೂ ನಮ್ಮ ಮಕ್ಕಳು ಸಮಾಜದ ಮುಖ್ಯ ವಾಹಿನಿಗೆ ಬರಲಿ ಎನ್ನುವ ಸದುದ್ದೇಶ ಒಂದೇ ಈ ಹೋರಾಟಕ್ಕೆ ಮೂಲ ಕಾರಣವಾಗಿದೆ.
ಅಂದಿನ ಮುಖ್ಯಮಂತ್ರಿಗಳಾಗಿದ್ದ ಬಸವರಾಜ ಬೊಮ್ಮಾಯಿಯವರ ನೇತೃತ್ವದ ಸರ್ಕಾರ ನಮ್ಮೆಲ್ಲರ ಹೋರಾಟಕ್ಕೆ ಮಣಿದು, ಕೊನೆಯ ಗಳಿಗೆಯಲ್ಲಿ ‘2ಡಿ’ ಎನ್ನುವಂತಹ ಹೊಸ ಪ್ರವರ್ಗವನ್ನು ಸೃಷ್ಟಿಸಿ ಮೀಸಲಾತಿಯ ಆದೇಶ ಪತ್ರವನ್ನು ಘೋಷಿಸಿತ್ತು. ಆದರೆ ಅದು ಅನುಷ್ಠಾನಗೊಳ್ಳಲಿಲ್ಲ. ನೂತನವಾಗಿ ರಾಜ್ಯದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದ ಸರ್ಕಾರಕ್ಕೆ ನಾವು ನೀವು ಎಲ್ಲರೂ ಕೂಡಿ 2023 ರ ಡಿಸೆಂಬರ 12 ರಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ಮುಖ್ಯಮಂತ್ರಿಗಳಿಗೆ ಆಗ್ರಹ ಮಾಡಿದ್ದೆವು. ಆದರೆ ಕೊಟ್ಟ ಮಾತಿನಂತೆ ಮಾನ್ಯ ಮುಖ್ಯಮಂತ್ರಿಗಳು ಇದುವರೆಗೂ ಸಂಬಂಧಪಟ್ಟ ಕಾನೂನಾತ್ಮಕ ಸಭೆಯನ್ನು ಮಾಡಿರುವುದಿಲ್ಲ. ಕಾರಣ ಸಮಾಜ ಎಲ್ಲ ಶಾಸಕರು ಸೇರಿ ಸದ್ಯ ನಡೆಯುತ್ತಿರುವ ಅಧಿವೇಶದಲ್ಲಿ ಒತ್ತಾಯಿಸುವಂತೆ ಮನವಿ ಮಾಡಿದರು.

- Advertisement -

ಮನವಿ ಸ್ವೀಕರಿಸಿದ ಶಾಸಕ ಅಶೋಕ ಮನಗೂಳಿ ಮಾತನಾಡಿ, ಜಗದ್ಗುರುಗಳು ಕೂಡಲಸಂಗಮದಿಂದ ಬೆಂಗಳೂರಿನವರೆಗೆ ಪಂಚ ಲಕ್ಷ ಹೆಜ್ಜೆಗಳ ಐತಿಹಾಸಿಕ ಪಾದಯಾತ್ರೆ ಮಾಡಿ 2021ರ ಜನವರಿ 14 ರಿಂದ ಆರಂಭವಾದ ಈ ಚಳವಳಿಯು ನಿರಂತರವಾಗಿ ಮೂರು ವರ್ಷಗಳ ಕಾಲ ಒಂದು ದಿನವೂ ವಿಶ್ರಾಂತಿ ಇಲ್ಲದೇ ಲಕ್ಷಾಂತರ ಸಮಾಜ ಬಾಂಧವರು ಮನೆ-ಮಠ ಬಿಟ್ಟು ನಿರಂತರವಾಗಿ 3 ವರ್ಷಗಳಿಂದ ಚಳವಳಿ ಮಾಡುತ್ತಾ ಬಂದಿದ್ದಾರೆ. ಇಷ್ಟೆಲ್ಲ ಚಳವಳಿಗಳು ಯಶಸ್ವಿಯಾಗಲು ನಿರಂತರ ಸಹಕಾರ ಇತ್ತು ಎಂಬುದನ್ನು ಸಮಾಜ ಬಾಂಧವರು ಮರೆಯಲು ಸಾಧ್ಯವಿಲ್ಲ. ನಾನು  ಸಿಂದಗಿ ಕ್ಷೇತ್ರದ ಜನಪ್ರತಿನಿಧಿಯಾಗುವಲ್ಲಿ ಪಂಚಮಸಾಲಿ  ಸಮುದಾಯದ ಪಾತ್ರ ಬಹು ದೊಡ್ಡದು. ಅದಕ್ಕಾಗಿ ಮುಂಬರುವ ಅಧಿವೇಶನದಲ್ಲಿ ನ್ಯಾಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ಗಟ್ಟಿಯಾಗಿ ಧ್ವನಿ ಎತ್ತುತ್ತೇನೆ. ಹಗಲಿರುಳೆನ್ನದೆ ರಾಜ್ಯಾದ್ಯಂತ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ  ಪಂಚಮಸಾಲಿಗಳ ಏಳಿಗೆಗೆ ಶ್ರಮಿಸುತ್ತಿರುವ ಬಸವ ಜಯಮೃತ್ಯುಂಜಯ ಸ್ವಾಮೀಜಿಗಳ  ಹೋರಾಟಕ್ಕೆ ಸದಾ ಬೆಂಬಲ ನೀಡುತ್ತೇನೆ ಎಂದರು.

ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅದ್ಯಕ್ಷ ಅಶೋಕ ಅಲ್ಲಾಪೂರ, ಜಿಲ್ಲಾಧ್ಯಕ್ಷ ಬಿ.ಎಂ.ಪಾಟೀಲ, ತಾಲೂಕಾಧ್ಯಕ್ಷ ಎಂ.ಎಂ.ಹಂಗರಗಿ, ನೌಕರರ ಸಂಘದ ಅದ್ಯಕ್ಷ ಅಶೋಕ ತೆಲ್ಲೂರ, ಆನಂದ ಶಾಬಾದಿ ಮಾತನಾಡಿದರು.

ಈ ಸಂದರ್ಭದಲ್ಲಿ ಶಿವಪ್ಪಗೌಡ ಬಿರಾದಾರ, ಸೋಮನಗೌಡ ಬಿರಾದಾರ, ಪ್ರೋ ಅರವಿಂದ ಮನಗೂಳಿ, ರಮೇಶ ದೇಸಾಯಿ, ವಕೀಲರ ಸಂಘದ ಅದ್ಯಕ್ಷ ಎಸ್.ಬಿ.ಪಾಟೀಲ, ಅರವಿಂದ ಹಂಗರಗಿ, ಮುತ್ತು ಮನಗೂಳಿ, ಚಂದ್ರಶೇಖರ ನಾಗರಬೆಟ್ಟ, ಸಂಗನಗೌಡ ಪಾಟೀಲ, ಶರಣಬಸು ಕಲಶೇಟ್ಟಿ, ಗುರು ಆಕಳವಾಡಿ, ಶ್ರೀಶೈಲ ಮಳಜಿ, ಮಲ್ಲನಗೌಡ ಪಾಟೀಲ ಇಬ್ರಾಹಿಂಪುರ, ಅಂಬಿಕಾ ಪಾಟೀಲ, ಪ್ರತಿಬಾ ಚಳ್ಳಗಿ, ಶಿವರಾಜ ಪೋ.ಪಾಟೀಲ ಸೇರಿದಂತೆ ಅನೇಕರಿದ್ದರು.

- Advertisement -
- Advertisement -

Latest News

ಬೆಳಗಾವಿ ಜಿಲ್ಲಾ ಕೃಷಿಕ ಸಮಾಜದ ನೂತನ ಅಧ್ಯಕ್ಷರಾಗಿ ಶಂಕರಗೌಡ ಪಾಟೀಲ್ ಆಯ್ಕೆ

ಜಿಲ್ಲಾ ಕೃಷಿಕ ಚುನಾವಣೆಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರವೇಶ ; ಎಲ್ಲ ಸ್ಥಾನಗಳೂ ಅವಿರೋಧ ಆಯ್ಕೆ ರಾಜ್ಯ ಪ್ರತಿನಿಧಿಯಾಗಿ ಬಾಳಪ್ಪ ಬೆಳಕೂಡ ಆಯ್ಕೆ ಬೆಳಗಾವಿ- ಸಹಕಾರ ವಲಯದ ಜಿಲ್ಲಾ...
- Advertisement -

More Articles Like This

- Advertisement -
close
error: Content is protected !!
Join WhatsApp Group