ಸಿಂದಗಿ; ನಿರಂತರ ಪರಿಶ್ರಮದಿಂದ ಮಾತ್ರ ವಿದ್ಯಾರ್ಥಿಯ ಜೀವನ ಯಶಸ್ವಿಯಾಗಲು ಸಾಧ್ಯವಾಗುತ್ತದೆ ಎಂದು ಕುಂಟೋಜಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯರು ಹೇಳಿದರು.
ತಾಲೂಕಿನ ಮೋರಟಗಿ ಗ್ರಾಮದ ಕಲ್ಪವೃಕ್ಷ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಸ್ವಾಗತ, ಪಠ್ಯ ಹಾಗೂ ಪಠ್ಯಪೂರಕ ಚಟುವಟಿಕೆ ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿ, ಮಕ್ಕಳು ಯೋಗ, ಧ್ಯಾನ ಅಳವಡಿಸಿಕೊಂಡರೆ ಮನಸ್ಸು ಹತೋಟಿಯಲ್ಲಿರುತ್ತದೆ ಸಮಯಕ್ಕೆ ವಿದ್ಯಾರ್ಥಿಗಳು ಬಹಳಷ್ಟು ಪ್ರಾಮುಖ್ಯತೆ ನೀಡಬೇಕು ಒಮ್ಮೆ ಕಳೆದ ವಿದ್ಯಾರ್ಥಿ ಜೀವನ ಕೋಟಿ ಕೊಟ್ಟರು ಸಿಗಲಾರದು ವಿದ್ಯಾರ್ಥಿ ಜೀವನ ಬಂಗಾರವಿದ್ದಂತೆ ಬಂಗಾರದಂಥ ಜೀವನ ಬೀದಿಗೆ ಬರಬಾರದು ನಿಮ್ಮ ಪಾಲಕರು ನಿಮ್ಮನ್ನೇ ನಂಬಿ ಕೂಲಿ ಮಾಡಿ ಉನ್ನತ ಶಿಕ್ಷಣ ನೀಡುತ್ತಿದ್ದಾರೆ ಅವರುಗಳ ಕನಸು ನನಸು ಮಾಡುವ ಜವಾಬ್ದಾರಿ ತಮ್ಮದಾಗಿದೆ ಗುರುಗಳು ಹಾಕಿದ ಮಾರ್ಗದಲ್ಲಿ ನಡೆದು ತಾಯಿ ತಂದಿ ಕಂಡಿರುವ ಕನಸು ನನಸಾಗಿಸಲು ಮುಂದಾಗಬೇಕು ಎಂದರು.
ಸಂಸ್ಥೆಯ ಅಧ್ಯಕ್ಷ ಶಿವಶರಣಗೌಡ ಬಿರಾದಾರ ಮಾತನಾಡಿ ವಿದ್ಯಾರ್ಥಿಗಳು ಇತರರೊಂದಿಗೆ ಹೋಲಿಕೆ ಮಾಡಿಕೊಳ್ಳದೆ ಸ್ವಂತ ಸಾಮರ್ಥ್ಯದಿಂದ ಶೈಕ್ಷಣಿಕವಾಗಿ ಮುಂದುವರೆಯಬೇಕು ನಮ್ಮ ಸಂಸ್ಥೆಯಲ್ಲಿ ಪ್ರತಿ ವರ್ಷ ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಕಡು ಬಡವ ವಿದ್ಯಾರ್ಥಿ ಕೂಡಾ ಶೇ, ೯೦ ಕಿಂತ ಅಧಿಕ ಅಂಕಗಳನ್ನು ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ ಇದಕ್ಕೆಲ್ಲ ನಮ್ಮ ಶಿಕ್ಷಕರ ಪರಿಶ್ರಮವೆ ಕಾರಣ ವಿದ್ಯಾರ್ಥಿಗಳು ಶಿಕ್ಷಕರ ಹಾದಿಯಲ್ಲಿ ಸಾಗಿದರೆ ಮಾತ್ರ ಜ್ಞಾನ ಜ್ಯೋತಿ ಬೆಳಗಲು ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಡಾ, ಎ.ಬಿ.ಸಿಂದಗಿ, ಎಸ್.ಬಿ.ಬಿರಾದಾರ, ಪಿಕೆಪಿಎಸ್ ಅಧ್ಯಕ್ಷ ವೀರಣ್ಣಗೌಡ ಪಾಟೀಲ, ಭಗವಂತ್ರಾಯ ಬಿರಾದಾರ, ಸಾಂಸ್ಕೃತಿಕ ಕಾರ್ಯಾಧ್ಯಕ್ಷ ಎಸ್.ಎಸ್.ಗೌಡಪ್ಪಗೋಳ ಮತ್ತು ವಿದ್ಯಾರ್ಥಿ ಪ್ರತಿನಿಧಿಗಳಾದ ವಂದನಾ ಹಿರೇಮಠ ಮತ್ತು ಸಂತೋಷ ಕರ್ಜಗಿ ಉಪಸ್ಥಿತರಿದ್ದರು.