spot_img
spot_img

ಕಿತ್ತೂರು ಚೆನ್ನಮ್ಮಾಜಿಯ ಜೀವನ ಕವಿಗಳಿಗೆ ಸ್ಪೂರ್ತಿಯಾಗಲಿ: ರಮೇಶ ಪರವಿನಾಯ್ಕರ

Must Read

- Advertisement -

200 ನೆಯ ವಿಜಯೋತ್ಸವದ ನಿಮಿತ್ತ ಬೈಲಹೊಂಗಲದಲ್ಲಿ ರಾಜ್ಯಮಟ್ಟದ ಕವಿಗೋಷ್ಠಿ

ಬೈಲಹೊಂಗಲ: ಬ್ರಿಟಿಷರ ವಿರುದ್ಧ ಕ್ರಾಂತಿಯ ಕಹಳೆ ಮೊಳಗಿಸಿ ದೇಶದ ಸ್ವಾತಂತ್ರ್ಯಕ್ಕಾಗಿ ಕೆಚ್ಚೆದೆಯಿಂದ ಹೋರಾಡಿದ ದೇಶದ ಮೊದಲ ಮಹಿಳೆ ವೀರರಾಣಿ ಕಿತ್ತೂರು ಚೆನ್ನಮ್ಮಾಜಿಯ ಜೀವನ ಎಲ್ಲ ಕವಿಗಳಿಗೆ ಸ್ಪೂರ್ತಿಯಾಗಲಿ ಎಂದು ಖ್ಯಾತ ಚಲನಚಿತ್ರ ನಟ, ನಿರ್ಮಾಪಕ, ಕರ್ನಾಟಕ ಸರಕಾರದ ಧಾರವಾಡ ರಂಗಾಯಣದ ನಿಕಟಪೂರ್ವ ನಿರ್ದೇಶಕರಾದ ರಮೇಶ ಎಸ್. ಪರವಿನಾಯ್ಕರ ಹೇಳಿದರು.

ಗ್ಲೋಬಲ್ ವುಮೇನ್ರೈಸ್ ಫೌಂಡೇಶನ್, ಬೆಂಗಳೂರು ಇವರ ವತಿಯಿದ ಪಟ್ಟಣದ ಚೆನ್ನಮ್ಮ ಸಮಾಧಿ ರಸ್ತೆಯಲ್ಲಿರುವ ಗಣಾಚಾರಿ ಮಹಾವಿದ್ಯಾಲಯದಲ್ಲಿ ಕಿತ್ತೂರು ಚೆನ್ನಮ್ಮಾಜಿಯವರ 200ನೆಯ ವಿಜಯೋತ್ಸವದ ನಿಮಿತ್ತವಾಗಿ ರವಿವಾರ ನಡೆದ ರಾಜ್ಯಮಟ್ಟದ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

- Advertisement -

ಕಥೆ, ಕವನ, ನಾಟಕ, ಕಾದಂಬರಿ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಚೆನ್ನಮ್ಮನ ಧೈರ್ಯ, ಶೌರ್ಯ, ಸಾಹಸ, ದಿಟ್ಟತನ, ದೇಶಪ್ರೇಮವನ್ನು ದಾಖಲಿಸಿ ವಿಶ್ವದೆಲ್ಲೆಡೆ ಕಿತ್ತೂರು ನಾಡಿನ ಕೀರ್ತಿ ಮೊಳಗುವಂತಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿದ್ಯಾವಿಷಯತ್ ಸದಸ್ಯರಾದ ಡಾ. ಚಂದ್ರಶೇಖರ ಬಿ. ಗಣಾಚಾರಿ ಮಾತನಾಡಿ ಕನ್ನಡಕ್ಕೆ ಅತ್ಯಂತ ಶ್ರೀಮಂತ ಕಾವ್ಯ ಪರಂಪರೆ ಇದ್ದು ಅದರ ಬಗ್ಗೆ ನಮಗೆಲ್ಲ ಅಭಿಮಾನ ಇರಬೇಕು ಎಂದರು.ಇತಿಹಾಸದ ಬಗ್ಗೆ ಸಂಶೋಧನೆ ಕೈಗೊಂಡು ನೈಜವಾದ ಸಂಗತಿಯನ್ನು ಜನರಿಗೆ ತಲುಪಿಸುವ ಕೆಲಸ ಆಗಬೇಕು ಎಂದು ಅವರು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯಮಟ್ಟದ ಕವಿಗೋಷ್ಠಿಯ ಮುಖ್ಯ ಸಂಯೋಜಕರು, ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ ರಾಜ್ಯದ ವಿವಿಧ ಜಿಲ್ಲೆಗಳಿಂದ ಚೆನ್ನಮ್ಮಾಜಿಯವರ ಐಕ್ಯ ಕ್ಷೇತ್ರವಾದ ಬೈಲಹೊಂಗಲ ನಾಡಿಗೆ ಆಗಮಿಸಿ 200ನೆಯ ವಿಜಯೋತ್ಸವದ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದು ನಿಜಕ್ಕೂ ಖುಷಿ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

- Advertisement -

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬೆಂಗಳೂರಿನ ಗ್ಲೋಬಲ್ ವುಮೇನ್ರೈಸ್ ಫೌಂಡೇಶನ್ ಕಾರ್ಯದರ್ಶಿಗಳಾದ ಮಿಥುನ ಹುಗ್ಗಿ  ರಾಷ್ಟ್ರಾಭಿಮಾನಕ್ಕೆ ಹೆಸರುವಾಸಿಯಾದ ಗಂಡು ಮೆಟ್ಟಿನ ನಾಡಿನಲ್ಲಿ, ಹೋರಾಟಗಾರರ ಪುಣ್ಯಭೂಮಿಯಲ್ಲಿ ದೂರದೂರುಗಳಿಂದ ಕವಿಗಳೆಲ್ಲ ಭಾಗಿಯಾಗಿದ್ದು ಈ ನೆಲದ ಹಿರಿಮೆಯನ್ನು ಎತ್ತಿ ತೋರಿಸುತ್ತದೆ ಎಂದು ಅಭಿಪ್ರಾಯಪಟ್ಟರು. ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎನ್.ಆರ್.ಠಕ್ಕಾಯಿ,  ಗೌರವ ಕಾರ್ಯದರ್ಶಿಗಳಾದ ಮಂಜುಳಾ ಶೆಟ್ಟರ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ರಾಜ್ಯದ ವಿವಿಧ ಭಾಗಗಳಿಂದ 90 ಕ್ಕೂ ಹೆಚ್ಚು ಕವಿಗಳು ಭಾಗವಹಿಸಿದ್ದರು. ಅಶೋಕ ಗುರುರಾಜ ಕಮತಗಿ, ಬಸನಗೌಡ ಭರಮಗೌಡ ಹುಲಿಗೊಪ್ಪ, ಸಂಜಯ ಜಿ. ಕುರಣೆ, ಸುಧೀರ ಎಂ. ಕಾರಭಾರಿ, ಶ್ರೀಶೈಲ ಕಂಬಾರ, ಸಾವಿತ್ರಿ ಹೊತ್ತಿಗಿಮಠ, ಶೃತಿ ಮಹಾದೇವ ಹೆಗ್ಗೆ, ವಾಯ್.ಕೆ. ಕೊಣ್ಣೂರ, ಶಿವಲೀಲಾ ಕೋರವಾರ, ಶಿವು ಎಂ. ಖನ್ನೂರ, ಬಸಪ್ಪ ಬಿ. ಇಟ್ಟಣ್ಣವರ, ಸಿದ್ದಪ್ಪ ಗೊಡಚಿ, ವಿನಾಯಕ ಎನ್. ಬಡಿಗೇರ, ಕಿರಣ ಯಲಿಗಾರ, ಜವಾಹರ ಧ. ಕನ್ನೂರ, ಬಸವರಾಜ ಮಲ್ಲಪ್ಪ ಕಡೇತೋಟದ, ಕಲ್ಲಪ್ಪ ಹರಿಜನ, ಎನ್. ಗುಣಶೀಲ, ಗಿರಿಜಾದೇವಿ ಮ. ಗಂಜಿಹಾಳ, ಬ.ಹೊ.ಶಿಗೀಹಳ್ಳಿ, ಆನಂದ ಯಲ್ಲಪ್ಪ ಕೊಂಡಗುರಿ, ಡಾ. ಪ್ರೇಮಾ ಪಿ., ಸುನಿತಾ ಜಿ. ಸಂಗಮ, ಸಂಗಮೇಶ ಬ. ನಾಯಿಕ, ಸಂಗೀತಾ ರಾಜಶೇಖರ ಸಕ್ರೆಣ್ಣವರ, ಜ್ಯೋತಿ ಸಂಜು ಮುರಾಳೆ, ಬಸವಂತಪ್ಪ ಬಸಪ್ಪ ಗಡದವರ, ಸಂತೋಷ ಜಾಧವ, ಸಿದ್ದಲಿಂಗಯ್ಯ ಅಪ್ಪಯ್ಯ ಹಿರೇಮಠ, ಯಶವಂತ ಭರಮಣ್ಣ ಉಚಗಾಂವಕರ, ಇಬ್ರಾಹಿಂ ಚಾಂದಖಾನವರ, ಆರ್.ಎಲ್. ಸರದೇಸಾಯಿ, ಸುರೇಶ ಕಲ್ಲಪ್ಪ ಗೋಶಾನಟ್ಟಿ, ನಳಿನಿ ದೇಶಪಾಂಡೆ, ರಾಜೇಶ್ವರಿ ಎಸ್. ಹೆಗಡೆ, ಎ.ಎಸ್. ಗಡದವರ, ಜ್ಯೋತಿಲಕ್ಷ್ಮಿ ಬಾಲಕೃಷ್ಣ ಬಡಿಗೇರ, ಬಾಳಗೌಡ ಶಂಕರ ದೊಡಬಂಗಿ, ಭಾರತಿ ಕಿತ್ತೂರಮಠ, ಪುರಂಧರ ಕೇಸ್ತಿ, ಬಸಯ್ಯ ಚಿಕ್ಕಮಠ, ಕಸ್ತೂರಿ ಬೀರಪ್ಪನವರ, ಮಂಜುನಾಥ ಕೋಲಕಾರ, ಶೈಲಜಾ ಶಿಂಪಿ, ಪುನೀತ ಪತ್ತಾರ, ಅಶ್ವಿನಿ ಮೂಲಿಮನಿ, ಶೃತಿ ಕುದರೆಮೋತಿ, ಡಾ. ವಸುಧಾ ಕಾಮತ, ಬಸವರಾಜ ವ್ಹಿ. ಪತ್ತಾರ, ಪೂರ್ಣಿಮಾ ಯಲಿಗಾರ, ಪುಷ್ಪಾ ಖನ್ನಿನಾಯ್ಕರ, ಬಾಳೇಶ ಫಕ್ಕೀರಪ್ಪನವರ, ಶಿಲ್ಪಾ ಉಪಾಧ್ಯೆ, ಮಹಾಂತೇಶ ಬಸಪ್ಪ ಬಾಳಿಗಟ್ಟಿ, ಜಯಶ್ರೀ ಹಿರೇಮಠ, ಮಲ್ಲೇಶ ಮುದಕವಿ, ಮಂಜುಳಾ ಎಚ್.ಎಫ್, ವೀರಣಗೌಡ ಸರನಾಡಗೌಡ್ರ, ಶ್ರೀನಿವಾಸ ಭಂಡಾರಿ, ಸವಿತಾ ಕೋಟಗಿ, ಚಂದ್ರಶೇಖರ ಚನ್ನಂಗಿ, ಮಧು ಚನ್ನಂಗಿ, ಪ್ರದೀಪ ಪಟ್ಟಣಶೆಟ್ಟಿ, ದಾನಮ್ಮ ಅಂಗಡಿ, ಭೀಮಸೇನ ಚಿಂಚಲಿ, ಮಣಿಕಂಠ ಹತ್ತಿ, ಜಯಶ್ರೀ ತೆಗ್ಗಿನಮಠ, ಉದಯಚಂದ್ರ ದಿಂಡವಾರ, ಕಾಡೇಶ ಬಸ್ತವಾಡಿ, ಬಳೇಪೇಟೆ ಪ್ರಕಾಶ, ಗೌರಿ ಮೇಳೇದ, ವೀರಣ್ಣ ಹೂಲಿ, ಚನ್ನಮ್ಮ ಪಾಟೀಲ, ಮೈಲಾರಪ್ಪ ಗೋವಣ್ಣವರ, ಪುನೀತ, ಗುಣವತಿ ಕೆ.ಪಿ, ಚಂದ್ರಶೇಖರ ಕೊಪ್ಪದ, ಪುಷ್ಪಲತಾ ಭಾವಿಮನಿ ಕವಿ-ಕವಯತ್ರಿಯರು ಕವನ ವಾಚಿಸಿದರು. ಕಾರ್ಯಕ್ರಮದಲ್ಲಿ ಕವಿಗಳು, ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ರಾಜು ಹಕ್ಕಿ ನಿರೂಪಿಸಿ ನಿರ್ವಹಿಸಿದರು.

- Advertisement -
- Advertisement -

Latest News

ದ ಸಂ ಸ(ಅಂಬೇಡ್ಕರವಾದ) ಸಿಂದಗಿ ಹಾಗೂ ಆಲಮೇಲ ತಾಲೂಕುಗಳ ಪದಾಧಿಕಾರಿಗಳ ಆಯ್ಕೆ

ಸಿಂದಗಿ : ಪಟ್ಟಣದ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರವಾದ) ಸಿಂದಗಿ ಹಾಗೂ ಆಲಮೇಲ ತಾಲೂಕುಗಳ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಕರ್ನಾಟಕ...
- Advertisement -

More Articles Like This

- Advertisement -
close
error: Content is protected !!
Join WhatsApp Group