ಮಂಗಳೂರು- ಸ್ಥಳೀಯ ಕುಲಶೇಖರದ ಸೈಂಟ್ ಜಾಸೆಫ್ ಪ್ರೌಢ ಶಾಲೆಯಲ್ಲಿ ಜುಲೈ 29 ರಂದು ಸ್ವಾಸ್ಥ್ಯ ಸಂರಕ್ಷಣೆ ಮಾಲಿಕೆಯಡಿಯಲ್ಲಿ ಮಾದಕ ವ್ಯಸನ ಮತ್ತು ನಿವಾರಣೋಪಾಯಗಳ ಬಗ್ಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಹಾಗೂ ಜನ ಜಾಗೃತಿ ಸಂಘಗಳ ಸಹ ಯೋಗದಲ್ಲಿ ಸಂಪನ್ಮೂಲ ವ್ಯಕ್ತಿ ಮಂಗಳಾ ಹಾಗೂ ಕಣಚೂರು ಆಯುರ್ವೇದ ಆಸ್ಪತ್ರೆಗಳ ಮೂಲವ್ಯಾಧಿ ಹಾಗೂ ಚರ್ಮರೋಗಗಳ ವಿಶೇಷ ಚಿಕಿತ್ಸಕ ಡಾ. ಸುರೇಶ ನೆಗಳಗುಳಿಯವರಿಂದ ಉಪನ್ಯಾಸ ಕಾರ್ಯಕ್ರಮ ನಡೆಸಲಾಯಿತು.
ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುನೀತಾ ಡಿ ಸೋಜಾ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜನಜಾಗೃತಿ ಸಂಘದ ಅಧ್ಯಕ್ಷ ಮಾಧವ ಅಳಪೆಯವರು ಮುಖ್ಯ ಅತಿಥಿಯಾಗಿದ್ದರು.
ಅವರು ಪ್ರಸ್ತಾವಿಕವಾಗಿ ಮುಂದಿನ ಜನಾಂಗವಾದ ಮಕ್ಕಳು ದುಶ್ಚಟಕ್ಕೆ ಬಲಿ ಬೀಳದಂತೆ ಇರ ಬೇಕು ಎಂದು ಸೋದಾಹರಣವಾಗಿ ಕೆಲವು ವಿದ್ಯಮಾನಗಳನ್ನು ತಿಳಿಸಿದರು.
ಡಾ ಸುರೇಶ ನೆಗಳಗುಳಿಯವರು ಆರೋಗ್ಯ, ದಿನಚರಿ ಹಾಗೂ ಸ್ವಾಸ್ಥ್ಯದ ಪರಿಕಲ್ಪನೆ ನೀಡುತ್ತಾ ಚಟಕ್ಕೆ ಬೀಳದ ಹಠ ಬೇಕು, ಚಟಕ್ಕೆ ಬಿದ್ದರೆ ಚಟ್ಟವೇ ಗತಿ ,ಮತಿಯ ಸದ್ಬಳಕೆಯಿಂದ ಗತಿ ಸುಗಮ ,ವ್ಯಸನವಿದ್ದರೆ ಹಸನು ಆಗದು. ಎನ್ನುತ್ತಾ ಮೆದುಳಿನ ಕಾರ್ಯಕ್ಷಮತೆ ಬಗ್ಗೆ ಸವಿವರವಾಗಿ ನಾಲ್ಕುನೂರು ಮಕ್ಕಳಿಗೆ ಹಿತವಚನ ನೀಡಿದರು.
ಅನಿಲ್ ಮಾಚಿರವರು ಸ್ವಾಗತಿಸಿದ ಸಭೆಯಲ್ಲಿ ವಲಯ ಒಕ್ಕೂಟ ಅಧ್ಯಕ್ಷೆ ಸರಳ, ಕಾರ್ಯಕರ್ತೆಯರಾದ ಅಂಜಲಿ, ಲತಾ, ನೇತ್ರಾವತಿ, ತೇಜಸ್ವಿನಿಯವರು ವೇದಿಕೆಯಲ್ಲಿದ್ದರು.
ಮೇಲ್ವಿಚಾರಕಿ ಶೋಭಾ ನಿರೂಪಿಸಿದರು.ಅಧ್ಯಾಪಕಿ ಶಾಲಿನಿಯವರ ಧನ್ಯವಾದ ಸಮರ್ಪಣೆಯೊಂದಿಗೆ ಸಂಪನ್ನವಾಯಿತು
ವರದಿ
ಡಾ.ಸುರೇಶ ನೆಗಳಗುಳಿ
ವೈದ್ಯಕೀಯ ಸಲಹೆಗಾರ
ಕಣಚೂರು ಆಯುರ್ವೇದ ಆಸ್ಪತ್ರೆ
ಮಂಗಳೂರು.
ಬಜಾಲ್ ಪಕ್ಕಲಡ್ಕ ನಿವಾಸಿ
೫೭೫೦೦೯
೯೪೪೮೨೧೬೬೭೪