KRS ಪಕ್ಷದ ಸದಸ್ಯನಿಗೆ ಜೀವ ಬೆದರಿಕೆ ಆರೋಪ ; ಕೇಸ್ ದಾಖಲು

Must Read

ಬೀದರ – ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ವಿರುದ್ಧ ದೂರು ನೀಡಿದ KRS ಪಕ್ಷದ ಸದಸ್ಯನಿಗೆ ಜೀವ ಬೆದರಿಕೆ ಆರೋಪ ಬಂದಿದ್ದು ಪ್ರಕರಣ ದಾಖಲಾಗಿದೆ.

ಧನ್ನೂರ (ಕೆ) ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ.ಅಶ್ವಿನಿ ವಿರುದ್ಧ ದೂರು ನೀಡಿದ್ದಕ್ಕೆ ಅವರ ತಾಯಿ ಯಿಂದ ಬೆದರಿಕೆ ಬಂದಿದೆ

ತಾವು ಆಸ್ಪತ್ರೆಗೆ ಹೋದಾಗೆಲ್ಲ ವೈದ್ಯಾಧಿಕಾರಿ ಆಸ್ಪತ್ರೆಯಲ್ಲಿ ಇಲ್ಲದ ಕಾರಣ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ದೂರು ನೀಡಿದ್ದಕ್ಕೆ ಸಂಗಮೇಶ ಬಿರಾದಾರ ಗೆ ವೈದ್ಯಾಧಿಕಾರಿ ತಾಯಿ ಕಾಲ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆಂದು ದೂರು ನೀಡಲಾಗಿದೆ

ಅ.16 ರಂದು ಚಿಕಿತ್ಸೆಗೆಂದು ಆಸ್ಪತ್ರೆಗೆ ತೆರಳಿದ ಕೆಆರ್‌ಎಸ್ ಪಕ್ಷದ ಸದಸ್ಯ ಸಂಗಮೇಶ ಬಿರಾದರ್ ಆಸ್ಪತ್ರೆಗೆ ಹೋದಾಗ ಬೆಳಗಿನ 11:30 ಗಂಟೆ ಯಾದರು ವೈದ್ಯಾಧಿಕಾರಿ ಡಾ.ಅಶ್ವಿನಿ ಕರ್ತವ್ಯಕ್ಕೆ ಬಾರದ ಕಾರಣ ಡಿಎಚ್ಒ ಅವರಿಗೆ ಫೊನ್ ಕರೆ ಮೂಲಕ ವೈದ್ಯಾಧಿಕಾರಿ ವಿರುದ್ಧ ದೂರು ನೀಡಿದ ಸಂಗಮೇಶ ಡಿಎಚ್ಓ ಗೆ ದೂರು ನೀಡಿದ್ದಕ್ಕೆ ದೂರುದಾರ ಸಂಗಮೇಶಗೆ ಕರೆ ಮಾಡಿ ಬೆದರಿಕೆ ಹಾಕಿದ ಡಾ.ಅಶ್ವಿನಿ ತಾಯಿ. ವಿಜಯ್ ಸಿಂಗ್ ಗೆ ಹೇಳಿ ಕುತ್ತಿಗೆ ದಬಾಯಿಸ್ತೀನಿ, ಇನ್ನೊಂದು ಸಾರಿ ಆಸ್ಪತ್ರೆ ಕಡೆ ಹೋಗಬೇಡ ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಿದ್ದಾರೆ

ಈ ಹಿನ್ನೆಲೆ ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಸೆ. 351(2) ಕ್ರಿಮಿನಲ್ ಬೆದರಿಕೆಯಡಿ ಡಾ. ಅಶ್ವಿನಿ ತಾಯಿ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ಪೊಲೀಸರು ವಿಚಾರಣೆ ನಡೆಸಿದ್ದಾರೆ.

ವರದಿ : ನಂದಕುಮಾರ ಕರಂಜೆ, ಬೀದರ

Latest News

ಜೀವದಾತ ರಕ್ತದಾನವೇ ಮಹಾದಾನ: ಫಾ.ಡಾ.ಅಗಸ್ಟೀನ್ ಜಾರ್ಜ್

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ“ಪ್ರಪಂಚದಲ್ಲಿ ಜೀವಜೀವಗಳನ್ನು ಉಳಿಸುವ ರಕ್ತದ ಪಾತ್ರವು ಮಹತ್ತರವಾದುದು. ಜೀವದಾತ ರಕ್ತದಾನವು ಮಹಾದಾನವಾಗಿದೆ” ಎಂದು ಎಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ...

More Articles Like This

error: Content is protected !!
Join WhatsApp Group