spot_img
spot_img

ಇಂದಿನಿಂದ ಬ್ಯಾಂಕ್ ಗಳಿಗೆ ಸಾಲು ಸಾಲು ರಜೆ. ವ್ಯವಹಾರಗಳಿಗೆ ಅಡಚಣೆ ಸಾಧ್ಯತೆ

Must Read

ಬ್ಯಾಂಕ್ ಗಳಿಗೆ ಮಾ.27 ರ ಬಳಿಕ ಸಾಲು ಸಾಲು ರಜೆಗಳು ಬರುತ್ತಿವೆ. ಹಾಗಾಗಿ ಸಾರ್ವಜನಿಕರು ತಮ್ಮ ವ್ಯವಹಾರಗಳಿಗೆ ಯೊಂದರೆ ಅನುಭವಿಸುವ ಸಾಧ್ಯತೆಯಿದೆ. ಮಾರ್ಚ್ 27 ನಾಲ್ಕನೇ ಶನಿವಾರ (ಬ್ಯಾಂಕ್ ರಜಾ ದಿನ), ಮಾರ್ಚ್ 28 ಭಾನುವಾರ (ರಜೆ) ನಂತರ ಮಾರ್ಚ್ 31 ಆರ್ಥಿಕ ವರ್ಷದ ಕೊನೆಯ ದಿನವಾಗಿರುವುದರಿಂದ ಗ್ರಾಹಕರ ಸೇವೆ ಬ್ಯಾಂಕಿನಲ್ಲಿ ಇರುವುದಿಲ್ಲ. ಇನ್ನು ಏಪ್ರಿಲ್ 1 ಬ್ಯಾಂಕಿನ ವಾರ್ಷಿಕ ಖಾತೆಯ ಮುಕ್ತಾಯ ವರ್ಷ, ಏಪ್ರಿಲ್ 2 ಗುಡ್ ಫ್ರೈಡೆ (ರಜೆ), ಏಪ್ರಿಲ್ 4 ಭಾನುವಾರ (ರಜೆ) ಆಗಿರುವುದರಿಂದ ಈ ರಜೆಗಳಿಂದ ಬ್ಯಾಂಕ್ ವ್ಯವಹಾರಗಳಿಗೆ ಅಡಚಣೆಯಾಗುವ ಸಾಧ್ಯತೆಯಿದೆ.

ಹಾಗಾಗಿ ಬ್ಯಾಂಕ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಗ್ರಾಹಕರು ಅನಿವಾರ್ಯವಾಗಿ ಡಿಜಿಟಲ್ ಮಾಧ್ಯಮಗಳಾದಂಥ ಫೋನ್ ಪೆ, ಗೂಗಲ್ ಪೇ, ಪೆಟಿಎಮ್ ಅಂಥ ಆ್ಯಪ್ ಗಳನ್ನು ಅವಲಂಬಿಸಬೇಕಾಗುತ್ತದೆ. ಯಾಕೆಂದರೆ ಮುಂದಿನ ವಾರ ಮಾರ್ಚ್ 29, 30 ಮತ್ತು ಏಪ್ರಿಲ್ 3 ರಂದು ಮಾತ್ರ ಬ್ಯಾಂಕ್ ಗಳಲ್ಲಿ ಗ್ರಾಹಕರ ಸೇವೆ ಇರುತ್ತದೆ. ಆದರೆ ಮಾರ್ಚ್ 30 ಮತ್ತು 31 ಆರ್ಥಿಕ ವರ್ಷದ ಕೊನೆಯ ದಿನವಾಗಿರುವುದರಿಂದ ಆ ಎರಡು ದಿನಗಳಲ್ಲಿ ಬ್ಯಾಂಕ್ ತನ್ನ ಆಂತರಿಕ ಕೆಲಸಗಳನ್ನು ನಿಭಾಯಿಸುತ್ತದೆ. ಆ ಎರಡು ದಿನಗಳಲ್ಲಿ ಗ್ರಾಹಕರ ಸೇವೆಗಳು ಬ್ಯಾಂಕಿನಲ್ಲಿ ಅಡ್ಡಿಯಾಗಬಹುದು.

ಆದ್ದರಿಂದ ಗ್ರಾಹಕರು ಅತಿ ಅವಶ್ಯವಿದ್ದಾಗ ಮಾತ್ರ ಡಿಜಿಟಲ್ ಮಾಧ್ಯಮ ಬಳಸಬೇಕು. ಅನಧಿಕೃತ ಕಂಪನಿಗಳ ಮಾತಿಗೆ ಮರುಳಾಗಿ ಸಿವಿವಿ ಸಂಖ್ಯೆ, ಓಟಿಪಿ ಸಂಖ್ಯೆಗಳನ್ನು ಯಾರಿಗೂ ಹೇಳದೆ ಸುರಕ್ಷಿತ ಬ್ಯಾಂಕಿಂಗ್ ಮಾಡಬೇಕು ಎಂಬುದು ಟೈಮ್ಸ್ ಬಳಗದ ಕಾಳಜಿಯಾಗಿದೆ.

- Advertisement -
- Advertisement -

Latest News

ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದಗೆ ೭೬.೦೭ ಲಕ್ಷ ರೂ ಲಾಭ

ಮೂಡಲಗಿ: ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ೨೦೨೩ರ ಮಾರ್ಚ ಅಂತ್ಯಕ್ಕೆ ರೂ.೭೬.೦೭ ಲಕ್ಷ ಲಾಭವನ್ನು ಗಳಿಸಿ ಪ್ರಗತಿಯಲ್ಲಿ  ಸಾಗುತ್ತಿದೆ ಎಂದು ಸಹಕಾರಿಯ ಅಧ್ಯಕ್ಷೆ...
- Advertisement -

More Articles Like This

- Advertisement -
close
error: Content is protected !!