ದತ್ತಿ ಉಪನ್ಯಾಸದಲ್ಲಿ ಆಯ್ ಆರ್ ಮಠಪತಿ ಅಭಿಮತ.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಬೆಳಗಾವಿ ಕದಳಿ ಮಹಿಳಾ ವೇದಿಕೆ ಆಯೋಜಿಸಿರುವ ದತ್ತಿ ಉಪನ್ಯಾಸ ಹಾಗೂ ಪತ್ರಿ ಬಸವೇಶ್ವರ ಅನುಭವ ಮಂಟಪದ ಶ್ರಾವಣ ಮಾಸದ ಶ್ರೀ ಸಿದ್ದರಾಮೇಶ್ವರ ಪ್ರವಚನ ಮಂಗಲ ಕಾರ್ಯಕ್ರಮದ ಸಾನಿಧ್ಯ ಹಾಗೂ ಲಿಂಗಾಯತ ಧರ್ಮ ಹಾಗೂ ಸಮಾಜ ಅಭಿವೃದ್ಧಿ ದತ್ತಿ ಉಪನ್ಯಾಸ ವಿಷಯ ಕುರಿತು ಆಯ್ ಆರ್ ಮಠಪತಿ ಮಾತನಾಡಿದರು.
ಕಾಯಕದಲ್ಲಿ ನೀತಿ ದಾಸೋಹದಲ್ಲಿ ಪ್ರೀತಿ ಇಂದಿನ ಅಗತ್ಯವಾಗಿದೆ ಸಮಾನತೆ ಸಂದೇಶ ಸಾರಿದ ಬಸವಾದಿ ಶಿವಶರಣರ ಈ ಕೊಡುಗೆ ಸರ್ವಕಾಲಿಕ ಸತ್ಯ ಎಂದರು.
ದತ್ತಿಗಳಾದ ಹಾನಗಲ್ಲ ಕುಮಾರೇಶ್ವರರು ನಾಗನೂರು ಪ್ರಭು ಮಹಾಸ್ವಾಮಿಗಳು ಈ ತತ್ವದಡಿ ಸಮಾಜ ಮುನ್ನಡೆಸಿದವರೆಂದರು.
ಬೆಳಗಾವಿಯ ರಮೇಶ ತುಬಚಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಪತ್ರಿ ಬಸವೇಶ್ವರ ಅನುಭವ ಮಂಟಪದ ಕಾರ್ಯ ಶ್ಲಾಘನೀಯ ಎಂದರು. ಗಂಗಯ್ಯ ಮುನವಳ್ಳಿ ಮಠ ಪತ್ರಯ್ಯ ಕುಲಕರ್ಣಿ ಹನುಮಂತಪ್ಪ ಮಸ್ತನ್ನವರ ಚಂದ್ರ ಗೌಡ ಪಾಟೀಲ ಪ್ರವಚನಕಾರ್ತಿ ರಾಜೇಶ್ವರಿ ದ್ಯಾಮನಗೌಡರನ್ನು ಸನ್ಮಾನಿಸಲಾಯಿತು.
ಪ್ರೇಮಕ್ಕ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಕಾಡಪ್ಪ ರಾಮಗುಂಡಿ ಸ್ಮರಣ ಸಂಚಿಕೆ ಪರಿಚಯಿಸಿದರು. ದುಂಡಯ್ಯ ಕುಲಕರ್ಣಿ ಪ್ರಸ್ತಾವಿಕ ನುಡಿದರು. ಸುವರ್ಣ ಬಿಜುಗುಪ್ಪಿ ದಾಸೋಹಗೈದರು ಗೀತಾ ಅರಳಿಕಟ್ಟಿ ಸ್ವಾಗತಿಸಿದರು ಅನುರಾಧ ಕರಡಿಗುದ್ದಿ ವಂದಿಸಿದರು. ಗೌರಾದೇವಿ ತಾಳಿಕೋಟಿಮಠ ನಿರೂಪಿಸಿದರು ಅಜಗಣ್ಣ ಹಾಗೂ ಮುಕ್ತಾಯಕ್ಕ ಬಳಗ ಹಾಗೂ ನಗರದ ನೂರಾರು ಶರಣರು ಉಪಸ್ಥಿತರಿದ್ದರು.