spot_img
spot_img

ಕಲಾತ್ಮಕತೆಯೊಂದಿಗೆ ಭಾಷಾಭಿಮಾನ ಸಂಗಮ

Must Read

spot_img
- Advertisement -

ಕನ್ನಡವನ್ನು ಪ್ರೀತಿಸಲು ಸಾವಿರ ಕಾರಣಗಳಿವೆ! ಅದರಲ್ಲೊಂದು ಪ್ರಮುಖವಾದದ್ದು ಸುಂದರ ಬರವಣಿಗೆ!

ಕನ್ನಡದಷ್ಟು ಸುಂದರವಾಗಿ ಬರೆಯಲು ಬೇರೆ ಬಾಷೆಯೇ ಇಲ್ಲವೇನೋ ಅನ್ನುವಷ್ಟು ಅಭಿಮಾನ! ಈ ಕರ್ನಾಟಕ  ನಾಮಾಂಕಿತವಾಗಿ ಸುವರ್ಣ ಸಂಭ್ರಮಾಚರಣೆಯ ಶುಭ ಸಂದರ್ಭದಲ್ಲಿ “ಅಕ್ಷರ ಸಿಂಗಾರೋತ್ಸವ” ಬೆಂಗಳೂರು ಜಯನಗರ ನಾಲ್ಕನೇ ಬ್ಲಾಕ್ ನ ಯುವ ಪಥ ಆರ್ಟ್ ಗ್ಯಾಲರಿಯಲ್ಲಿ ಕಂಗೊಳಿಸುತ್ತಿವೆ.

- Advertisement -

ಹೌದು .. ಕನ್ನಡ ಕ್ಯಾಲಿಗ್ರಫಿ ಪ್ರದರ್ಶನ. ನೀವೊಮ್ಮೆ ಒಳ ಹೊಕ್ಕರೆ ಅಕ್ಷರ ಪ್ರಪಂಚದಲ್ಲಿ ಕಳೆದು ಹೋಗುವಿರಿ! ಸುಂದರ ಕ್ಯಾಲಿಗ್ರಫಿ ನಿಮ್ಮನ್ನು ಕಾಡದೆ ಬಿಡದು! ಒಂದೊಂದೂ ವಿಭಿನ್ನ, ವಿಚಿತ್ರ-ಚಿತ್ರ, ಸುಂದರ! ಇಷ್ಟೊಂದು ಸುಂದರ ವಾಗಿ ಬರೆಯುವ ಸಾಧ್ಯತೆಯೇ ನಿಮ್ಮನ್ನು ಮೂಕರನ್ನಾಗಿಸುತ್ತೆ.

ದಾ ಕ ಹವಿ ಸ ಸಹಯೋಗ ಯೋಗದಲ್ಲಿ ನಡೆಯುತ್ತಿರುವ ಅಕ್ಷರ ಸಿಂಗೋತ್ಸವವನ್ನು ಖ್ಯಾತ ಕಲಾವಿದ ಕೇಂದ್ರ ಲಲಿತ ಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಚಿಸು ಕೃಷ್ಣ ಸೆಟ್ಟಿ ಉದ್ಘಾಟಿಸಿದರು.

- Advertisement -

ಕಲಾವಿದರುಗಳಾದ ಗಣಪತಿ ಹೆಗಡೆ ,ಕೆ.ಸಿ ಜಗನ್ನಾಥ, ಬಾಬು ಜತ್ಕರ್ ,ಪತ್ರಕರ್ತ ರವೀಂದ್ರ ದೇಶಮುಖ ಹಾಗೂ ಯುವಕ ಸಂಘ ವ್ಯವಸ್ಥಾಪಕ ಸಮಿತಿಯ ಸದಸ್ಯ ಧರ್ಮೇಂದ್ರ ರಂಗೈನ್ ಶುಭ ಹಾರೈಸಿ ಕನ್ನಡ ಭಾಷೆ ಮತ್ತು ಲಿಪಿಯ ಬಗ್ಗೆ ಬೆಳಕು ಚೆಲ್ಲುವ ಈ ಪ್ರಯತ್ನದಲ್ಲಿ ಕಲಾವಿದರಾದ ಸುರೇಶ್  ವಾಗ್ಮೊರೆ, ಅನಿಮೇಶ ನಾಗನೂರ ,ಟಿ,ಬಿ ಕೋಡಿಹಳ್ಳಿ ,ಮೋಹನ ಕುಮಾರ್ ಈರಪ್ಪ ,ಹರಿ ಕುಮಾರ್ ರವರುಗಳು ಕನ್ನಡ ಕ್ಯಾಲಿಗ್ರಫಿ ಕಲಾಕೃತಿಗಳನ್ನು ರಚಿಸಿ ಕನ್ನಡ ವರ್ಣಮಾಲೆಗೆ ವಿಶೇಷ ಮೆರಗನ್ನುಂಟು ಮಾಡಿದ್ದಾರೆ ಎಂದು ತಿಳಿಸಿದರು.

       “ಪ್ರದರ್ಶನವು ನವೆಂಬರ್ 30ರ ವರೆಗೆ ಇರುತ್ತದೆ, ದಯವಿಟ್ಟು ಎಲ್ಲರೂ ಭೇಟಿ ನೀಡಿ ಆನಂದಿಸಿ .9900084816

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕವನ: ಕಲೆಯ ಲೀಲೆ

"ಕಲೆಯ ಲೀಲೆ" ಲೀಲಾವತಿ ಎಂದರೆ ಕಲೆಯ ಕಡಲು ನಟನೆಯಲ್ಲಿ ಕೈಗೆಟುಕದ ಮುಗಿಲು ಮರೆಯದ ಕಲಾವಿದೆ ಇವರು ಮರೆತರು ಇವರ ಇವರಿಂದ ಬೆಳೆದವರು ಸಾರುತ್ತಿದ್ದವು ಮೌಲ್ಯ ಇವರ ಚಿತ್ರಗಳು ಕಲಿಸುತ್ತಿದ್ದವು ಪಾಠ ಇವರ ಹಾಡುಗಳು ಜೀವನವೇ ಇರುತ್ತಿತ್ತು ಇವರ ಸಿನಿಮಾದಲ್ಲಿ ಬದುಕುತ್ತಿದ್ದರು ಸಿನಿಮಾದಂತೆ ಜನರು ಜೀವನದಲ್ಲಿ ಬಡವಾಯಿತು ಸಿನಿಮನೆ ಹಿರಿಯ ಕಲೆ ತಲೆಗಳಿಲ್ಲದೆ ಚಿತ್ರರಂಗ ಸಾಗಿದೆ ಕಲೆ...
- Advertisement -

More Articles Like This

- Advertisement -
close
error: Content is protected !!
Join WhatsApp Group