ಲಯನ್ಸ್ ಪ್ರಾಂತೀಯ ಕ್ರಿಕೆಟ್‌ ಟೂರ್ನಿ: ‘ಮೂಡಲಗಿ ಲಯನ್ಸ್ ಪರಿವಾರ ಚಾಂಪಿಯನ್‌’

Must Read

ಮೂಡಲಗಿ: ಇಲಕಲ್‌ ಲಯನ್ಸ್ ಕ್ಲಬ್‌ ಆತಿಥ್ಯದಲ್ಲಿ ಜರುಗಿದ ಲಯನ್ಸ್ ಪ್ರಾಂತೀಯ ಮಟ್ಟದ ಕ್ರಿಕೆಟ್‌ ಟೂರ‍್ನಿಯಲ್ಲಿ ಮೂಡಲಗಿ ಲಯನ್ಸ್ ಕ್ಲಬ್‌ ಪರಿವಾರವು ಗೆಲವು ಸಾಧಿಸಿ ಸತತ ಎರಡು ಬಾರಿ ಚಾಂಪಿಯನ್‌ಷಿಪ್‌ ಟ್ರೋಪಿ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ.

ಅಂತಿಮ ಹಣಾಹಣಿಯಲ್ಲಿ ಮೂಡಲಗಿ ಲಯನ್ಸ್ ತಂಡವು ಇಲಕಲ್‌ ಲಯನ್ಸ್ ಕ್ಲಬ್‌ ತಂಡದೊಂದಿಗೆ ೯ ವಿಕೆಟ್‌ಗಳಿಂದ ಗೆಲವು ಸಾಧಿಸಿದೆ. ಅದಕ್ಕೂ ಪೂರ‍್ವ ಮೊದಲ ಸುತ್ತಿನ ಪಂದ್ಯದಲ್ಲಿ ಬಾಗಲಕೋಟ ಲಯನ್ಸ್ ತಂಡದ ಮೇಲೆ ಗೆಲವು ಸಾಧಿಸಿತು. ಸೆಮಿಪೈನಲ್  ನಲ್ಲಿ ಮಹಾಲಿಂಗಪೂರ ಗ್ರೀನ್‌ ಬಸೀನ್‌ ತಂಡವನ್ನು ಹಣೆದು ಅಂತಿಮ ಹಂತಕ್ಕೆ ಪ್ರವೇಶ ಪಡೆದುಕೊಂಡಿತು. .

ಮೂಡಲಗಿ ತಂಡದ ಅಪ್ಪಣ್ಣ ಬಡಿಗೇರ ಉತ್ತಮ ಬ್ಯಾಟ್ಸ್‌ಮನ್‌, ಮಹೇಶ ಮುಳವಾಡ ಉತ್ತಮ ಬೌಲರ ಹಾಗೂ ಶಿವಾನಂದ ಗಾಡವಿ ಉತ್ತಮ ಆಲ್‌ರೌಂಡರ್ ಆಟಗಾರ ಎಂದು ವೈಯಕ್ತಿಕ ಪ್ರಶಸ್ತಿಗಳನ್ನು ಪಡೆದುಕೊಂಡಿರುವರು.

ತಂಡದ ನಾಯಕ ಕೃಷ್ಣಾ ಕೆಂಪಸತ್ತಿ, ಮಲ್ಲಿಕಾರ‍್ಜುನ ಹಿರೇಮಠ, ಶಿವಾನಂದ ಗಾಡವಿ, ಯಲ್ಲಾಲಿಂಗ ಮುಳವಾಡ, ಶಿವುಬಸು ಈಟಿ, ಅಪ್ಪಣ್ಣ ಬಡಿಗೇರ, ಗಿರೀಶ ಆಸಂಗಿ, ಶಿವಬೋಧ ಯರಝರ‍್ವಿ, ಪ್ರಕಾಶ ನೇಸೂರ, ವೆಂಕಟೇಶ ಸೋನವಾಲಕರ, ಪ್ರಶಾಂತ ಬಾಬಣ್ಣವರ, ತಿಮ್ಮಣ್ಣ ಗಿರಡ್ಡಿ, ಲಕ್ಷ್ಮಣ ಕಂಕಣವಾಡಿ, ಈರಣ್ಣ ಕೊಣ್ಣೂರ. ವಿಶಾಲ ಶೀಲವಂತ ಇವರು ಟೂರ‍್ನಿಯಲ್ಲಿ ಉತ್ತಮ ಆಟವನ್ನು ಆಡಿ ತಂಡಕ್ಕೆ ಗೆಲವು ತಂದಿಕೊಟ್ಟಿದ್ದಾರೆ.

 

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group