ಸಿಂದಗಿ; ಭೂಕಂಪ, ನೆರೆಹಾವಳಿ ಮತ್ತು ಜನಸಾಮಾನ್ಯರ ಆರೋಗ್ಯ ಕಾಪಾಡುವಲ್ಲಿ ಅಂತಾರಾಷ್ಟ್ರೀಯ ಲಯನ್ಸ್ ಕ್ಲಬ್ ಕಳೆದ ೧೦೭ ವರ್ಷಗಳಿಂದ ನಿರಂತರವಾಗಿ ತನ್ನ ಕಾರ್ಯ ನಿರ್ವಹಿಸುತ್ತದೆ ಎಂದು ಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್ ೩೧೭ ಬಿ ಯ ಜಿಲ್ಲಾ ಗವರ್ನರ್ ಲಯನ್ ಮನೋಜ ಮಾಣಿಕ ಅವರು ತಮ್ಮ ಅಭಿಪ್ರಾಯ ವ್ಯಕ್ರಪಡಿಸಿದರು.
ಪಟ್ಟಣದ ಪ್ರತಿಷ್ಠಿತ ವಿದ್ಯಾಸಂಸ್ಥೆ ಸಭಾಭವನದಲ್ಲಿ ಮಾತನಾಡಿ, ವಾಡಿಕೆಯಂತೆ ಸಿಂದಗಿಯ ಪಿ.ಇ.ಎಸ್ ಲಯನ್ಸ್ ಕ್ಲಬ್‌ನ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದರು. ೬ ಜನ ಹೊಸ ಸದಸ್ಯರ ಸೇರ್ಪಡೆ ಹಾಗೂ ಪ್ರತಿಜ್ಞಾವಿಧಿ ಸಮಾರಂಭದಲ್ಲಿ ಮಾತನಾಡುತ್ತಾ, ಸರಕಾರ ಸಾರ್ವಜನಿಕರಿಗೆ ಹಲವಾರು ಕಾರ್ಯಕ್ರಮಗಳನ್ನು ಕೈಕೊಳ್ಳುತ್ತಿದ್ದರೂ ಕೂಡಾ ಈ ಲಾಯಿನ್ ಸಂಸೆ, ಆರೋಗ್ಯ ಶಿಬಿರ, ನೇತ್ರ ಚಿಕಿತ್ಸಾ ಶಿಬಿರ, ರಕ್ತದಾನ ಶಿಬಿರ, ಜಾಗತಿಕ ಶಾಂತಿಗಾಗಿ ಪ್ರಯತ್ನಿಸುವದು ಶ್ಲಾಘನೀಯವಾಗಿದೆ ಎಂದು ತಿಳಿಸಿದರು.
ಲಯನ್ಸ್ ಸದಸ್ಯರು ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಸಕ್ರಿಯವಾಗಿ ಭಾಗವಹಿಸಬೇಕೆಂದು ತಿಳಿಸಿದರು. ಪ್ರಿ. ಬಿ.ಎಂ. ಸಿಂಗನಳ್ಳಿ, ಡಾ. ಅಂಬರೀಷ ಬಿರಾದಾರ, ಪ್ರೊ. ಪಿ.ಎಂ. ಮಡಿವಾಳರ, ಪ್ರೊ. ಶಾಂತು ದುರ್ಗಿ, ಪ್ರಿ. ಶರಣಬಸವ ಆರ್. ಬೂದಿಹಾಳ ಹಾಗೂ ಎಸ್.ಎಚ್. ಜಾಧವ ಇವರಿಗೆ ಪ್ರತಿಜ್ಞಾವಿದಿಯನ್ನು ಹಿರಿಯ ಲಯನ್ ಎಸ್.ಎಸ್. ಪಾಟೀಲರವರು ನೆರವೇರಿಸಿದರು.
ಸಿಂದಗಿಯ ಲಯನ್ ಸಂಸ್ಥೆಯ ಅಧ್ಯಕ್ಷ ಮಹಾದೇವ ಲೋಣಿಯವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದು. ಲಯನ್ ಕೆ.ಎಚ್. ಸೋಮಾಪೂರ ಹಾಗೂ ಖಜಾಂಚಿ ಪ್ರಿ. ಬಿ.ಪಿ. ಕರ್ಜಗಿಯವರು ಸಭೆಯಲ್ಲಿ ಭಾಗವಹಿಸಿದ್ದರು.
ಸಮ್ಮುಖ ವಹಿಸಿದ ಹಿರಿಯರಾದ ಪಿ.ಇ.ಎಸ್. ಸಂಸ್ಥೆಯ ಕಾರ್ಯದರ್ಶಿ ಲಾಯಿನ್ ಬಿ.ಪಿ. ಕರ್ಜಗಿಯವರು ಲಯನ್ ಸಂಸ್ಥೆಯ ಕುರಿತು ಮಾತನಾಡಿದರು.
ಲಯನ್ ಸದಸ್ಯರಾದ ಎಸ್. ಬಿ. ಚಾಗಶೆಟ್ಟಿ ಭಾಗವಹಿಸಿದ್ದು, ಅಲ್ಲದೇ ಸಿಂದಗಿ ಲಯನ್ ಸಂಸ್ಥೆಯ ಕಾರ್ಯದರ್ಶಿ ಆಯ್.ಬಿ. ಬಿರಾದಾರ ನಿರೂಪಿಸಿದರು. ಪಿ.ಎಂ. ಮಡಿವಾಳರವರು ವಂದಿಸಿದರು.