ಬೀದರ: ಮದ್ಯ ವ್ಯಸನಿಗಳು ಇಂದು ಮಾದಕ ವಸ್ತುಗಳ ಪೆಡ್ಲರ್‌ಗಳಾಗುತ್ತಿದ್ದಾರೆ ಎಂದು ಬೀದರನ ಅಬಕಾರಿ ಉಪ ಆಯುಕ್ತರಾದ ರವಿಶಂಕರ ಎ. ಕಳವಳ ವ್ಯಪ್ತಪಡಿಸಿದರು.
ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬೀದರ ಹಾಗೂ ಸರ್ಕಾರಿ ಇಂಜಿನಿಯರಿಂಗ್ ಮಹಾವಿದ್ಯಾಲಯ ಬೀದರ ಇವರ ಸಂಯುಕ್ತಾಶ್ರಯದಲ್ಲಿ ಬೀದರ ಸರ್ಕಾರಿ ಇಂಜಿನಿಯರಿಂಗ ಮಹಾವಿದ್ಯಾಲಯ ಆವರಣದಲ್ಲಿ ಹಮ್ಮಿಕೊಂಡಿದ್ದ ವಿಚಾರ ಸಂಕಿರಣ, ಉಪನ್ಯಾಸ ಹಾಗೂ ಬೀದಿನಾಟಕ, ಮದ್ಯಪಾನ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮ ಕುರಿತು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಾನಗರಗಳಲ್ಲಿ ಮೋಜು, ಮಸ್ತಿಗಾಗಿ ಸುಶಿಕ್ಷಿತ ಯುವಕರೆ ಹೆಚ್ಚಾಗಿ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಕೆಟ್ಟ ವ್ಯವಸನಗಳಿಂದ ಇವತ್ತಿನ ಕುಟುಂಬಗಳು ಬೀದಿಗೆ ಬರಲು ಕಾರಣ. ಮದ್ಯಪಾನದಿಂದ ಇಂದಿನ ಯುವಕರು ವ್ಯಸನಗಳಿಗೆ ದಾಸರಾಗದೇ ಒಳ್ಳೆಯ ವಿದ್ಯಾರ್ಥಿಗಳಾಗಬೇಕಾಗಿದೆ.ಮದ್ಯ ಮತ್ತು ಮಾದಕ ವ್ಯಸನಗಳಿಂದ ಉಂಟಾಗುವ ಪರಿಣಾಮಗಳ ಕುರಿತು ಯುವ ಜನತೆಗೆ ತಿಳಿವಳಿಕೆ ಮೂಡಿಸಬೇಕಾಗಿದೆ. ಉತ್ತಮ ಸಮಾಜ ಹಾಗೂ ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಯುವಕರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಬಲಿಷ್ಠವಾಗಬೇಕಿದೆ. ಡ್ರಗ್ಸ್ ಪೆಡ್ಲರ್‌ಗಳು ಡ್ರಗ್ಸ್ ಗಳನ್ನು ದಾಸರಾಗಲು ಪೂರೈಸುತ್ತಿರುವುದು ದೇಶಕ್ಕೆ ದೊಡ್ಡ ಮಾರಕವಾಗಿದೆ ಎಂದರು.
ನ್ಯೂಟೌನ್ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ವಿಜಯಕುಮಾರ ಬಾವಗೆ ಅವರು ಮಾತನಾಡಿ, ಡ್ರಗ್ಸ ಎಂಬ ಶಬ್ದ ಹಿಂದಿನ ಆದಿ ಕಾಲದಿಂದಲೂ ಬಂದಿದ್ದು ಆದರೆ ಅದನ್ನು ಉಪಯೋಗಿಸುವ ವಿಧಾನ ಸರಿ ಇಲ್ಲ, ಈಗಿನ ಯುವಕರು ದುಡಿಯುವ ವರ್ಗದ ಜನರು ಸೇರಿದಂತೆ ಶಿಕ್ಷಣವಂತರೆ ಹೆಚ್ಚು ವ್ಯಸನಿಗಳಾಗುತ್ತಿದ್ದಾರೆ. ಉನ್ನತ ಶಿಕ್ಷಣದ ವಿದ್ಯಾರ್ಥಿಗಳೆ ಮಾದಕ ವ್ಯಸನಗಳಾಗುತ್ತಿದ್ದಾರೆ. ಪೋಷಕರು ಮಕ್ಕಳ ಕಡೆ ಗಮನ ಹರಿಸದೇ ಇರುವುದರಿಂದ ಇಂತಹ ವಿದ್ಯಾರ್ಥಿಗಳು ವ್ಯವಸನಿಗಳಾಗುತ್ತಿದ್ದಾರೆ. ಅಲ್ಲದೆ ಸಹವಾಸ ದೋಷದಿಂದಲೂ ಸಹ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಕುಟುಂಬದ ಒಬ್ಬ ವ್ಯಸನಿಯಿಂದ ಇಡೀ ಕುಟುಂಬ ಹಾಳಾಗುತ್ತದೆ ಎಂಬುದನ್ನು ವಿದ್ಯಾರ್ಥಿಗಳು ಅರಿಯಬೇಕಾಗಿದೆ ಎಂದರು.
ವಚನ ಚಾರಿಟೇಬಲ್ ಸೊಸೈಟಿಯ ನಿರ್ದೇಶಕಿಯಾದ ಲಿಂಗಾರತಿ ಅಲ್ಲಮಪ್ರಭು ನಾವದಗೆರೆ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಒತ್ತಡ ಹಾಗೂ ಸಂಸಾರಿಕ ಜೀವನವನ್ನು ಸರಿದುಗಿಸಿಕೊಂಡು ದಾರ್ಶನಿಕರ ತತ್ವ ಸಿದ್ಧಾಂತಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಒಳ್ಳೆಯ ಸಮಾಜ ನಿರ್ಮಾಣ ಮಾಡಲು ಸಹಕಾರಿಯಾಗಬೇಕೆಂದರು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿಗಳಾದ ಸಂಗಪ್ಪ ಕಾಂಬಳೆ ಮದ್ಯಪಾನ, ತಂಬಾಕು, ಇತರೆ ಮಾದಕ ವಸ್ತುಗಳಿಂದಾಗುವ ಅನೇಕ ರೋಗ ಬಗ್ಗೆ ಉಪನ್ಯಾಸ ನೀಡಿದರು.
ಸರ್ಕಾರಿ ಇಂಜಿನಿಯರಿಂಗ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ದೇವೇಂದ್ರ ಹಂಚೆ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಸುಂದರ ಸಮಾಜ ನಿರ್ಮಾಣಕ್ಕಾಗಿ ಅನೇಕ ಕಾರ್ಯಗಳನ್ನು ಮಾಡುತ್ತಿದ್ದು, ಮದ್ಯಪಾನ ಮತ್ತು ಮಾದಕ ವಸ್ತುಗಳಿಂದ ದುಷ್ಪರಿಣಾಮಗಳ ಕುರಿತು ಆಯೋಜಿಸಿರುವ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷರಾದ ಶಿವಶಂಕರ ಟೋಕರೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಮಂಜುನಾಥ ಸುಳ್ಳೊಳ್ಳಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ನಂದೀಶ್ವರ ನಾಟ್ಯ ಸಂಘ ಚಿಮಕೋಡದ ದೇವಿದಾಸ ಚಿಮಕೋಡ ಸಹ ಕಲಾವಿದರಿಂದ ಜಾಗೃತಿ ನಾಟಕ ಪ್ರದರ್ಶನ ನಡೆಯಿತು.
ಈ ಸಂದರ್ಭದಲ್ಲಿ ಅಬಕಾರಿ ಇಲಾಖೆಯ ವೃತ್ತ ನಿರೀಕ್ಷಕರಾದ ಅನಿಲಕುಮಾರ ಜಿ., ವಾರ್ತಾ ಇಲಾಖೆಯ ವಿಜಯಕೃಷ್ಣ, ಆಶಿಷ ಹಜಾರೆ, ಇಂಜಿನಿಯರಿAಗ ಕಾಲೇಜಿನ ಬೋಧಕ ಸಿಬ್ಬಂದಿಗಳು, ವಿದ್ಯಾರ್ಥಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.
ನಂದಕುಮಾರ ಕರಂಜೆ,ಬೀದರ