spot_img
spot_img

ರಾಜ್ಯದ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಸಾಹಿತ್ಯ ಭವನ ನಿರ್ಮಾಣಕ್ಕೆ ಸಾಹಿತಿ ಡಾ.ಭೇರ್ಯ ರಾಮಕುಮಾರ್ ಒತ್ತಾಯ

Must Read

spot_img
- Advertisement -

ರಾಜ್ಯದ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲೂ ಕನ್ನಡ ಸಾಹಿತ್ಯ ಭವನಗಳನ್ನು ನಿರ್ಮಾಣ ಮಾಡಬೇಕು. ಈ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತು ಕೂಡಲೇ ಕ್ರಮಕೈಗೊಳ್ಳಬೇಕೆಂದು ಹಿರಿಯ ಸಾಹಿತಿ,ಪತ್ರಕರ್ತರಾದ  ಡಾ.ಭೇರ್ಯ ರಾಮಕುಮಾರ್ ಒತ್ತಾಯಿಸಿದರು.

ಹಾಸನದ ಸಾಹಿತ್ಯ ಭವನದಲ್ಲಿ ನಡೆದ ಹಿರಿಯ ಸಾಹಿತಿಗಳಾದ ಡಾ.ಹೆಚ್.ಎ.ಪಾರ್ಶ್ವನಾಥ್ ಅವರ ಧೀಮಂತರು ಕೃತಿ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದ ಅವರು  ಗ್ರಾಮೀಣ ಪ್ರದೇಶಗಳಲ್ಲಿ ಅಸಂಖ್ಯಾತ ಕವಿಗಳು, ಕಲಾವಿದರು, ಸಾಧಕರು ಇದ್ದು, ಅವರಿಗೆ ಉತ್ತಮ ವೇದಿಕೆ ಒದಗಿಸಲು ತಾಲ್ಲೂಕು ಸಾಹಿತ್ಯ ಭವನಗಳ ಅಗತ್ಯವಿದೆ.

ಅದೇ ರೀತಿ  ಆಯಾ ಜಿಲ್ಲಾ ಹಾಗೂ ತಾಲ್ಲೂಕು ಸಾಹಿತ್ಯ ಸಮ್ಮೇಳನಗಳು ನಡೆಯುವ ಸಂದರ್ಭದಲ್ಲಿ ಆಯಾ ಜಿಲ್ಲೆಯ ಹಾಗೂ ತಾಲ್ಲೂಕಿನ ಸಾಧಕರ ಜೀವನ ಹಾಗೂ ಸಾಧನೆಗಳನ್ನು ಕುರಿತು ಸಾಹಿತ್ಯ ಪರಿಷತ್ತು ಕೃತಿಗಳನ್ನು ಪ್ರಕಟಿಸಬೇಕು. ಆ ಮೂಲಕ ಸಾಧಕರ  ಜೀವನ ಹಾಗೂ ಸಾಧನೆಗಳು ಮುಂದಿನ ಪೀಳಿಗೆಯವರಿಗೂ ಆದರ್ಶವಾಗುವಂತೆ ಮಾಡಬೇಕೆಂದವರು ಒತ್ತಾಯಿಸಿದರು.

- Advertisement -

ಸ್ವಾಮಿ ವಿವೇಕಾನಂದರು ಹೇಳಿರುವಂತೆ ಸಮಾಜದಲ್ಲಿ ಇರುವ ಕೆಲವೇ ಮಂದಿ ನಿಸ್ವಾರ್ಥ ಮನೋಭಾವದ ವ್ಯಕ್ತಿಗಳಿಂದ ಸಮಾಜ ಅಭ್ಯುದಯದತ್ತ ಸಾಗುತ್ತದೆ. ಅಂತಹ ವ್ಯಕ್ತಿಗಳೇ ಧೀಮಂತ ವ್ಯಕ್ತಿಗಳು. ಅಂತಹ ಸಾಧಕರ ಜೀವನ ಹಾಗೂ ಸಾಧನೆಗಳನ್ನು ತಮ್ಮ ಧೀಮಂತರು ಕೃತಿಯಲ್ಲಿ ಪ್ರೊ.ಎಚ್.ಎ.ಪಾರ್ಶ್ವನಾಥ್ ಅವರು ಮುಂದಿನ ಪೀಳಿಗೆಯವರಿಗೂ ದಾಖಲು ಮಾಡಿದ್ದಾರೆ.ಇದು ಸ್ತುತ್ಯಾರ್ಹ ಕಾರ್ಯ. ಇಂತಹ ಕೃತಿಗಳು ಸಾವಿರ ಸಂಖ್ಯೆಯಲ್ಲಿ  ಹೊರಬರಲಿ.ಯುವ ಜನಾಂಗಕ್ಕೆ ಮಾರ್ಗದರ್ಶನ ನೀಡಲಿ ಎಂದು ಡಾ.ಭೇರ್ಯ ರಾಮಕುಮಾರ್ ನುಡಿದರು.

ಧೀಮಂತರು ಕೃತಿಯನ್ನು ಲೋಕಾರ್ಪಣೆ ಮಾಡಿದ ಹಾಸನದ ಎ.ವಿ.ಕೆ. ಕಾಲೇಜಿನ ಹಿರಿಯ ಪ್ರಾಧ್ಯಾಪಕರಾದ ಡಾ.ಸೀ.ಚ.ಯತೀಶ್ವರ ಅವರು ಮಾತನಾಡಿ ಡಾ.ಹೆಚ್.ಎ.ಪಾರ್ಶ್ವನಾಥ್ ಅವರು ತಮ್ಮ ಧೀಮಂತರು ಕೃತಿಯಲ್ಲಿ ನಲವತ್ತು ಸಾಧಕರ ಜೀವನ ಹಾಗೂ ಸಾಧನೆಗಳನ್ನು ಸವಿವರವಾಗಿ ನೀಡಿದ್ದಾರೆ. ಹಲವು ಸಾಧಕರು ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಮರೆತು ತಮ್ಮ ಜೀವನವನ್ನೇ ಸೇವೆಗಾಗಿ ಮೀಸಲಿಟ್ಟಿದ್ದಾರೆ.

- Advertisement -

ಸಾಹಿತ್ಯ, ಸಂಘಟನೆ, ಕನ್ನಡಸೇವೆ, ವೈದ್ಯಕೀಯ, ರಂಗಭೂಮಿ, ಕಲೆ, ಸಂಗೀತ ಹೀಗೆ ವಿವಿಧ ರಂಗಗಳ ಮೂಲಕ ಸಮಾಜದ ಅಭ್ಯುದಯಕ್ಕೆ ದುಡಿಯುತ್ತಿರುವ ಸಾಧಕರ ವಿವರ ಧೀಮಂತರು ಕೃತಿಯಲ್ಲಿದೆ.ಸುಮಾರು ನಾಲ್ಕುನೂರ ಐವತ್ತಕ್ಕೂ ಹೆಚ್ಚು ಪುಟಗಳಿರುವ ಈ ಕೃತಿಯನ್ನು ರಚಿಸಲು ಡಾ.ಪಾರ್ಶ್ವನಾಥರು ತಮ್ಮ ಜೀವನದ ಬಹು ಅಮೂಲ್ಯ ಕ್ಷಣಗಳನ್ನು ತ್ಯಾಗ ಮಾಡಿದ್ದಾರೆ.ಅವರ ಶ್ರಮ ಸಾರ್ಥಕವಾಗಿದೆ. ಧೀಮಂತರು ಕೃತಿಯು ಕನ್ನಡ ಸಾಹಿತ್ಯ ರಂಗದಲ್ಲಿ ಒಂದು ಅತ್ಯಮೂಲ್ಯ ಕೃತಿಯಾಗಲಿದೆ ಎಂದು ನುಡಿದರು.

ಧೀಮಂತರು ಕೃತಿಯಲ್ಲಿ ರಾಷ್ಟ್ರಕವಿ ಕುವೆಂಪು ಅವರಿಗೆ ಶ್ರೀ ರಾಮಾಯಣ ದರ್ಶನಂ ಕೃತಿ ರಚಿಸಲು ಪ್ರೇರಣೆ ನೀಡಿದ ಹಿರಿಯ ಸಾಹಿತಿಗಳಾದ  ಟಿ.ಎಸ್.ವೆಂಕಣಯ್ಯ , ಹಾಸನದಲ್ಲಿ ಕನ್ನಡ ಜಾಗೃತಿ ಮೂಡಿಸಿ ಸಾವಿರಾರು ಯುವಜನರಲ್ಲಿ ಕನ್ನಡಚಿಂತನೆ ಮೂಡಿಸಿದ ಪ.ನಾಗರಾಜಯ್ಯ, ಶ್ರೀ ಕ್ಷೇತ್ರ ಧರ್ಮಸ್ಥಳದ ಅಭ್ಯುದಯಕ್ಕೆ ಕಾರಣರಾದ ರತ್ನ ವರ್ಮ ಹೆಗಡೆ,ಹಿರಿಯ ಸಾಹಿತಿಗಳಾದ ಡಾ.ಸಿ.ಪಿ.ಕೆ,ಹಿರಿಯ ರಂಗಕರ್ಮಿಗಳಾದ ಸಂಸ,ಪುಟ್ಟಸ್ವಾಮಯ್ಯ, ಹಾಸನದ ಹಿರಿಯ ಪತ್ರಕರ್ತರಾದ ಡಾ.ಉದಯರವಿ, ಹಿರಿಯ ಸಾಹಿತಿ ಹಾಗೂ ಸಂಘಟಕ ಡಾ.ಭೇರ್ಯ ರಾಮಕುಮಾರ್, ವೈಧ್ಯಕೀಯ ಸಾಹಿತಿ ಡಾ.ಎಸ್.ಪಿ.ಯೋಗಣ್ಣ,ಸಂಘಟಕ ಡಾ.ವೈ.ಡಿ.ರಾಜಣ್ಣ ಮೊದಲಾದವರ ಜೀವನ ಹಾಗೂ ಸಾಧನೆಯ ವಿವರಗಳನ್ನು ಡಾ.ಹೆಚ್.ಎ.ಪಾರ್ಶ್ವನಾಥ್ ಅವರು ತಮ್ಮ ಧೀಮಂತರು ಕೃತಿಯಲ್ಲಿ ಹೃದಯ ಪೂರ್ವಕವಾಗಿ ವಿವರಿಸಿದ್ದಾರೆ.ಇದೊಂದು ಸಂಗ್ರಹ ಯೋಗ್ಯ ಹಾಗೂ ಎಲ್ಲರೂ ಓದಲೇಬೇಕಾದ ಕೃತಿಯಾಗಿದೆ ಎಂದು ಡಾ.ಯತೀಶ್ವರ ಹೇಳಿದರು.

ಹಿರಿಯ ಪತ್ರಕರ್ತರಾದ ಡಾ.ಉದಯರವಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಶಿಕ್ಷಣ ತಜ್ಞರಾದ ತಮ್ಮಣ್ಣೇಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಾಹಿತಿಗಳಾದ ಶ್ರೀಮತಿ ಡಾ.ಶಾಂತಾ ಅತ್ನಿ,ಉಷಾ  ಶ್ರೀನಿವಾಸ್, ಶ್ರೀಮತಿ ವಾಣಿ ಘಟ್ಟ ಮುಖ್ಯ ಅತಿಥಿಗಳಾಗಿದ್ದರು.ಶ್ರೀಮತಿ ನಾಜಿಮಾ ಕಾರ್ಯಕ್ರಮ ನಿರ್ವಹಿಸಿದರು.

ಧೀಮಂತರು ಕೃತಿಯ ಲೇಖಕರಾದ ಡಾ.ಹೆಚ್.ಎ.ಪಾರ್ಶ್ವನಾಥ್ ಅವರು ಮಾತನಾಡಿ ಹಾಸನದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಮಹತ್ವವನ್ನು ವಿವರಿಸಿದರು.ತಾವು ಬಾಲ್ಯದಲ್ಲಿ ಕಂಡ ಹಾಸನದ ಬಗ್ಗೆ ವಿವರಿಸಿದರು.

- Advertisement -
- Advertisement -

Latest News

ವಿಶ್ವ ಶಾಂತಿಗೆ ಕುವೆಂಪು ಚಿಂತನೆಗಳೇ ದಾರಿದೀಪ : ಡಾ. ಭೇರ್ಯ ರಾಮಕುಮಾರ್

ಇಂದು ವಿಶ್ವವನ್ನು ಕಾಡುತ್ತಿರುವ ಹಿಂಸೆ, ಭಯೋತ್ಪಾದನೆ, ಯುದ್ಧಗಳ ನಿವಾರಣೆಗೆ ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ತತ್ವವೊಂದೇ ಪರಿಹಾರ ಎಂದು ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ...
- Advertisement -

More Articles Like This

- Advertisement -
close
error: Content is protected !!
Join WhatsApp Group