ಗದಗ – ಬರುವ ರವಿವಾರ ದಿ. 25 ರಂದು ಸಾಹಿತಿಗಳಿಗಾಗಿ ಕಪ್ಪತಗುಡ್ಡ ಶ್ರೀ ನಂದಿವೇರಿ ಸಂಸ್ಥಾನ ಮಠ ಡೋಣಿ (ಗದಗ ಜಿಲ್ಲೆ) ಹಾಗೂ ಬೆಳಗಾವಿ ಜಿಲ್ಲಾ ಸಾಹಿತ್ಯ ಪರಿಷತ್ ವತಿಯಿಂದ “ಸಾಹಿತ್ಯಾವಲೋಕನ ಮತ್ತು ಚಾರಣ ಸಂಭ್ರಮ” ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.
ಕಾರ್ಯಕ್ರಮ ಜರುಗುವ ಸ್ಥಳ: ಡೋಣಿ ಸಮೀಪದ ಕಪ್ಪತಗುಡ್ಡದ ಮಡಿಲಲ್ಲಿರುವ ಶ್ರೀ ನಂದಿವೇರಿ ಸಂಸ್ಥಾನ ಮಠ
ಬೆಳಗಾವಿ ಜಿಲ್ಲೆಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿರುವ ಶ್ರೀಮತಿ ಮಂಗಲಾ ಮೆಟಗುಡ್ ಹಾಗೂ, ಕಾರ್ಯದರ್ಶಿ ಎಮ್.ವಾಯ್. ಮೆಣಸಿನಕಾಯಿಯವರ ನೇತೃತ್ವದ ಸಾಹಿತಿಗಳ ತಂಡ ಕಪ್ಪತಗುಡ್ಡದ ಮಡಿಲಲ್ಲಿರುವ ಶ್ರೀ ನಂದಿವೇರಿ ಮಠದಿಂದ ಪ್ರಾರಂಭಗೊಳ್ಳುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದೆ.
ಕಪ್ಪತಗುಡ್ಡ ಶ್ರೀ ನಂದಿವೇರಿ ಸಂಸ್ಥಾನ ಮಠದ ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಜರುಗುವ ಕಾರ್ಯಕ್ರಮದ ಉಸ್ತುವಾರಿಯನ್ನು ಶ್ರೀ ಬಾಲಚಂದ್ರ ಜಾಬಶೆಟ್ಟಿ ವಹಿಸಲಿದ್ದಾರೆ.
ಖ್ಯಾತ ಸಾಹಿತಿ ಮತ್ತು ನಿವೃತ್ತ ಪ್ರಾಚಾರ್ಯ ಡಾ. ಶ್ಯಾಮಸುಂದರ ಬಿದರಕುಂದಿಯವರು ಆಶಯನುಡಿಗಳನ್ನಾಡಲಿದ್ದಾರೆ. ಶ್ರೀಮತಿ ಮಂಗಲಾ ಮೆಟಗುಡ್ ಅಧ್ಯಕ್ಷತೆ ವಹಿಸಲಿದ್ದಾರೆ.
ಚಾರಣದೊಂದಿಗೆ ಆರಂಭಗೊಳ್ಳುವ ಕಾರ್ಯಕ್ರಮವು ಸಾಹಿತ್ಯಾವಲೋಕನ, ಚರ್ಚೆ ಸಂವಾದಗಳೊಂದಿಗೆ ಮುಕ್ತಾಯಗೊಳ್ಳುವುದು.
ವಿವಿಧ ಜಿಲ್ಲೆಗಳಿಂದ ಸಾಹಿತ್ಯಾಸಕ್ತರು ಭಾಗವಹಿಸುವ ನಿರೀಕ್ಷೆಯಿದ್ದು, ಭಾಗವಹಿಸಲಿಚ್ಛಿಸುವವರು ಕೂಡಲೆ ತಮ್ಮ ಹೆಸರುಗಳನ್ನು ಶ್ರೀ ಬಾಲಚಂದ್ರ ಜಾಬಶೆಟ್ಟಿಯವರ ಮೋಬೈಲ್ ಸಂಖ್ಯೆ: 9741888365 ಗೆ ವ್ಯಾಟ್ಸಪ್ ಸಂದೇಶ ಕಳುಹಿಸಿ ನೋಂದಾಯಿಸಿಕೊಳ್ಳಲು ಕೋರಿದೆ.
ನಿಮ್ಮ ಹೆಸರು, ಊರು, ವೃತ್ತಿ, ಮೋಬೈಲ್ ಸಂಖ್ಯೆ ಹಾಗೂ ಆಧಾರ ಕಾರ್ಡನ ಛಾಯಾಚಿತ್ರವನ್ನು ಕಳುಹಿಸುವುದು.
ನೋಂದಣಿಗೆ ಯಾವುದೇ ಶುಲ್ಕವಿಲ್ಲ, ಆದರೂ ನೋಂದಣಿ ಕಡ್ಡಾಯ. ಹೆಚ್ಚಿನ ವಿವರಗಳಿಗೆ ಈ ಕೆಳಗಿನವರನ್ನು ಸಂಪರ್ಕಿಸಿರಿ
ಬಾಲಚಂದ್ರ ಜಾಬಶೆಟ್ಟಿ
9741888365