ಯಾವುದೋ ಒಂದನ್ನು ಕೀರ್ತಿ, ಪ್ರಶಸ್ತಿ ಗಾಗಿ ಅರಸಿಕೊಂಡು ಹೋಗಿ ಕಿತ್ತು ಪಡೆಯುವದಕ್ಕೂ ಆ ಒಂದು ಸಾಧನೆಯೇ
ಸಾಧಕನನ್ನು ಅರಸಿಕೊಂಡು ಬರುವುದಕ್ಕೂ ಇರುವ
ಗೌರವ, ನೆಮ್ಮದಿ, ಕೀರ್ತಿಗಳಿಗೇ ಗೌರವ ದೊರೆಯುವುದು ಒಂದು ವಿಶೇಷ.
ಪ್ರಸಕ್ತ ಕೀರ್ತಿ, ಪ್ರಶಸ್ತಿ ಅದು ಅಪರೂಪದ
ವಿಶಿಷ್ಟ ಸಾಧಕರನ್ನು ಅರಸಿ ಕೊಂಡು ಬಂದಿದೆ.
ಇವರಿಗೆ, ಪ್ರಸಿದ್ಧಿ,ಪ್ರಚಾರ, ಮಾಧ್ಯಮಗಳಿಂದ ದೂರವೇ
ಇರಲು ಬಯಸುವ ವ್ಯಕ್ತಿತ್ವ. ಅವರೇ ಧಾರವಾಡದ
ವಿದ್ಯಾಧರ ಕನ್ನಡ ಪ್ರತಿಷ್ಠಾನ ದ ರೂವಾರಿ.ವಿದ್ಯಾಧರ ಮುತಾಲಿಕ ದೇಸಾಯಿ ಯವರು. ಜನಮನದ ಪ್ರೀತಿ ಪಾತ್ರ ಮೌನಿ ಗುರುಗಳು.ಇವರ ಸಾಧನೆಗಳು ತೀರಾ ಸಾಮಾನ್ಯ;
*ವರುಷಕ್ಕೆ ೨-೩ ಸಲ ದಾವಣಗೆರೆಯ ಮಿತ್ರರೋರ್ವರ ಜೊತೆ ಅನ್ನ ದಾಸೋಹ
*ವರುಷಕ್ಕೆ ಕನಿಷ್ಠ ಆರು ಕನ್ನಡ ಮಾಧ್ಯಮ ಶಾಲೆಗಳಿಗೆ
ಪಠ್ಯ,ಪಠ್ಯೇತರ,ಕ್ರೀಡಾಸಾಮಾನು,ಗುರುತಿನ ಚೀಟಿ (ಐಡಿ ಕಾರ್ಡ)ಟೈ,ಬೆಲ್ಟ.ಪೇಪರ್ಸ, ಬರಹದ ವಸ್ತುಗಳು, ಇತ್ಯಾದಿ ಬೇಡಿಕೆಗೆ ತಕ್ಕಂತೆ ತನ್ನ ಇತಿ ಮಿತಿಯಲ್ಲಿ ನೀಡುತ್ತಾ ಬರುತ್ತಿದ್ದಾರೆ.
ಈ ಸಲ ಪಶ್ಚಿಮ ಕ್ವಾಲಿ,ಕುಷ್ಟಗಿ, ಕೂಡ್ಲಿಗಿ, ಮುಧೋಳ, ಮುಂಬಯಿ, ನಂಜನಗೂಡು ಮುಂತಾದ ಶಾಲೆಗಳಿಗೆ
ಈ ಶೈಕ್ಷಣಿಕ ದಾಸೋಹ, ಈ ಅಭಿಯಾನ ದಿನೇ ದಿನೇ ವೃದ್ಧಿಯಾಗುತ್ತದೆ. ಅವರ ಕೆಲವು ವೈಶಿಷ್ಟ್ಯಗಳು:
*ಸ್ವತಃ ಸಾಹಿತಿಗಳು.- ವಿಮರ್ಶಕರೂ ಹೌದು.
*ಹೊಸ ಸಾಹಿತಿಗಳ ನಿರ್ಮಾಪಕರು, ಮಾರ್ಗದರ್ಶಕರು.
*ತೀರಿಕೊಂಡವರ,ಅಪರಿಚಿತರ ಕೃತಿಗಳನ್ನು ಸ್ವಯಂ ಖರ್ಚಿನಿಂದ ಪ್ರಕಟ ಮಾಡಿಸಿ ಕೊಟ್ಟವರು.
*ಅನೇಕರ ಸಾಹಿತ್ಯ ಪ್ರಕಟನೆಗೆ ಆರ್ಥಿಕ ಸಹಾಯ ಮಾಡಿದವರು.
*ವಾರ್ಷಿಕ ಕನ್ನಡ ನುಡಿ ತೇರು ಕನ್ನಡ ವೈವಿಧ್ಯಮಯ ಕಾರ್ಯಕ್ರಮ ಮುಖಾಂತರ ವಿಶಿಷ್ಟ ಹಾಗೂ ಅಪರೂಪದ ಸಾಧಕರನ್ನು ಶೋಧಿಸಿ ಅವರನ್ನು ಮುನ್ನೆಲೆಗೆ ಬರುವಂತೆ ಮಾಡಿ,ಅವರಿಗೆ ಗೌರವ ಸನ್ಮಾನ ಮಾಡುವುದು.
*ಇತರ ಕ್ಷೇತ್ರಗಳಲ್ಲಿನ ಸಾದಕರನ್ನೂ ಗೌರವಿಸುವುದು.
*ಪ್ರತಿಭೆಗಳಿಗೆ ವೇದಿಕೆ ನೀಡುವದು,
*ವಿದ್ಯಾರ್ಥಿ ವ್ಯಕ್ತಿತ್ವ ವಿಕಾಸ,
*ಹೊಸ ಬರಹ ಗಾರರಿಗೆ ಸ್ಪರ್ಧೆ, ಹಸ್ತಪ್ರತಿ ಆಹ್ವಾನಗಳ ಮುಖಾಂತರ ಪ್ರೋತ್ಸಾಹ.
*ಆಸಕ್ತ ಓದುಗರಿಗೆ ಉಚಿತ ಪುಸ್ತಕ ಖರೀದಿಸಿ ತಲುಪಿಸುವ…
ಹೀಗೆ ಅನೇಕ ಸಾಹಿತ್ಯ, ಶೈಕ್ಷಣಿಕ, ಸಾಂಸ್ಕೃತಿಕ,
ಸಮಾಜ ಮುಖಿ ಸೇವೆಯೇ ಇವರ ಗುರಿ ಯಾಗಿದೆ.
ಕನ್ನಡಿಗರಿಗೆ ಕನ್ನಡದ ಯಾವ ಸಂದೇಶವನ್ನೂ ನೀಡದೇ
ಕೇವಲ ಆಚರಣೆಯನ್ನೇ ಇವರ ಕಾಯಕದಲ್ಲಿ ತೋರಿಸುತ್ತಿದ್ದಾರೆ. ಇವುಗಳಿಗೆ ಸದ್ದುಗದ್ದಲ ಬೇಡವೆಂತಲೇ ಇವರು ಮೌನಿ ಎನಿಸಿದ್ದಾರೆ.
*ಇವರ ಹೆಚ್ಚಿನ ಕೃತಿಗಳೆಲ್ಲ ವಿವಿಧ ಪ್ರಶಸ್ತಿ,ಬಹುಮಾನ
ಪಡೆದವು ಗಳೇ ಆಗಿವೆ. ಈ ವರೆಗಿನ ಕನ್ನಡ ಪರ, ಶಿಕ್ಷಣ, ಸಾಹಿತ್ಯ,ಸಮಾಜ ಮುಖಿ ಸೇವೆ ಪರಿಗಣಿಸಿ
ಪ್ರಸ್ತುತ ಪ್ರಕಟಿತ ಕೃತಿಗಳಲ್ಲಿ ಇತ್ತೀಚಿನ ಕಥಾಸಂಕಲನ
ಮೂರು ಪ್ರಶಸ್ತಿ ಪಡೆದ ಕೃತಿ ‘ಹಿಮ್ಮುಖ ಹರಿದ ನದಿ’ ಯನ್ನೂ ಪರಿಗಣಿಸಿ.’ಮಕ್ಕಳ ಸಾಹಿತ್ಯ ಪರಿಷತ್ತು-ಬೆಂಗಳೂರು’ ಇವರು
ರಾಜ್ಯ ಸ್ತರೀಯ “ಕನ್ನಡ ಸಾಹಿತ್ಯ ಐಕಾನ್” -೨೦೨೪ ರ ಪ್ರಶಸ್ತಿ ನೀಡಿದ್ದಾರೆ.
`ಸಾಹಿತ್ಯ ಐಕಾನ್’ ಪ್ರಶಸ್ತಿಗೆ ಆಯ್ಕಾದ ವಿವರ:
ಕರ‍್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಬೆಂಗಳೂರು ನಗರ ಘಟಕದಿಂದ ಕೊಡಮಾಡುವ `ಕನ್ನಡ ಸಾಹಿತ್ಯ ಐಕಾನ್ ಪ್ರಶಸ್ತಿ- ೨೦೨೪’ ಗೆ ಮಕ್ಕಳ ಸಾಹಿತ್ಯ ಕ್ಷೇತ್ರ ಮೊದಲಗೊಂಡು ಐದು ಜನ ಸಾಹಿತಿಗಳನ್ನು ಅವರ ಪ್ರಮುಖ ಪುಸ್ತಕಗಳನ್ನೂ ಆಯ್ಕೆ ಮಾಡಲಾಗಿದೆ.
ಧಾರವಾಡದ ಹಿರಿಯ ಸಾಹಿತಿ ವಿದ್ಯಾಧರ ದೇಸಾಯಿ ಮುತಾಲಿಕ (ಹಿಮ್ಮುಖ ಹರಿದ ನದಿ), ಶಿವಮೊಗ್ಗದ ಮತ್ತೂರು ಸುಬ್ಬಣ್ಣ (ಅಂಶು ಮತ್ತು ರೋಬೋ ಕಥೆಗಳು), ಕಲಬುರಗಿಯ ಮಹಿಪಾಲರೆಡ್ಡಿ ಮುನ್ನೂರ್ (ಬಿಸಿಲನಾಡಿನ ಬೆಳದಿಂಗಳು), ಬೆಂಗಳೂರಿನ ಶ್ರೀಮತಿ ಆರ್.ಹಂಸಾ ನಾಜರೆ (ಮಂಗನ ಮಾತು ಕಾಕರಾಜನ ಪ್ರತಿಭಟನೆ) ಮತ್ತು ಗದಗ ಡಾ.ತಯಬಅಲಿ ಅ. ಹೊಂಬಳ (ಚಿನ್ನ ಎಂದೂ ನಗುತಿರು) ಅವರಿಗೆ ಪ್ರಶಸ್ತಿ ಲಭಿಸಿದೆ ಎಂದು ಮಕ್ಕಳ ಸಾಹಿತ್ಯ ಪರಿಷತ್ತಿನ ಬೆಂಗಳೂರು ಘಟಕದ ಅಧ್ಯಕ್ಷ ಡಾ. ಬೋಪಾಳಂ ಸುನೀಲ ಮತ್ತು ಪ್ರಧಾನ ಕಾರ್ಯದರ್ಶಿ ಡಾ. ಮಲಕಪ್ಪ ಅಲಿಯಾಸ್ ಮಹೇಶ್ ತಿಳಿಸಿದ್ದಾರೆ.
ಜುಲೈ ೨೧ ರಂದು ಬೆಳಿಗ್ಗೆ ೧೦.೩೦ ಕ್ಕೆ ಬೆಂಗಳೂರಿನ ವಿಧಾನಸೌಧ ಎದುರಿಗಿರುವ ಸೆಂಚೂರಿ ಕ್ಲಬ್ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಆಯ್ಕೆ ಸಮಿತಿಯಲ್ಲಿದ್ದ ಡಾ. ಮೈಥಿಲಿ ಪಿ. ರಾವ್, ಎಸ್.ಆರ್.ಸುಳಕೂಡೆ, ರಮೇಶ್ ಬೊಂಗಾಳೆ, ಡಾ. ಮಲಕಪ್ಪ ಅಲಿಯಾಸ್ ಮಹೇಶ ಮತ್ತು ಶಿವಾನಂದ ಬಾಗಯ್ ಅವರುಗಳು ಆಯ್ಕೆ ಪ್ರಕ್ರಿಯೆಯಲ್ಲಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಿದ್ಯಾಧರ ಮುತಾಲಿಕ ದೇಸಾಯಿ ಇವರಿಗೆ ವಿದ್ಯಾಧರ ಕನ್ನಡ ಪ್ರತಿಷ್ಠಾನದ ಪರಿವಾರ ಅಭಿನಂದನೆ ಸಲ್ಲಿಸಿದೆ.